ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶತಮಾನ] ಚೆನ್ನಮಲ್ಲಿಕಾರ್ಜುನ. 295

ಪ್ರತಿಪಾದಿಸುವ ಗ್ರಂಥ. ಇದಕ್ಕೆ ಚೆನ್ನಮಲ್ಲೇಶ್ವರಶತಕ ಎಂಬ ಹೆಸರೂ ಉಂಟು. ಇದು ಶ್ರುತಿಸೂಕ್ತಿರತ್ನಮಾಲಾಸ್ತುತಿ, ವೇದಾಂತಸಾರಾರ್ಥದಿಂ ದೆಸೆದಿರ್ಪ ಶತಕಂ ಎಂದು ಕವಿ ಹೇಳುತ್ತಾನೆ. ಅಲ್ಲದೆ ಇದರ ವಿಷಯ    ವಾಗಿ ಹೀಗೆ ಬರೆದಿದ್ದಾನೆ--
     ಶಿವಮಹಿಮಾಶತಕಂ ವೈ | ಷ್ಲ ವವಾಗದ್ವೈ ತಿಕರ್ಮಿಗಳ ಹೃಚ್ಛಲ್ಯಂ |     ಪ್ರವರಶಿವಭಕ್ತ ಪರಿಷ | ದ್ಛವನದೊಳಿದು ಬೆಳಪ ರತ್ನ ದೀಪಿಕೆಯೆನಿಕುಂ ||

ಗ್ರಂಧಾವತಾರದಲ್ಲಿ ಶಿವಸ್ತುತಿ ಇದೆ. ಈ ಶತಕದಿಂದ ಕೆಲವು ಪದ್ಯ ಗಳನ್ನು ತೆಗೆದು ಬರೆಯುತ್ತೇವೆ____ ಹರಿಯಂ ಕಱ್ರನೆ ಕಂದಿಸುತ್ತೆ ವಿಧಿಯಂ ನಿತ್ರಾಣಿಯಂ ಮಾಡಿ ದಿ | ಗ್ವರರಂ ಬೆಂಬಿಡದಟ್ಟಿ ಮುಟ್ಟಿ ಸುಡುತುಂ ಚಂದ್ರಾರ್ಕಮುಖ್ಯಾಮರಾ | ಸುರರಂ ತುತ್ತುತೆ ಬರ್ಪ ಘೋರವಿಷಮಂ ಕಂರಾಗ್ರದೊಳ್ ತಾಳ್ದ ಶಂ | ಕರ ನೀನೊಪ್ಪಿರೆ ಬೇಱೆದೇವರೊಳರೇ ಶ್ರೀಚೆನ್ನಮಲ್ಲೇಶ್ವರಾ || ಕೆಲಬರ್‌ ಕರ್ಮವೆ ಕರ್ತೃವೆಂದು ನುಡಿವರ್‌ ಕಳ್ದಿರ್ಪ ಕಳ್ಳಂಗೆ ಸಂ | ಕಲೆಯಂ ಬಂಧಿಸುತಿರ್ಪುದೇಂ ಕಳವೊ ಆಜ್ಞಾಕರ್ತೃ ಬೇಱೊರ್ವನೋ ||ಫಲಮಂ ಕರ್ಮಿಗೆ ಜಾಡ್ಯ ಕರ್ಮ ಮದು ತಾನೇನೀವುದೇ ದೇವ ನಿ | ನ್ನೊ ಲವಿಂದಲ್ಲದೆ ತತ್ಫಲಂ ಲಭಿಪುದೇ ಶ್ರೀಚೆನ್ನಮಲ್ಲೇಶ್ವರಾ || ಅನಲಂ ತಮ್ಮಯ ದೇವರೆಂದು ಭಜಿಪರ್ ನಿಚ್ಚಂ ದ್ವಿಜರ್ಕಳ್ ನಿಕೇ | ತನಮಂ ತಾನದು ದಳ್ಳಿ ಸುತ್ತೆ ಸುಡಲಯ್ಯೋ ಕೆಟ್ಟೆವೆಂದಂತದಂ || ಕನಲುತ್ತಾಗಳೆ ಕೂಡೆ ನಂದಿಸುತೆ ದೈವದ್ರೋಹಮಂ ಮಾೞ್ಪರಾ | ಬಿನುಗಗ್ಗೆ ೯ತ್ತಣ ಭಕ್ತಿಭಾವನಿಯಮಂ ಶ್ರೀಚೆನ್ನಮಲ್ಲೇಶ್ವರಾ ||

                               2 ಗರುಸ್ತೋತ್ರದ ಟೀಕೆ 
           ಮೂಲಗ್ರಂಥವಾದ ಗುರುಸ್ತೋತ್ರವು ಶೀಲವಂತಯ್ಯನಿಂದ (ಸು,  1160) ರಚಿತವಾದುದು.ಇದಕ್ಕೆ ಆತ್ಮಲಿಂಗಪ್ರಣವಸಂಯೋಗಸ್ಥಲದ ತಿವಿಧಿ ಎಂದೂ ಹೆಸರುಂಟು. ಈ ಟೀಕೆಯನ್ನು “ಗುರುಶಾಂತಲಿಂಗನಡಿ ದಾವರೆಯ ಶಿರಸಾವಹಿಸಿಯುಸಿರ್ದೆಂ” ಎಂದು ಕವಿ ಹೇಳುತ್ತಾನೆ. ಈ ಶಾಂತಲಿಂಗನನ್ನು ಹೀಗೆ ಸ್ತುತಿಸಿದ್ದಾನೆ---
  ———————— ————————— —————— —————
       I Vol,  I,  I58.