ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

322 ಕರ್ಣಾಟಕ ಕವಿಚರಿತೆ

[16 ನೆಯ ಎಂಬುದು ವ್ಯಕ್ತವಾಗಿಯೇ ಇದೆ. ಸುಮಾರು 1600 ರಲ್ಲಿ ಇವನು ಇದ್ದಿರಬಹುದು. ಇವನ ಬಸವೇಶ್ವರಪುರಾಣದ ಕಥಾಸಾಗರದಲ್ಲಿ 464 ಕಥೆಗಳಿವೆ. ಈ ಗ್ರಂಥದ ವಿಷಯವಾಗಿ ಕವಿ ಹೀಗೆ ಬರೆದಿದ್ದಾನೆ ಬಸವೇಶ್ವರಪುರಾಣದ ಕಥೆಗಳನು ಭಕ್ತಮಾಹೇಶ್ವರರು ಸುಲಭದಲಿ ತಿಳಿವಂತೆ ಕಲ್ಪಿತಕಥೆಗಳಲ್ಲದೆ ಸಕಲಶಿವಪುರಾಣಸಮ್ಮತವಾಗಿ ಕಥಾಸಾಗರವೆಂಬ ಪೆಸರಿಟ್ಟು ಬಸವಾರಿದ್ರರ ಮಧುರ ಕರುಣದಿಂ ಮಾಡಿದೆವು. ಅಲ್ಲದೆ ಅಷ್ಟಾದಶಪುರಾಣಗಳು, ಭಾರತ, ರಾಮಾಯಣ, ವೀರಶೈವಾಮೃತ ಪುರಾಣ (1530), ಆರಾಧ್ಯ ಚಾರಿತ್ರ, ಗಣಾಡಂಬರ, ಸಿಂಗಿರಾಜನಕೃತಿ, ಶಿವತತ್ವಚಿಂತಾಮಣಿ, ಹರೀಶ್ವರದೇವರ ರಗಳೆ, ಸಿದ್ಧರಾಮೇಶ್ವರಚಾರಿತ್ರ, ಶೂನ್ಯ ಸಂಪಾದನೆ ಮುಂತಾದ ಗ್ರಂಧಗಳನ್ನು ನೋಡಿ ಈ ಕಥೆಗಳನ್ನು ಬರೆದಂತೆ ಹೇಳುತ್ತಾನೆ. ಭೈರವೇಶ್ವರ ಕಾವ್ಯದ ಕಥಾಸಾಗರದಲ್ಲಿ 316 ಕಥೆಗಳಿವೆ. ಉಚಿತ ಕಥೆಗಳ ಸಂಖ್ಯೆ 74.

                  ಸಿದ್ದಲಿಂಗಶಿವಯೋಗಿ ಸ, 1600 

ಈತನು ಭೈರವೇಶ್ವರಪುರಾಣವನ್ನು ಬರೆದಿದ್ದಾನೆ, ಇವನು ವೀರ ಶೈವಕವಿ; ಇವನ ಗುರು ಚೆನ್ನವೃಷೇಂದ್ರ. ಹಿಂದೆ ನಂಜಯನು ವರ್ಣಕವಾಗಿ ಹೇಳಿದ್ದ ಈ ಕಥೆಯನ್ನು ತಾನು ವಸ್ತುಕವಾಗಿ ರಚಿಸಿದಂತೆ ಹೇಳತ್ತಾನೆ. ಇವನು ಹೇಳುವ ನಂಜಯನು ಭೈರವೇಶ್ವರಕಾವ್ಯವನ್ನು ಸಮಾರು 1550ರಲ್ಲಿ ಸಾಂಗತ್ಯದಲ್ಲಿ ಬರೆದಿರುವ ಕಿಕ್ಕೇರಿಯಾರಾಧ್ಯನಂಜುಂ ಡನಾಗಿರಬೇಕು, ಆದುದರಿಂದ ಕವಿ ಅವನ ಕಾಲಕ್ಕಿಂತ ಈಚೆಯವನು; ಸುಮಾರು 1610ರಲ್ಲಿ ಇದ್ದಿರಬಹುದು. ಪೂರ್ವಕವಿಗಳಲ್ಲಿ ಹರಿಹರ, ರಾಘವಾಂಕ, ಶಂಕರ, ಮಾಯಿದೇವ ಮಯೂರ,ಬಾಣ, ಮಲಯರಾಜ,ಭೀಮಕವಿ ಇವರುಗಳನ್ನು ಸ್ಮರಿಸಿದ್ದಾನೆ ನರರನ್ನೂ ಸುರರನ್ನೂ ಸ್ತುತಿಸಿ ನರಕಭಾಜನನಾಗುವುದಿಲ್ಲ, ಗಣಂಗಳನ್ನು ನಾಲಗೆ ದಣಿವಂತ ಕೀರ್ತಿಸುವೆನು ಎಂದು ಈ ಪದ್ಯದಲ್ಲಿ ಹೇಳುತ್ತಾನೆ.