ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶತಮಾನ] ‌‌‌‌‌ ಮುರಿಗೆದೇಶಿಕೇಂದ್ರ. 493

                    ಶಂಖ 

ಪಲಬರ್ಗಂ ಸೆಱೆವೋದರೆನ್ನ ಕುಲದೊಳ್ ಪುಟ್ಟಿರ್ದವರ್ ಬಿಟ್ಟು ತಾಯ್ | ನೆಲೆಗೆಟ್ಟಳ್ ಕಡುಸುಟ್ಟು ಕೆಟ್ಟನಳಿಯಂ ಬಾಯಿಕ್ಕಿ ಕೂಗಿಕ್ಕುವಾ | ತಲೆಮೂಗಿಲ್ಲದ ಬಂಧುವಂತನುಱೆಟ ವೈಕುಂರಂಗೆ ನಂಟಾಗಿಯುಂ | ಸಲೆ ಕೆಟ್ಟಿಂ ಪೊರೆ ಶಂಭು ಎಂಬ ತೆಱದಿಂ ಶಂಖಾರವಂ ರಾಜೆಕುಂ |

                    ಹಮ್ಮೀರ 

ನತರಾಗದಹಿತರಾಜ | ರ್ಗತಿಭೀಕರಪುಂಡರೀಕನಿಳಯಮನೀವಂ | ನತರಾಗದ ಹಿತರಾಜ | ರ್ಗ ತಿಭಾಸುರಪುಂಡರೀಕನಿಕರಮನೀವಂ | ರಾಜಕಳಾಲಂಕಾರo | ನೈಜೇಂದ್ರಿಯ‌ಸರಸಧವಳವರ್ಣಿತಮೋಹಂ | ಭ್ರಾಜಿತಮತಿಹಿತಪದಸಂ | ಯೋಜಿತಸಿದ್ಧಾಂತಸಾರಕೌಮುದಿರಾಗಂ ||

                               ಚತುರ್ವಿಧಾರ್ಧ೦ ||
                    ಪಿಶುನ 

ವೊಗರಿಂಪುನುಣ್ಣು ಪೆಂಪಿನ | ಸೊಗಸಿನ ರಸಭಾವಚಿತ್ರಸದಲಂಶಾರ | ದಿಗೆ ಸಲ್ವ ಚೆಲ್ವ ಕಾವ್ಯದ | ಬಗೆಯಱುಯದ ಪುಚ್ಚುಗುನ್ನಿ ಕೂಗಿದೊಡಳ್ಕೇ ||

             ಮಹಾಂತಸ್ವಾಮಿ ಸು 1560. 
   ಈತನು ಮುರಿಗೆಯ ಶಾಂತವೀರನ (ಸು. 1530) ಸ್ತುತಿರೂಪವಾದ ಒಂದು ಪಟ್ವದೀಗ್ರಂಧವನ್ನು ಬರೆದಿದ್ದಾನೆ. ಇದಕ್ಕೆ ನಾಂದ್ಯ ಎಂಬ ಹೆಸರು ಹೇಳಿದೆ. ಇವನು ವೀರಶೈವಕವಿ ; ಇವನಿಗೆ ಮಹಾಂತಯ್ಯ, ಮುರಿಗೆ ಯಸ್ವಾಮಿ ಎಂಬ ಹೆಸರುಗಳೂ ಹೇಳಿವೆ, ಇವನು ಮುರಿಗೆಯತಾಂತವೀ ರನ ಕಾಲವಾದಮೇಲೆ ಆ ಮಠಕ್ಕೆ ಸ್ವಾಮಿಯಾಗಿದ್ದಂತೆ ತೋರುವುದರಿಂದ ಇವನ ಕಾಲವು ಸುಮಾರು 1560 ಆಗಿರಬಹುದೆಂದು ಊಹಿಸುತ್ತೇವೆ.
   ಈತನ ನಾಂದ್ಯವು ಬಾಮಿನೀಷಟ್ವದಿಯಲ್ಲಿ ಬರೆದಿದೆ ; ಪದ್ಯ 25. ಇವು ಸಂಧಿಗಳ ಮೊದಲನೆಯ ನಾಂದೀಪದ್ಯಗಳಾಗಿರಬಹುದೋ ಏನೋ ತಿಳಿಯದು. ಒಂದು ಪದ್ಯವನ್ನು ಉದಾಹರಿಸುತ್ತೇವೆ-
   ಸಿದ್ದಲಿಂಗನ ಕರುಣಶೇಷಂ | ಸಿದ್ಧಿಸಿದ ನಿಜಬೋಳಒಸವನ | 
   ಶುದ್ಧಮಾದ ಪ್ರಸಾದಸೇವನೆಯಿಂದ ಬೆಳೆದಿರ್ದ | 
   ಉದ್ದವಾದಾಗುರುವಿನಿಂ ಸಲೆ | ಸಿದ್ದಕಟ್ಟಿಗೆ ಹಳ್ಳಿ ದೇವನ | 
   ಶುದ್ಧ ಜ್ಞಾನದಿ ಬೆಳೆದ ಮುರಿಗೆಯದೇವ ಪಾಲಿಪುದು ||