ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

296 ಕರ್ಣಾಟಕ ಕವಿಚರಿತೆ. [16 ನೆಯ ಅಂದಿನ ಹರಗುರುವಾಕ್ಯದ | ಹೊಂದಿದ ಶಿವಯೋಗಸಾರವಾತುಲತಂತ್ರಂ| ಕಂದಪದಗ್ರಂಧಶ್ರುತಿವೃ | ತ್ತಂಗಳ ಗುರುಶಾಂತಲಿಂಗ ತಾನಱಿದಿರ್ಕು೦ ||

      ಕೊನೆಯಲ್ಲಿ ಈ ತ್ರಿಪದಿ ಇದೆ... 
 ಎಲ್ಲಾ ಪುರಾತನರ ಮೆಲ್ಲಡಿಯ ನಿಜಹೃದಯ |                                 
 ದಲ್ಲಿ ತಳೆದಗಲದಿರು ಮಗನೆ ಎಂದು ಚೆನ್ನ | 
 ಮಲ್ಲನನು ಸಲಹಿದಿರಿ ಗುರುವೆ ||
                                              ———
                                            ಶಾಂತೇಶ. 1561 
        ಈತನು ತೋಂಟದಸಿದ್ಧೇಶ್ವರನ ಪುರಾಣವನ್ನು ಬರೆದಿದ್ದಾನೆ. ಇವ ನು ವೀರಶೈವಕವಿ, ಅಮರಗುಂಡದ ಮಲ್ಲಿಕಾರ್ಜುನನಾಜ್ಞೆಯಿಂ ಶೂಲನು ನಡರಿದ ಗುರುಭಕ್ತನನ್ವಯದೆ ಹುಟ್ಟಿ ವಾತೂಲಕ್ಕೆ ಟೀಕಂ ಬರೆದು ಗಣ ಭಾಷ್ಯರತ್ನಮಾಲೆಯಂ ರಚಿಸಿದ ಗುಬ್ಬಿಯ ಮಲ್ಲಣ್ಣನ(ಸು. 1475) ಪೌತ್ರ ನಾದ ಸಂಸ್ಕೃತಕರ್ಣಾಟಾದಿಶಾಸ್ತ್ರಜ್ಞನಾದ ಬಸವಪೌರಾಣದ ಮಲ್ಲಣಾ 

ರ್ಯನ(1513) ಮಗನು. ಈ ಮಲ್ಲಣ್ಣನು “ವಿಮಲಗುರು ತೋಂಟದಾರ್ಯನ (ಸು. 1470) ಪದಕಮಲಸಟ್ಚರಣ” ಎಂದು ಕವಿ ಹೇಳುತ್ತಾನೆ. ಈ ಮಲ್ಲ ಣ್ಣನಿಗೆ ಗುರುಭಕ್ತ ಎಂಬ ಮಗನು ಇದ್ದನೆಂದೂ ಇವನ ಮಗನೇ ಬಸ ವಪೌರಾಣದ ಮಲ್ಲಣಾರ್ಯನೆಂದೂ ವೀರಶೈವಾಮೃತಪುರಾಣದಿಂದ (1530) ತಿಳಿಯುತ್ತದೆ. ಶಾಂತೇಶನಿಗೆ ಶಾಂತದೇಶಿಕ ಎಂಬ ಹೆಸರೂ ಉಂಟು. ಇವನ ಗುರು ಗಣೇಶ್ವರ, ತನ್ನ ಗ್ರಂಥವನ್ನು

“ಪಚ್ಚೆಯಕಂತೆಯಾರ್ಯನ ಕರಕಮಲದೊಳ್ ಜನಿಸಿ        ತೋಂಟದಸಿದ್ಧ ಲಿಂಗನಂಫ್ರಿಯನರ್ಚಿಸುತ್ತಂ” ಉಪದೇಶವನ್ನು ಪಡೆದ ಚಂದ್ರಶೇಖರಗುರುವಿನ ಇಷ್ಟಾನುಸಾರವಾಗಿ, ಗುಮ್ಮಳಾಪುರದ ಶಾಂತೇಶನಂಘ್ರಿಯನ್ನು ನೆನೆದು, ಶಕ 1483 ರೌದ್ರಿಯಲ್ಲಿ  __         

ಎಂದರೆ 1561 ರಲ್ಲಿ_ಬರೆದಂತೆ ಹೇಳುತ್ತಾನೆ.

         ಪೂರ್ವಕವಿಗಳಲ್ಲಿ “ ನಿರುತದಿಂ ಚೌಷಷ್ಟಿ ಶೀಲದಿ ತಾನಾಚರಿಸಿ ಬಸವೇಶ್ವರನ ಕೊಂಡಾಡಿ ಶಿವನಂ ಸ್ತುತಿಸಿದ ” ಪಾಲ್ಕುರಿಕೆ ಸೋಮನನ್ನು ಹೊಗಳಿದ್ದಾನೆ.