ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶತಮಾನ] ಶ್ರುತಕೀರ್ತಿ. 299

ಳಿದುವುಗಳ ವಚನಸಂಖ್ಯೆ ವ್ಯಕ್ತವಾಗಿ ಹೇಳಿಲ್ಲ. ಅಷ್ಟಾವರಣಸ್ತೋತ್ರದ ವಚನದಲ್ಲಿ ಗುರು, ಲಿಂಗ, ಜಂಗನು, ವಿಭೂತಿ, ರುದ್ರಾಕ್ಷಿ, ಮಂತ್ರ, ಪಾ ದೋದಕ, ಪ್ರಸಾದ ಇವುಗಳ ಮಹತ್ತ್ವವು ನಿರೂಪಿತವಾಗಿದೆ.

                                             ಶ್ರುತಕೀರ್ತಿ
       ಈತನು ವಿಜಯಕುಮಾರಿಯ ಚರಿತೆಯನ್ನು ಬರೆದಿದ್ದಾನೆ. ಇವನು ಜೈನಕವಿ; ಇವನ ಪಿತಾಮಹನು ಕನಕಗಿರಿಯ ವಿಜಯಕೀರ್ತಿ,ತಂದೆ ಅಕ ಲಂಕ. ಇವನಿಗೆ ಶ್ರುತಕೀರ್ತಿಯೆಂಬ ಹೆಸರಲ್ಲದೆ ರಾಮಚಂದ್ರ, ಚಂದನ ವರ್ಣಿ ಎಂಬ ಹೆಸರುಗಳೂ ಇದ್ದಂತೆ ಈ ಕೆಳಗಣ ಪದ್ಯದಿಂದ ತಿಳಿ ಯುತ್ತದೆ.-
     ಸಂದ ಸಂಸಾರದೊಳಗೆ ರಾಮಚಂದ್ರನು | ಚಂದನವರ್ಣಿ ಮಧ್ಯದೊಳು | 
     ಸಂದುದು ಕಡೆಯೊಳು ಶ್ರುತಕೀರ್ತಿ ದೇವರಿ | ನ್ನೆಂದೆಂಒ ನಾಮಲೋಕದೊಳು|| 
     ಈತೆರದೊಳು ಮೂರುನಾಮವ ತಳೆದ ಮ | ತ್ತಾತನೊಲಿದು ಹೇಳಿದನು |
           ಈ ಗ್ರಂಧವನ್ನು ಶಕ 1488 ಪ್ರಭವದಲ್ಲಿ ಆರಂಭಿಸಿ ವಿಭವದಲ್ಲಿ (1567) ಮುಗಿಸಿದಂತೆ ಹೇಳುತ್ತಾನೆ.
    ಇವನ ಗ್ರಂಧ
                                 ವಿಜಯಕುಮಾರಿಯ ಚರಿತೆ 
           ಇದು ಸಾಂಗತ್ಯದಲ್ಲಿ ಬರೆದಿದೆ; ಪದ್ಯ 1312. ಇದರಲ್ಲಿ “ವಿಜಿತೇಂದ್ರಿಯಳಾಗಿ ಕಾಮನ ಗೆಲಿದ” ವಿಜಯಕುಮಾರಿಯ ಕಥೆ ಹೇಳಿದೆ. ಆರ್ಯ

ಭಾಷೆಯಲ್ಲಿದ್ದ ಈ ಕಥೆಯನ್ನು ಕನ್ನಡಭಾಷೆಯಲ್ಲಿ ಬರೆ ಎಂದು ಜೈನೋತ್ತಮರು ಪ್ರಾರ್ಧಿಸಲು ಬರೆದಂತ ಕವಿ ಹೇಳುತ್ತಾನೆ. ಗ್ರಂಧಾವತಾರ ದಲ್ಲಿ ಜಿನಸ್ತುತಿ ಇದೆ. ಬಳಿಕ ಕವಿ ಸಿದ್ಧಾದಿಗಳು, ಸರಸ್ವತಿ, ಗಣಧರರು ಇವರುಗಳನ್ನು ಹೊಗಳಿ ಅನಂತರ ಭದ್ರಬಾಹುವಿನಿಂದ ಶ್ರುತಕೀರ್ತಿಯವ ರಗೆ' ಜೈನಗುರುಗಳನ್ನು ಸ್ಮರಿಸಿದ್ದಾನೆ. ಈ ಗ್ರಂಥದಿಂದ ಪೂಜ್ಯಪಾದ ಸುತಿರೂಪವಾದ ಒಂದು ಪದ್ಯವನ್ನು ತೆಗೆದು ಬರೆಯುತ್ತೇವೆ

            1 ಭದ್ರಬಾಹು, ಗುಣಭದ್ರ, ಸಮಂತಭದ್ರ, ಇಂದ್ರನಂದಿ, ಮಹಾನಂದಿ, ಸಿಂಹಣಂದಿ, ವೀರಣಂದಿ, ವೀರಸೇನ, ನಯಸೇನ, ವೀರಾಚಾರ್ಯ, ಚಂದ್ರಪ್ರಭ, ಶುಭ ಚಂದ್ರ, ನೇಮಿಚಂದ್ರ, ಪೂಜ್ಯಪಾದ ಕೊಂಡಕುಂದ, ಕವಿಪರಮೇಷ್ಠಿ, ಚಾರುಕೀರ್ತಿ ಪಂಡಿತ, ಅಕಲಂಕ, ಚಂದ್ರಪ್ರಭ, ವಿದ್ಯಾನಂದ, ಪ್ರಭೇಂದು, ಶ್ರುತಕೀರ್ತಿ.