ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಶತಮಾನ] ಸೋಮನಾಧಕವಿ 327
ಅಡಿಯ ಕೆಂಪಿಗೆ ನುಣೊಡೆಯ ಬಣ್ಣಿಗೆ ಪೊ |ನ್ನುಡೆಯ ಸೆ೦ಪಿಗೆ ಪೂದಳೆದ |
ಪೊಡೆಯತಣ್ಣಿಗೆ ಮೊಗದೆಡೆಯ ಸೊಂಪಿಗೆ ಸಿರಿ|ಮುಡಿಯ ಕಂಪಿಗೆ ಮೋಹಿಸುವೆನು||
ಧರ್ಮರಾಜನ ಉಕ್ತಿ
ನಡೆನುಡಿನೆನಹುಗಳೊಳು ಪರಹಿಂಸೆಯ | ನೋಡಬಡದಿರವಿಗೀಡುಂಟೇ |
ಅಡಸಿದಾಸತ್ತಿನೊಳಾದರು ಪುಸಿವಾತ | ನುಡಿಯದುದಕೆ ಸುಯುಂಟೇ |
ಪ್ರಟ್ಟು ಪೊಂದುಗಳ ಪೋರಟೆ ಪೊದ್ದದು ಪಾಪ ಮುಟ್ಟದು ಮೋಹ ಮುಸುಕದು;
ನೆಟ್ಟನೆ ವೈರಾಗ್ಯಮಿರೆಯಿಹಪರಸೌಖ್ಯ | ಬೆಟ್ಟ ತಪ್ಪುದು ತಪ್ಪದಿದು ||
ಅರ್ಜುನನ ಉಕ್ತಿ
ಧನವಿಲ್ಲದಿರೆ ಧೈದ್ಯಕೆಚ್ಚು, ತಲ್ಲಣ ಹುಟ್ಟ ಮನಕುಂದಿ ಮತಿ ಮಸುಳುವುದು!
ತನಿವೇಸಗೆಯೊಳು ತೋಳನೀರಂತೆ ನಿ | ರ್ಧನರ ಗೆಯ್ಕೆಗಳಡಗುವುವು ||
ಭೀಮನ ಉಕ್ತಿ
ಪರಿಕಿಸೆ ಸನ್ಯಾಸವೆಂಬುದು ಜಗದೊಳು | ಪರಿಪರಿಯೊಳು ಭಂಗವಡೆದು |
ಪುರುಳುಗೆಮ್ಮೊಡಲ ಪೊರೆಯಲಯದವರ | ಪರಮನಾಸ್ತಿಕವಾದವೈಸೆ |
____ ____ ___
ಸೋಮನಾಥಕವಿ ಸು 1600
ಇತನು ಅಕ್ಷರಚರಿತ್ರೆಯನ್ನು ಬರೆದಿದ್ದಾನೆ. ಇವನು ಬ್ರಾಹ್ಮಣ
ಕವಿ ಪೂರ್ವಕವಿಗಳಲ್ಲಿ ಕುಮಾರವ್ಯಾಸನನ್ನು (ಸು 1430) ಸ್ತುತಿಸಿರುವುದ
ರಿಂದ ಇವನಕಾಲವು ಸುಮಾರು 1600 ಆಗಿರಬಹುದೆಂದು ತೋರುತ್ತದೆ.
ಇವನ ಗ್ರಂಥ
ಅಕ್ಕೂರಚರಿತ್ರೆ
ಇದು ಭಾಮಿನೀಷಟ್ಟದಿಯಲ್ಲಿ ಬರೆದಿದೆ;ಸಂಧಿ9,ಸದ್ಯ 501. ಇದರಲ್ಲಿ
ಶ್ರೀಯರಸನು ಅಕ್ರೂರನಿಗೆ ತನ್ನ ನಿಜವನ್ನು ತೋರಿಸಿದ ಕಥೆ ಹೇಳಿದೆ.ಇ
ದರಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ...
ಗೊಲ್ಲರು
ತಗಡುಗಣ್ಣಿಯ ಮರಿವ ಕಡೆಗೋ ' ಲುಗಳ ತಿದ್ದುವ ದಾವಣಿಯ ಗೂಂ |
ಟಗಳ ಕೆತ್ತುವ- ಮಗುನೇಣಿನ ಹುರಿದು ಪಿಡಿದುಡಿವ||
ಮೊಗವಡವ ಮಾಡುವ ಮನೆಯ ಹ | ಟ್ವಿಗಳ ಕುಟತೆವರುಗಳ ತಿದ್ದುವ |
ಬಗೆಯಲೊಪ್ಪುವ ಗೋವಳರನಕೊರನೀಕ್ಷಿಸಿದ |