ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶತಮಾನ] 323

                              ಸಿದ್ದಲಿಂಗಶಿವಯೋಗಿ

ಗಣಂಗಳೇರ್ಗಯಂ ರಸನೆ ದಣಿವಂತೆ ಕೀರ್ತಿಸಿ | ಯೊಸೆದವರ ಕೃಪಾಬ್ಬಿಯಲ್ಲಿ ಮೆ.ಲಿಗುವೆನಲ್ಲ | ಪಶುನರರ ಸುರರ ಕೀರ್ತಿಸಿ | ವಸವಲ್ಲದ ನಿರಯದಲ್ಲಿ ಮುಳಿಗಲ್ಕಾರೈಂ || ಇವನ ಗ್ರಂಥ

                              ಭೈರವೇಶ್ವರಪುರಾಣ

ಇದಕ್ಕೆ ರಾಜೇಂದ್ರವಿಜಯಪುರಾಣ ಎಂಬ ನಾಮಾಂತರವೂಉಂಟು. ಇದು ಚಂಪೂರೂಪವಾಗಿದೆ. ನಮಗೆ ದೊರೆತ ಅಸಮಗ್ರಪ್ರತಿಯಲ್ಲಿ 20 ಆಶ್ವಾಸಗಳೂ(ಪದ್ಯ 1350) 21ನೆಯ ಆಶ್ವಾಸದಲ್ಲಿ ಸ್ವಲ್ಪಭಾಗವೂ ಇವೆ ಈ ಗ್ರಂಥದಲ್ಲಿ ಭೈರವರಾಜನೆಂಬ ಶಿವಭಕ್ತನ ಕಥೆ ಹೇಳಿದೆ ಗ್ರಂಥಾವತಾರದಲ್ಲಿ ಶಿವಸ್ತುತಿ ಇದೆ. ಬಳಿಕ ಕವಿ ಪಾರ್ವತಿ, ಗಣೇಶ, ಸುಬ್ರಹ್ಮಣ್ಯ ವೀರಭದ್ರ, ಬಸವ, ಚೆನ್ನಬಸವ,ಅಲ್ಲಮಪ್ರಭು, ಸಿದ್ಧಲಿಂಗ, ಮುರಿಗಾಚಾರ್ಯ, ಸ್ವಗುರುಚೆನ್ನವೃಷೇಂದ್ರ, ಮಹದೇವಿಯಕ್ಕ, ನೀಲಾಂಬಿಕೆ ಇವರುಗಳನ್ನು ಕ್ರಮವಾಗಿ ಸ್ತುತಿಸಿದ್ದಾನೆ. ಆಶ್ವಾಸಗಳ ಅಂತ್ಯದಲ್ಲಿ ಈ ಗದ್ಯವಿದೆ.

ಇದು ಎಧುಪಂಕಜೋದ್ಭವಸುರೇಶ್ವರಮುಖ್ಯಸುರನರೋರಗಶೃಂಗಾರತಿ ಶಯಾನೇಕಮಕುಟತಟಘಟಿತನಿತ್ಯನಿಮ೯ಳ ನಿರ್ವಿಕಲ್ಪ ಸತ್ಯಸ್ವಯಂಪ್ರಕಾಶಾದ್ವಿತೀಯ ಪರಮೇಷ್ಠಿ ಲಿಂಗಚರಣಾರವಿಂದದ್ವಂದ್ರಶಿರಶ್ಶೇಖರ ಸಮ್ಯಗ್ ಜ್ಞಾನಸಂಪನ್ನ ಸಿದ್ದಲಿಂಗ ಶಿವಯೋಗಿವಿರಚಿತ ಶ್ರೀಮದ್ರಾಜೇಂದ್ರವಿಜಯಮಹಾಪುರಾಣದೊಳ್ ಈ ಗ್ರಂಥದಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ.

                                     ಮೇರು

ಮೆರೆದುದು ರತ್ನ ಸಾನು ರಜತಾಚಲರೋಹಣಶೈಲಮಧ್ಯದೊಳ್ | ಸುರನದಿಗಿಟ್ಟ ಪಾವಟಿಗೆಯೋ ಹದಿನಾಲ್ಮೊಗರೊಳ್ ವಿಘಾತಮಂ || ಪರಿಹರಿಸಿಲ್ಕೆ ಮೂಡಿದುರುಲಿಂಗ ಎಂದೆನೆ ಸತ್ಪ್ರಕಾಶದಿಂ | ಪರಮತಪೋಧನರ್ ನೆಗಳ್ವಿ ಸತ್ತಪದಿಂ ಸುರಸಿದ್ಢಿರೇರ್ಗಿಯಂ |

                                     ಬೇಡನು

ಶರ ಮಿಂಚು ಗುಡುಗೆ ರಾವಂ | ಕರಿ ಜಡದವದಾಗೆ ಮೌಕ್ತಿಕಂ ಕರಕಂಗಳ 1. 266 ನೆಯ ಪುಟವನ್ನು ನೋಡಿ