ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಶತಮಾನ] ವಿರೂಪಾಕ್ಷ ಪಂಡಿತ. 311

                   ಮಲ್ಲಿಗೆ 

ತಂಬೆಲರ ಕೊಬ್ಬು ಬನಬನದ ಸೌಭಾಗ್ಯ ಮೇಳ |

ದುಂಬಿಗಳ ಸಂಗೀತಶಾಲೆ ಚೈತ್ರನ ಚಸದ |

ಮುಂಬೆಳಸು ಮೆಚ್ಚಿದರ ಮನಮೆಚ್ಚಗಲ್ವರೆದೆಗಿಚ್ಚು ರತಿದೇವಿಯೊಲವು ||

ಶಂಬರಾರಿಯ ಸರಳ ಸಂತಾನಮರಲ ಕುಲ |

ಕಂ ಬೈತಲೆಯ ಚೊಕ್ಕ ಮುತ್ತೆನಿಪ ಮಲ್ಲಗೆಗ |

ಳೇಂ ಬಿರಿದುವೋ ವಿರಹಿಯೆದೆ ಬಿರಿವಮಾಟ್ಕುಯಿಂದಾವಸಂತದ ಮೊದಲೊಳು ||

                      ಕಬ್ಬು 

ತುಂಡುತುಂಡಾಗಿ ಕತ್ತರಿಸಿ ಗಾಣದೊಳರೆದು |

ಹಿಂಡಿ ರಸಮಂ ತೆಗೆದು ಕಾಸಿ ಕಾಲ್ದುಟುತದಿಂ |

ಖಂಡಶರ್ಕರೆಯಾದೆವೇಗೈದೊಡಂ ಸುಗುಣಮಂ ಬಿಡದ ಸುಜನರಂತೆ ||

ದಿಂಡುರುಳ್ವಿದೆವಾಳ್ದಗಿದಿರಾದರಂ ಸುಕೋ |

ದಂಡರೂಪಿಂ ಸ್ವಾಮಿಹಿತಕಿನ್ನು ತಮ್ಮೊಳು ||

ದ್ದಂಡತೆಯ ಬಿರುದೆತ್ತಿತೆನೆ ಸೋಗೆವಸುರಕಬ್ಬಿನ ಕೊಬ್ಬು ಕಣ್ಗೆಸೆದುದು ||

                      ಕತ್ತಲೆ

ಧರೆಯೊಳಗೆ ಕರಿದು ಕೃಷ್ಣ ಕೃಷ್ಣನಿಂ ಕಾಳಿ |

ಕರಿದು ತತ್ಕೃಷ್ಣನಿಂ ಕಾಳಿಯಿಂ ನೀಲಗಿರಿ |

ಕರಿದು ತತ್ಕೃಷ್ಣನಿಂ ಕಾಳಿಯಿಂ ನೀಲಗಿರಿಯಿಂ ಕರಿದು ಕಾಳಮೇಘಂ ||

ಪರಿಕಿಸಲ್‌ ಕೃಷ್ಣನಿಂ ಕಾಳಿಯಿಂದಂ ನೀಲ |

ಗಿರಿಯಿನಾಕಾಳಮೇಘದಿನಂಧಕಾರಮೇ |

ಕುರಿದೆನಿಸಿ ಪಿರಿಗೆನಿಸಿ ಪಸುಸಿದುದೆಲ್ಲಿಯುಂ ತಿಮಿರಮತಿನಿಬಿಡಮಾಗೆ ||

                    ಸೂರ್ಯಾಸ್ತ

ದಿನಪನಸರಾಂಗನಾಸಂಗಿಯಾದಂದಮಂ ||

ನೆನೆದು ಪದ್ಮಿಸಿಯುದರಮುಗಿದು ಕಪ್ಪಾಯ್ತೊ ಮೇಣ್ |

ಮನಸಿಎಂ ಎಟರನಿಡೆ ಕತ್ತುರಿಯ ಗುಂಡನಬ್ಜದ ಕೋವಿಯೊಳು ಜಡಿದನೋ ||

ದಿನಲಕ್ಷ್ಮಿ ವಿಧುಗಂಜಿಯಂಬುಜಕರಂಡದೊಳ್ |

ತನಗುಳ್ಳ ನೀಲಮಂ ಬೈತು ಪೋದಳೊ ಎನಲ್ |

ವನಒಗಳು ಮುಗಿಯೆ ಗರ್ಭದಿ ಸಿಲ್ಕದಿಂದಿಂದಿರಂ ಕರಂ ಚೆಲ್ವಾದುದು ||