ಶತಮಾನ ವಿರಕ್ತತೋಂಟದಾಗ್ಯ. 288 ಮಲ್ಲಿಗೆಯರಲ್ಲೊ೦ಗಲುವ ತಳೆರ್ತು ಚಿಗುರ್ತ ಕಂ | ಕೆಲ್ಲಿ ತಾವರೆಗೊಳಂ ಮಾವಿನಳಗೊಂಬೇ ಅರಿ | ಪಲ್ಲವವ ಕರ್ದುಕಿ ತಣಿಗೊಂಡು ನಲವಿಂ ಕೂಗುತಿರ್ಪ ಪೆಸ್ಕೊಗಿಲೆಗಳ ) ಮೆಲ್ಲುಲಿ ಸುಗಾನರಸದಿಂಪು ಪೊಸಜವ್ವನದ | ಜಿಲ್ಲೆ ಗಂಗಳ ಕಾಂತೆಯರ ಲಲ್ಲೆ ವಾತುಗಳಿ | ವೆಲ್ಲ ಸರಿಯಲ್ಲೆಂದು ಸೋಲಿಸಿ ವಿರಾಜಿಸುತ್ತಿ ರ್ಪದೀಕಾವ್ಯದ ರಸಂ | ಲಿಂಗತ್ರಯದೊಳೆ ಕಾಲಂಗಳಂ ಮೂಂನ | ದಂಗವಿಸಿ ಸಕಲಕ್ಕಿಂಯಾವಿಭಕ್ತಿಗಳಿಂದೆ | ಸಾಂಗವಹ ಶಿವನಾಮಸಂಹಿತಾಭಾವದಿಂ ಸದ್ದು ಣಾಲಂಕಾರದಿಂ || ಪಿಂಗದಾನಂದರಸದಿಂದುಕ್ಕಿಯವ್ಯಯದ | ದಂಗಳಿ೦ದಿರ್ಸಮವೀರಮಾಹೇಶ್ವರನ | ಪಾಂಗುವಡೆದೀಕೃತಿ ವಿರಾಜಿಸುತ್ತಿರ್ಪುದು ಜಗಂಗಳೊಳ್ ಚೆಲ್ವಿನಿಂದೆ || ಗ್ರಂಥಾವತಾರದಲ್ಲಿ ನಿರಂಜನಲಿಂಗಸ್ತುತಿ ಇದೆ. ಬಳಿಕ ಕವಿ ಪಾ ರ್ವತಿ, ವೀರಭದ್ರ, ಷಣ್ಮುಖ, ಗಣೇಶ ಇವರನ್ನು ಹೊಗಳ ಅನಂತರ ಬಸವನಿಂದ ಗೂಳೂರಸಿದ್ದ ವೀರೇಶನವರೆಗೆ ಗುರುಗಳನ್ನು ಸ್ಮರಿಸಿದ್ದಾನೆ. ಈ ಗ್ರಂಥದಿಂದ ಕೆಲವು ಸದ್ಯಗಳನ್ನು ತೆಗೆದು ಬರೆಯುತ್ತೇವೆ ಕೈಲಾಸ ಅದs ನಲ್ಲಿ ಶಂಕರನ ಬೆಳ್ಳಗೆ ಸರ್ಬಿ | ದುದೊ ಶರತ್ಕಾಲದಿಂದುವಿನ ರುಚಿಯೊಟ್ಟೆ ಸಿ | ದುರೊ ವಿಯನ್ನ ದಿಯಂಬು ಗಟ್ಟಿಯಾದುದೊ ಪಾರಿಜಾತದ್ರುಮಂ ಪೂತುದೋ || ಸುಧೆ ಬಲಿದು ಹೆಬ್ಬಾದುದೋ ಹಿಮಂ ರಾಶಿಯಾ | ದುದೊ ಎನಲ್ ಪ್ರಜ್ವಲಿಸಿ ತೋಯಿತಿರ್ದುದು ಪಂಚ | ವದನನ ನಿವಾಸ ಪುಣ್ಯದ ಕೋಶವೆನಿಪ ಕೈಲಾಸಂ ಕಲಾವಿಲಾಸಂ || 1, 97ನೆಯ ಪುಟವನ್ನು ನೋಡಿ, 2 ಬಸವ, ಬೆನ್ನ ಬಸವ, ಅಲ್ಲಮ, ಸಿದ್ದ ರಾಮ, ಘಟ್ಟಿವಾಳ, ಮಹಾದೇವಿ, ದಸರ, ಮೋಳಿಗೆಯವಾರ, ಮುಸುಟೆಯಷ ವುಂಡ, ಸಪ್ಪೆಯಯತೀಶ, ತೋಂಟದಾರರ ಶಿಷ್ಯ ಬೋಳಬಸವ, ಗುರಸಿದ್ಧ ವಿರೇಶ.
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೬೮
ಗೋಚರ