ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

310 ಕರ್ಣಾಟಕ ಕವಿಚರಿತೆ. [16 ನೆಯ

ದರು, ಶಕ 1258ನೆಯ ಧಾತುವಿನಲ್ಲಿ (1336) ಹರಿಹರನಿಗೆ ಪಟ್ಟವಾಯಿತು; ಇವನ ವಂಶದವರು 13ತಲೆಯವರೆಗೆ 155 ವರ್ಷ ಆಳಿದರು. ಹರಿಹರಬುಕ್ಕರ ಅಂಶದಿಂದ ಇಂದ್ರನು ಪ್ರೌಢದೇವನಾಗಿ ಹುಟ್ಟಿದನು; ಅವನ ಜತೆಯಲ್ಲಿ 101 ಗಣೇ ಶ್ವರರು ವಿರಕ್ತರಾಗಿ ಹುಟ್ಟಿದರು. ಕರಸ್ಥಳದ ವೀರಣ್ಣೊಡೆಯನು ಪ್ರೌಢದೇವ ರಾಯನ ಅಳಿಯನಾದನು. ಪ್ರೌಢದೇವನ ಅಂಶದಿಂದ ವಿರೂಪಾಕ್ಷನು ಆಳಿದನು; ಅವನನೆಬ್ಬಟ್ಟಿ, ನರಸಣರಾಯನು ಆ ನಗರಿಯ೦ ಗೆಲವಿನಿಂ ತೆಗೆದುಕೊಳಲು ಅವನ ಸುತನಾಳ್ದಂ; ಆ ಪಟ್ಟಕೆ ಅಚ್ಯತನೆ ಕಡೆ; ಬಳಿಕ ಅವರ ಅಳಿಯಂದಿರು ಆಳಿ ದರು. ಇವರು ತುರುಕರೊಡನೆ ಕಾದಿ ಮಡಿಯಲು ತುರುಕರು ದೇವಸ್ಥಾನಗಳನ್ನೂ ವಿಗ್ರಹಗಳನ್ನೂ ಒಡೆದು ಹಾಳುಮಾಡಿದರು. ಅಳಿಯ ರಾಮರಾಯನ ಅನುಜನು ಬೇರೆಕಡೆ ಹೋಗಿ ನೆಲಸಿದನು ಕಲಿ 4683 ನೆಯ ಸ್ವಭಾನುವಿನಲ್ಲಿ (1584) ವೀರ ವಸಂತರಾಯನು ಕರ್ಣಾಟದೇಶಕ್ಕೆ ಬಂದು ಆಳುವನು ವೀರಶೈವಮತಕ್ಕೆ ಪ್ರೋತ್ಸಾಹಕರಾಗಿದ್ದ ಕೆಲವರು ಪ್ರಭುಗಳು-ನಂಜರಾಯ, ಕೆಂಚಸೋಮಣ್ಣನಾ ಯಕ, |ಎಳಂದೂರರಸ ಚೆನ್ನೊಡೆಯ, ಬರಗಿಯ ದೇವಿನಾಯಕ, ಬುಕ್ಕಣ್ಣೊ ಡೆಯ, ಸಿದ್ಧ ಮಲಿನಾಯಕ, ಸಂಕಣ್ಣನಾಯಕ, ಜಂಬರದಾನಿವಾಸದ ದೊರೆ ಗಳು, ಕೇತಸಾಗರದ ಚಿಕ್ಕಣ್ಣ ಸೆಟ್ಟಿ, ಬಿಜ್ಜಾವರದ ಪ್ರಭು ಚಿಕ್ಕಣಗೌಡ, ಸುಕು ಟೂರ ತಮ್ಮಣ್ಣಗೌಡ, ತಗಡೂರ ಪ್ರಭು, ತಳೆಕಾಡ ಚಂದ್ರಶೇಖರ, ಭೋಗವಾ. ಡಿಯ ಲಿಂಗರಾಯ, ಉಡುವಂಕನಾಡ ಪ್ರಭು.

   ಇವನ ಬಂಧವು ಲಲಿತವಾಗಿಯೂ ಹೃದಯಂಗಮವಾಗಿಯೂ ಇದೆ ಈ ಗ್ರಂಥದಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ:-
                     ವಸಂತ
ಸಲೆ ಸುಜಾತಿಯ ಸಿರಿಯಡಂಗಿತು ವಿಜಾತಿಗತಿ |
ನಲವಾದುದುನ್ಮಧುಪಕುಲಕೆ ಸಮನಃಕುಲದ | 
ಕೆಳೆಯಾದುದಂಗಭವನೇ ತನ್ನ ತಾಯ್ವನೆಗೆ ಕೇಡನೆಣಿಸುವನೆದೆಯೊಳು||
ನೆಲೆಗೆ ಸಂದುದು ವಾದರೀವಿಭವಮಾದುದಾ | 
ಗಳೆ ತಪೋಹೀನತೆಯದೆಲ್ಲಿಯುಂ ಚಿತ್ರವಿದು | 
ಕಲಿಕಾಲಮೋ ಚೈತ್ರಕಾಲಮೋ ಪೇಟ ವಲ) ಸುರಭಿಸಮಯಂ ಬಂದುದು ||