ಈ ಪುಟವನ್ನು ಪರಿಶೀಲಿಸಲಾಗಿದೆ
291 ಕರ್ಣಾಟಕ ಕವಿಚರಿತೆ. [16 ನೆಯ
“ ಮುರಿಗೆಯ ಸ್ವಾಮಿಗಳು ನಿರೂಪಿಸಿದ ನಾಂದ್ಯ ” ಎಂದು ನಾನಾ ಷಟ್ಪದಿ ಗಳಲ್ಲಿ ಬರೆದಿರುವ ಶಿವಸ್ತುತಿರೂಪವಾದ 24 ಪದ್ಯಗಳುಳ್ಳ ಒಂದು ಗ್ರಂಥವಿದೆ. ಇದೂ ಏತತ್ಕವಿಕೃತವಾಗಿರಬಹುದು. ಇದರಿಂದ ಒಂದು ಪದ್ಯವನ್ನು ತೆಗೆದು ಬರೆಯುತ್ತೇವೆ. ಬೊಮ್ಮಂ ತಿಮ್ಮಂ ಹಮ್ಮಿನದೇವಂ | ತಮ್ಮಂ ಪುಟ್ಟಿ ಸಿದಭವನ ಬರವಂ | ಗಮ್ಮನೆ ಪಡೆದುಱೆ ಪುಟ್ಟಂ ಪೊರೆಯಂ ಕೇಡಂ ಮಾಡುವರಾ || ಬೊಮ್ಮಂ ತಿಮ್ಮಂ ದಮ್ಮಂ ದಕ್ಷಂ| ಕಮ್ಮಂಗಣೆಯಂ ಮೊದಲಾದುಗ್ಗಡ | ಹೆಮ್ಮೆಯದೇವರ್ ಬಿಮ್ಮು ೞುದೞುದರ್ ನಿಮ್ಮಿಂದಸಮಾಕ್ಷಾ ! --------- ಕಂಪಿ ನಂಜಯ್ಯ. ಸು. 1560 ಈತನು ಮುರಿಗೆಯಶಾಂತವೀರನ (ಸು 1530) ಸ್ತುತಿರೂಪವಾದ ನಾಂದ್ಯವೆಂಬ ಒಂದು ಷಟ್ಪದೀಗ್ರಂಥವನ್ನು ಬರೆದಿದ್ದಾನೆ. ಇದು ವಾರ್ಧಕ ಷಟ್ಪದಿಯಲ್ಲಿ ಬರೆದಿದೆ; ಪದ್ಯ 24. ಇದಕ್ಕೆ ಮುರಿಗೆಯಸ್ವಾಮಿಗಳ ಸ್ತೋತ್ರ ದ ನಾಂದ್ಯ ಎಂಬ ಹೆಸರು ಹೇಳಿದೆ. ಈತನು ವೀರಶೈವಕವಿ; ಮುರಿಗೆಯ ಶಾಂತವೀರನ ಶಿಷ್ಯನಾಗಿದ್ದಂತೆ ತೋರುತ್ತದೆ, --------- ಚೆನ್ನಮಲ್ಲಿಕಾರ್ಜುನ, ಸು 1560 ಈತನು ಶಿವಮಹಿಮಾಶತಕ, ಗುರುಸ್ತೋತ್ರದ ಟೀಕೆ ಇವುಗಳನ್ನು ಬರೆದಿದ್ದಾನೆ.ಇವನುವೀರಶೈವಕವಿ."ಶ್ರೀವೀರಮಾಹೇಶ್ವರಾಂಘ್ರಿಸರೋ ಜಾತಮರಂದಸಾನಮುದಿತೇಂದಿಂದಿರ,ವಿದ್ವತ್ಕವಿ, ಸ್ವಯಶೋಜಿತಮಲ್ಲಿ
ಕಾರ್ಜುನ, ಪರಿಹೃತಸರಮತ” ಎಂದು ತನ್ನನ್ನು ವಿಶೇಷಿಸಿ ಹೇಳಿಕೊಂಡಿ ದ್ದಾನೆ. ಇವನ ಗುರು ಶಾಂತಲಿಂಗ. ಇವನು ಸುಮಾರು 1560 ರಲ್ಲಿ ಇದ್ದಿರಬಹುದೆಂದು ತೋರುತ್ತದೆ.
ಇವನ ಗ್ರಂಥಗಳಲ್ಲಿ 1 ಶಿವಮಹಿಮಾಶತಕ ಇದರಲ್ಲಿ 113 ವೃತ್ತಗಳೂ 2 ಕಂದಗಳೂ ಇವೆ; ಪ್ರತಿವೃತ್ತವೂ ಶ್ರೀಚೆನ್ನಮಲ್ಲೇಶ್ವರ ಎಂದು ಮುಗಿಯುತ್ತದೆ. ಇದು ಶಿವಪಾರಮ್ಯವನ್ನು