ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ] ನೇಮಣ್ಣ. 281

                               ನೇಮಣ್ಣ, 1559 

ಇವನು ಜ್ಞಾನಭಾಸ್ಕರಚರಿತೆಯನ್ನು ಬರೆದಿದ್ದಾನೆ. ಈತನು ಜೈನ ಕವಿ; ಸಮಡೊಳ್ಳಿಪುರದ ಆದಿಜಿನಾಲಯದ ಗುರುವೆನಿಸಿದ ಜಿನಸೇನನ ಶಿಷ್ಯನಾದ ಶೀಲಾಬ್ಧಿಯ ಶಿಷ್ಯನು; ತುಳುರಾಜ್ಯದೊಳಗಣ ಬಿದುರೆಯ ಹಿರಿಯ ಬಸ್ತಿಯನುದ್ಧರಿಸಿದ ಶ್ರಾವಕರೊಳು ಜಿನದೀಕ್ಷೆಯನ್ನು ಧರಿಸಿದಂತೆ ಹೇಳು ತಾನೆ. ಗ್ರಂಥನಿರ್ಮಾಣಕಾಲವು ಶಕ 1482 ಸಿದ್ಧಾರ್ಥಿ-ಎಂದರೆ 1559 ಎಂದು ಗ್ರಂಥದ ಕೊನೆಯಲ್ಲಿ ಉಕ್ತವಾಗಿದೆ. ಇವನ ಗ್ರಂಥ

                         ಜ್ಞಾನಭಾಸ್ಕರಚರಿತೆ. 

ಇದು ಸಾಂಗತ್ಯದಲ್ಲಿ ಬರೆದಿದೆ; ಪದ್ಯ 133. ಇದರಲ್ಲಿ ಅಧ್ಯಾತ್ಮ ಶಾಸ್ತ್ರ ಪಠನವೂ ಧ್ಯಾನವೂ ಮೋಕ್ಷಕ್ಕೆ ಮುಖ್ಯಸಾಧನಗಳೆಂದೂ ಕಾಯಕ್ಲೇ ಕವೂ ಬಾಹ್ಯವೇಪವೂ ಅಷ್ಟು ಪ್ರಯೋಜನಕಾರಿಯಲ್ಲವೆಂದೂ ಪ್ರತಿಪಾದಿ ಸಿದೆ. ಗ್ರಂಥಾವತಾರದಲ್ಲಿ ನಿಜಾತ್ಮನ ವಂದನೆಯೂ ಗುಣಸ್ಮರಣವೂ ಇವೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ- ದುರಿತವೆಂದೆಂಬ ಮಹಾಂಧಕಾರಕೆ ಜ್ಞಾನ | ದುರುರವಿಕಿರಣದುದಯವು | ಪರಮಾತ್ಮನೆಂಬುದಯಾದ್ರಿಯೊಳುದಯಿಸೆ | ನಿರುಪಮಸುಖವಕುವಾಗ | ತನುವೆಂಬ ಕೆಸೆಯೊಳು ಲೋಕವ ಬೆಳಗುವ | ಚಿನ್ಮಯರತ್ನ ವಂಟದನು | ತನುವ ಬತ್ತಿಸಿಯಾರತ್ನ ವ ತೆಗೆವಂತೆ | ಬೆನಮಾರ್ಗದ ತಪಶ್ವರಣ | ಒಳಗೆ ಕತ್ತಲೆ ಮತ್ತೆ ಹೊಲಿಗೆ ಬತ್ತಲೆಯವ | ರಿಳೆಗೆ ಗುರುಗಳು ಜಡರಿಗೆ || ಒಳಗೆ ಸಂಯಕ್ತ್ವದೊಡನೆ ಭೋಗವಿದ್ದರು | ಒಡಲದ ಗುರು ಜ್ಞಾನಿಗಳಿಗೆ || ಹದಿನಾಲ್ಕುಸೊನ್ನೆಯ ಬರೆದೊಂದನಿಕ್ಕಿದ | ಡದು ಕೋಟಿಕೋಟಿಗಳಹುದು | ಅದನೊಳಗೇನುಲೆಕ್ಕಗಳಿಲ್ಲದಿದ್ದರೆ | ಯದುನಿರಕ್ಷರಿಕರ್ಗೆ ಚಂದ | ವ್ರತಗುಣಶೀಲತಪಸು ಶಾಸ್ತ್ರಗಳೆಲ್ಲ | ಕ್ಷಿತಿಯೊಳು ಸೊನ್ನೆಗಳಂತೆ | ಅತಿಶಯದಾತ್ಮಭಾವನೆ ಲೆಕ್ಕದಂತೆಯೆಂ | ದತಿಸುಜ್ಞಾನಿಗಳು ಹೇಳಿವರು ||

             ವಿರಕ್ತತೋಂಟದಾರ, ಸು. 1560 

ಈತನು ಸಿದ್ಧೇಶ್ವರಪುರಾಣ, ಪಾಲ್ಕುರಿಕೆಸೋಮೇಶ್ವರಪುರಾಣ, ಕ ರ್ಣಾಟಕಶಬ್ದ ಮಂಜರಿ, ಮನೋವಿಜಯತಾಕ್ಷರ, ಮಗ್ಗೆ ಯಮಾಯಿದೇವ 36