ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

298 ಕರ್ಣಾಟಕ ಕವಿಚರಿತೆ. [16ನೆಯ

 ದಿಟ್ಟ ಕೀರ್ತಿಯ ಪಟ್ಟ ಪೂಜ್ಯದ | ತಿಟ್ಟ ಬೆಳ್ಳಿನ ಬಟ್ಟ ಮುತ್ತಳ | 
 ವಟ್ಟ ಹರ್ಷದ ಘಟ್ಟ ಬೆಳ್ಳಿಯ ಬೆಟ್ಟ ರಂಜಿಪುದು ||
                                              ಯಮಕ

ರಾಜರಾಜಹಿತಾಹಿತಾಹಿತ | ಬೀಜಬೀಜಸುರಾಸುರಾಸುರ | ಭೂಜಭೂಜನತಾನತಾನತ ಭೂರಿಭೂರಿಗಿರಿ || ಮಾಜರಾಜಸಮಸಮಾಸಮ, ನೈಜನೈ ಜಗುಣಾಗುಣಾಗುಣ | ಗೋಜಗೋಜಸಖಾಸಖಾಸಖ ಶರಣು ದೇಶಿಕನೇ ||

                                               ನಿರೋಷ್ಠ

ಚರರಕ್ಷ ದೃತಗರ | ಜಯ ಜಟಾ ತಟೀ ಸಿತಸಿತಕರ | ಒಯ ಜನಾರ್ದನನೇತ್ರಚರಣನಿರಾ ಜಿತಂಗಗತ || ಜಯ ಜಿತಾಂತಕ ಜನನಕೃಂತಕ | ಜಯ ಧನೇಶಸಹಾಯ ಹರಿಹಯ | ಜಯ ನತಾಧಿಕಶಾಂತಿದಾಯಕ ಶಾಂತ ನಿಶ್ಚಿಂತ ||

                                             ಶಿವಸ್ತುತಿ 

ನಿನ್ನೆಡದ ಕಣ್ಣೇ |ಶಿಲೆಯ ಕರಗಿಸುತಿರ್ಪು ದನಿಶಂ | ಒಲಿದ ನಯನತವೆ ಕಲ್ಲೊಳುಷ್ಣವನೈದಿಸುತ್ತಿರ್ಕುಂ || ಜ್ವಲನನಯನವೆ ಕಾಮಕಾಲಾ | ದ್ಯಲಘುಖಳರಂ ದಹಿಪುದೆನುತಂ | ಚಲಿಸದೆಂತಗರಾಜನಿತ್ತನೋ ದೇವಿಯಂ ನಿನಗೆ |


                         ಎಳ ಮಲೆಯಗ.ರ.ಶಾಂತದೇವ ಸು 1565 
      ಈತನು ಶರಣಸ್ತೋತ್ರದ ವಚನ, ಲಿಂಗವಿಕಳಾವಸ್ಥೆಯ ವಚನ; 

ಷಟ್ಸ ಲಸ್ತೋತ್ರದ ವಚನ, ಅಷ್ಟಾವರಣಸ್ತೋತ್ರದ ವಚನ ಇವುಗಳನ್ನು ಸೇರಿಸಿದುದಾಗಿ ತಿಳಿಯುತ್ತದೆ: ಎಂದರೆ ಈ ಗ್ರಂಥಗಳು ಏತತ್ಕೃತವಲ್ಲ; ಇತರರ ಗ್ರಂಥಗಳಿಂದ ಆರಿಸಿ ಜೋಡಿಸಿದ ವಚನಗಳನ್ನು ಒಳಗೊಂಡಿವೆ.

         ಇವನು ವೀರಶೈವಕವಿ; ಸಂಪಾದನೆಯಚೆನ್ನಂಜೆದೇವನ (ಸು. 530) ಶಿಷ್ಯನು. ಇವನ ಕಾಲವು ಸುಮಾರು [565 ಆಗಬಹುದು.
         ಇವನಿಂದ ಸಂಕಲಿತವಾದ ಗ್ರಂಥಗಳಲ್ಲಿ ಶರಣಸ್ತೋತ್ರದವಚನವೂ ಲಿಂಗವಿಕಳಾವಸ್ಥೆಯವಚನವೂ 110 ವಚನಗಳನ್ನು ಒಳಗೊಂಡಿವೆ, ಉ