ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ] ತಿರುಮಲಭಟ್ಟ 317 ದೇವೇಂದ್ರಕೀರ್ತಿಮುನಿರಾಜತನೂಭವೇನ ಶ್ರೀವರ್ಧಮಾನಸುಖಿನಾ ಗದಿತಾನಿ

                                       ಭಾಂತಿ |
ಪದ್ಯಾನಿ ಸದ್ಗುಣಯುತಾನಿ ಮಹೋಜ್ವಲಾನಿ ವಿದ್ವತ್ಕವೀಂದ್ರಗಲಕರ್ಣವಿ
                                 ಭೂಷಣಾನಿ ||
ಎಂಬ ಪದ್ಯದಿಂದ ತಿಳಿಯುತ್ತದೆ. ಈ ಶಾಸನದಲ್ಲಿ ಕನ್ನಡ, ಸಂಸ್ಕೃತ ಈ ಎರಡು ಭಾಷೆಗಳಲ್ಲಿಯೂ ಪದ್ಯಗಳಿವೆ. ಅವು ಅಭಿನವವಾದಿವಿದ್ಯಾನಂದನನ್ನು (1533) - ಸ್ತುತಿಸಿ ಅವನ ಪರಂಪರೆಯನ್ನು ಹೇಳುತ್ತವೆ. ಕವಿ ತನ್ನ ಪರಂಪರೆಯನ್ನು ಹೀಗೆ ಹೇಳಿಕೊಂಡಿದ್ದಾನೆ -ವಿಜಯನಗರದ ಕೃಷ್ಣ ದೇವರಾಜನ (1509-1529) ಸಭೆಯಲ್ಲಿ ವಾದಿಗಳನ್ನು ಜಯಿಸಿದ (ಅಭಿನವ) ವಾದಿವಿದ್ಯಾನಂದ, ಮಗ ವಿಶಾಲಕೀರ್ತಿ; ಮಗ ಭೈರವೇಂದ್ರವಂಶದ ಪಾಂಡ್ಯನೃಪನಿಂದ ಪೂಜಿತನಾದ ದೇವೇಂದ್ರಕೀರ್ತಿ, ಮಗ ಕವಿವರ್ಧಮಾನ. ಇವನ ಕಾಲವು ಸುಮಾರು 1600 ಆಗಬಹುದು, ಶಾಸನದ ಕಾಲವೂ ಅದೇ, ಇದರಿಂದ ಕೆಲವು ಪದ್ಯಗಳನ್ನು ತೆಗೆದುಬರೆಯುತ್ತೇವೆ..
                     ವಿದ್ಯಾನಂದಸ್ತುತಿ
ವಿದ್ಯಾನಂದಸ್ವಾಮ್ಯನ | ವದ್ಯೋಪನ್ಯಾಸಮುದ್ರೆ ಕವಿಗಳ ಮನದೊಳ್ |
ಸದ್ಯಸ್ಸುಖಕರಬಾಣನ | ಗದ್ಯಾತ್ಮಕಕಾವ್ಯದಂತೆ ರಂಜಿಸಿ ತೋರ್ಕುo |
ನಗರೀರಾಜ್ಯದ ರಾಜರ| ಮಿಗಿಲೆನಿಸುವ ಸಭೆಗಳಲ್ಲಿ ವಿಬುಧವ್ರಾತ |
ಕ್ಕಗಣಿತವಾಕ್ಯಾಮೃತಮಂ | ಸೊಗಸಿಂದೀಂಟಿಸಿದೆ ವಾದಿವಿದ್ಯಾನಂದಾ ||
ಕಾರಕಳನಗರದಾಣ್ಮನ | ಭೈರವಭೂಪಾಲಮೌಲಿಯಾಸ್ಥಾನದೊಳೇಂ |
ಸಾರತರಜೈನಧರ್ಮಮ | ನೋರಂತಿರೆ ಬೆಳಗಿ ಮೇಳದೆ ವಿದ್ಯಾನಂದಾ ||
ನರಪತಿಮಣಿಮಕುಟಾರ್ಚಿತ | ನರಸಿಂಹಕುಮಾರಕೃಷ್ಣರಾಯನ ಸಭೆಯೊಳ್ |
ಪರಮತದ ವಾದಿವೃಂದನು | ನೋಯಿಸಿದೆ ವಾಗ್ಬಲದೆ ವಾದಿವಿದ್ಯಾನಂದಾ ||
                  __________
               ತಿರುಮಲಭಟ್ಟ ಸು.1600
ಈತನು ಶಿವಗೀತೆಯನ್ನು ಬರೆದಿದ್ದಾನೆ. ಇವನು ಬ್ರಾಹ್ಮಣಕವಿ;
ಉಭಯಸತ್ಕವಿಶಿರೋವರಮಣಿ ಎಂದು ತನ್ನನ್ನು ವಿಶೇಷಿಸಿ ಹೇಳಿಕೊಂಡಿ

___________________________________________________ 1 Page 227 2, ಮೆ|| ರೈಸ್ ಸುಮಾರು 1530 ಎಂದು ಹೇಳಿದ್ದಾರೆ.