ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

326 ಕರ್ಣಾಟಕ ಕವಿಚರಿತೆ [16 ನೆಯ

  ಈ ಗ್ರಂಥವು ವೇದಾಂತಭೋಧಕವಾಗಿದೆ. ದೇಹವನ್ನು ರಥಕ್ಕೆ
  ಹೋಲಿಸಿರುವಂತೆ ತೋರುತ್ತದೆ ಇದರಿಂದ ಸ್ವಲ್ಪಭಾಗವನ್ನು ತೆಗೆದು ಬರೆ
  ಯುತ್ತೇವೆ
   ಪಲ್ಲವಿ|| ಗುರುರಾಯನೊಲಿದರ್ಮೆಲಮ್ಮ || 
   ಎನ್ನ ಶರೀರದಯಾತ್ರೆಯ ಮಾಡುವೆನಮ್ಮ | 
   ಗಾಲಿನಾಲ್ಕೞ್ ತೇರಿಗಮ್ಮ | ಮೇಲೆ ಕೀಲಕುಂಡಲಿಯೆಂಬ ಕೀಲಿಟ್ಟಿನಮ್ಮ | 
   ಮೇಲೇಱುನೆಲೆಗಳಮ್ಮ ' ಅದಕೆ ಬಾಲಸರ್ಪವೂರ್ಧ್ವವಿಣಿಯು ಕಾಣಮ್ಮ |
                      ________
              ಪ್ರಧಾನಿ ತಿರುಮಲಾರ್‍ಯಸು.1600 
      ಈತನು ಕರ್ಣವೃತ್ತಾಂತಕಥೆಯನ್ನು ಬರೆದಿದ್ದಾನೆ, ಇವನು ಶ್ರೀ 
  ವೈಷ ವಕವಿ, ಮೈಸೂರುದೊರೆಯಾದ ರಾಜಒಡೆಯರಲ್ಲಿ(1578-1617) ಪ್ರ 
  ಧಾನಿಯಾಗಿದ್ದನೆಂದೂ ಇವನ ಮಗನ ದೌಹಿತ್ರನೇ ಚಿಕ್ಕದೇವರಾಜನಲ್ಲಿ 
  (1672-1704) ಮಂತ್ರಿಯಾಗಿದ್ದ ತಿರುಮಲಾರ್‍ಯನೆಂದೂ ಕೆಲವರು ಹೇಳು 
  ತ್ತಾರೆ ಇದು ನಿಜವಾಗಿದ್ದಲ್ಲಿ ಈತನ ಕಾಲವು ಸಮಾರು 1600 ಆಗಬ
 ಹುದು.
       ಇವನ ಗ್ರಂಥ
                      ಕರ್ಣವೃತ್ತಾಂತಕಥೆ 
       ಇದು ಸಾಂಗತ್ಯದಲ್ಲಿ ಬರೆದಿದೆ, ಸಂಧಿ 4 ಎಂದು ಮೆ|| ರೈಸ್' ಬರೆದಿ
 ದ್ದಾರೆ; ಅಚ್ಚಾಗಿರುವ ಅಸಮಗ್ರಪ್ರತಿಯಲ್ಲಿ 11ಸಂಧಿಗಳ(366 ಪದ್ಯಗಳು)
 12 ನೆಯ ಸಂಧಿಯಲ್ಲಿ 14 ಪದ್ಯಗಳೂ ಇವೆ. ಇದರಲ್ಲಿ ಮಹಾಭಾರತ 
 ಶಾಂತಿಪರ್ವದ ಆದಿಭಾಗದಲ್ಲಿ ಹೇಳಿರುವ ಕರ್ಣವೃತ್ತಾಂತವು ನಿರೂಪಿಸಿದೆ.
 ಗ್ರಂಥಾವತಾರದಲ್ಲಿ ಪಶ್ಚಿಮರಂಗನಾಥಸ್ತುತಿಯೂ ಲಕ್ಷ್ಮೀ ಸ್ತುತಿಯೂ 
ಇವೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ:-
                      ವಿಷ್ಣು ಸ್ತುತಿ 
ಜಳಧಿಸುತೆಯ ಮಯ್ಯ ಪೊಗರ ಕುಂದಣದೊಂದು ಕಳೆಯೊಳೆಸವ ನೀಲಮಣಿಯ! 
ಪಱನುಡಿವೆಂಡಿರ ತೊಂಡಿಲನನ್ನೆದೆ | ವಳಿಕುಭರಣಿಯೊಳಡುವೆನು ||
ಪೊಳೆವ ಪಣೆಯ ಪೊಗರುಗುವ ನುಣ್ಗೆಲ್ಲದ | ಮೊಳೆವ ನಗೆಯಮೊನೆಲ್ಲ | 
ತಳಿರುದುಟಿಯ ತಾವರೆಗಣ್ಣಿನ ಮೊಗ ! ಕೆಳಸಿ ಮುಂಬರಿದು ಮುದ್ದಿಪೆನು ||