ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



ಶತಮಾನ]          ಶೃಂಗಾರಕವಿಹಂಸರಾಜ.          329
 ಕವಿಗಳಲ್ಲಿ ಮಧುರನನ್ನು! (ಸು, 1385) ಸ್ಮರಿಸುವುದರಿಂದ ಕವಿ 1385 
ಕ್ಕಿಂತ ಈಚೆಯವನೆಂಬುದು ವ್ಯಕ್ತವಾಗಿದೆ. ತನ್ನ ಗುರು ದೇವೇಂದ್ರಕೀರ್ತಿ 
ಎಂದು ಹೇಳುತ್ತಾನೆ. ಶ್ರವಣಬೆಳ್ಳಳದ ಜೈನಮಠದಲ್ಲಿರುವ ಪ್ರಮೇಯ 
ಕಮಲವಾರ್ತಂಡದ ಒಂದುಪ್ರತಿಯ ಅಂತ್ಯದಲ್ಲಿ ಆಪುಸ್ತಕವನ್ನು ಶಕ 
1538 ಆನಂದವರ್ಷದಲ್ಲಿ ಎಂದರೆ 1614ರಲ್ಲಿ-ಬರೆದಂತೆಯೂ ಆಕಾಲದಲ್ಲಿ 
“ ಶ್ರೀಮೂಲಸಂಘಸರಸ್ವತೀಗಚ್ಚಕುಂದಕುಂದಾನ್ವಯ ಶ್ರೀಮದ್ರಾಯರಾಜ
ಗುರುವಸುಂಧರಾಚಾರ 
ಮಹಾವಾದವಾದೀಶರ ರಾಯವಾದಿಪಿತಾಮಹ ಸಕ 
ಲವಿದ್ಯಾಸಾರ್ವಭೌಮಾದ್ಯನೇಕಾನ್ವರ್ಧಬಿರುದಾವಲೀ ವಿರಾಜಮಾನ” ನಾದ
ಒಬ್ಬ ದೇವೇಂದ್ರಕೀರ್ತಿ ಇದ್ದಂತೆ ಹೇಳಿದೆ, ಇವನೇ ಕವಿಯ ಗುರುವಾ 
ಗಿದ್ದಿರಬಹುದು, ಹಾಗಿದ್ದ ಪಕ್ಷದಲ್ಲಿ ಕವಿಯ ಕಾಲವು ಸುಮಾರು 1600
ಆಗಬಹುದು. ಈ ಶತಕವನ್ನು ರತ್ನಾಕರವರ್ಣಿ ಬರೆದುದಾಗಿ ಪ್ರತೀತಿ 
ಯಿದೆ. ಆದರೆ ಅವನ ಗುರು ಚಾರುಕೀರ್ತಿಯೆಂದೂ ಹಂಸರಾಜನ 
ಗುರು ದೇವೇಂದ್ರಕೀರ್ತಿಯೆಂದೂ ತಿಳಿವುದರಿಂದ ಈ ಶತಕವು ತತ್ಕವಿಕೃತ 
ವಲ್ಲವೆಂದು ತೋರುತ್ತದೆ.
  ಪೂರ್ವಕವಿಗಳಲ್ಲಿ ಅಗ್ಗಳ, ನೇಮಿಚಂದ್ರ, ರನ್ನ, ಕುಮುದೇಂದು, 
ಮಧರ, ಜಿನಾಚಾರ ಇವರುಗಳನ್ನು ಸ್ಮರಿಸಿದ್ದಾನೆ.
 ಇವನ ಗ್ರಂಥ 
                 ರತ್ನಾಕರಾಧೀಶ್ವರಶತಕ 
   ಇದರಲ್ಲಿ 125 ವೃತ್ತಗಳಿವೆ. ಪ್ರತಿಪದ್ಯವೂ ರತ್ನಾಕರಾಧೀಶ್ವರ 
ಎಂದು ಮುಗಿಯುತ್ತದೆ ಕೊನೆಯಲ್ಲಿರುವ
  ವೈರಾಗ್ಯನೀತಿಯಾತ್ಮವಿ | ಚಾರಂ ತಾಂ ಬಗೆದು ನೋಡೆ ರಾಜಿಸುಗುಂ ಶೃಂ |
  ಗಾರಕವಿಹಂಸರಾಜ೦ | ಪೂರಿಸಿದ ಸಪಾದಶತಕರಾ ಕರದೊಳ್ ||
ಎಂಬ ಕಂದದಲ್ಲಿ ಈ ಗ್ರಂಥದಲ್ಲಿ ಪ್ರತಿಪಾದಿತವಾದ ವಿಷಯಗಳು ಹೇಳಿವೆ.
ಗ್ರಂಥಾಂತ್ಯದಲ್ಲಿ ಈ ಗದ್ಯವಿದೆ _ _ _
   ಶ್ರೀಮದ್ದೇವೆಂದ್ರಕೀರ್ತಿ ಯೋಗೀಶ್ವರಪಾದಾಂಭೋಜಭ್ಯಂಗಾಯಮಾನ ಶೃಂ 
ಗರಕವಿಹಂಸರಾಜವಿರಚಿತಮಪ್ಪ ರತ್ನಾಕರಾಧೀಶ್ವರಸವಾದಶತಕಂ ಸಂಪೂಣ೯೦.

1. ಈಗ ಅಚ್ಚಾಗಿರುವ ಈ ಗ್ರಂಥದಲ್ಲಿ ಮಧುರನ ಹೆಸರು ದೊರೆವುದಿಲ್ಲ.

ನಾವು ನೋಡಿದ ಕೆಲವು ಓಲೆಯ ಪ್ರತಿಗಳಲ್ಲಿ ಆ ಹೆಸರು ಹೇಳಿದೆ.

2. 274 ನೆಯ ಪುಟವನ್ನು ನೋಡಿ.