ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ ಆಣ್ಣಾ ಜಿ. ವಾರಣದ ಕುಂಭದಂತಿಡಿಕಿಳಿದ ಕುಚದ ಮಣಿ || ಹಾರ ಪೊಸಜವ್ವನೆಯ ನೊಸಲೊಳೊಪ್ಪುವ ತಿಲಕನಣ್ಣಾಜರಾಜೇಂದ್ರನು || ಪೊಸದೇಸಿವಡೆದು ನವರಸ ತುಂಬಿ ತುಳುಕಿ ರಂ | ಜಿಸುವ ಕೃತಿಯೆನಿಪ ಸುರಕುಜಕುಸುಮಸೌರಭವ | ಹಸಿದುಂಬ ಮಧುಕರಂ ಕುಕಎನೆರವಿಯ ತಮನ ಕಡಿದು ಕಲಕುವ ಭಾಸ್ಕರಂ ಕುಸುಮಸರನಸೆಯೆ ಕಂದುವಳೆಂದು ಕೈಗಾಯ್ದ | ಪೊಸಜವ್ವನದ ಕೋಮಲಾಂಗಿಯಳ ಪ್ರಾಣೇಶ | ರಸಿಕರಾಜೇಂದ್ರನಣ್ಣಾಜೆಯಹುದೆಂದೆನ್ನ ಸುಕವೀಂದ್ರರೆಂಬರಂತೆ | ಇವನ ಗ್ರಂಥ ಸೌಂದರವಿಳಾಸ ಇದು ವಾರ್ಧಕಪಟ್ಟದಿಯಲ್ಲಿ ಬರೆದಿದೆ. ಇದರಲ್ಲಿ ಅರುವತ್ತುಮೂ ವರೊಳಗೆ ಒಬ್ಬನಾದ ಸೌಂದರೇಶ ಅಥವಾ ನಂಬಿಯಣ್ಣ ಎಂಬ ಶಿವಭಕ್ತನ ಚರಿತವು ಹೇಳಿದೆ. ಈ ಗ್ರಂಥರಚನೆಗೆ ಕಾರಣವನ್ನೂ ಗ್ರಂಥದ ಉತ್ಕೃಪ್ಪ ತಯನ್ನೂ ಕವಿ ಈ ಪದ್ಯಗಳಲ್ಲಿ ಹೇಳಿದ್ದಾನೆ:- ವೀರೇಂದ್ರನಣುಗನಯ್ಯಣಭೂಪನವನ ಸುಕು | ಮಾರನಣ್ಣಾಜೆ ಸೌಂದರವಿಳಾಸವನು ಶೃಂ || ಗಾರ ಮೊದಲಾದ ನವರಸದುಪಮೆಯುತ್ಪ್ರೇಕ್ಷೆ ಚೆತ್ರಾಧ್ರಭಾವದಿಂದೆ | ಸೇರಿಸುವುದೆಂದು ಶಂಕರನಿರೂಪಣೆಯಾಗೆ | ಸಾರತರಮಾದ ಮಧುರೋಕ್ತಿ ಮೃದುಪದದ ಗಂ || ಭೀರವಚನಾರಚನೆಯಿಂದೆ ವಿಸ್ತರಿಸಿದೆನು ಸುಕವೀಂದ್ರರಹುದೆನ್ನಲು || ಸಿರಿಯ ನಲೆವನೆ ಕುಸುಮಶರನು ರತಿ ನೆಲಸಿ ಪುರ | ಹರನೊಡನೆ ಸೆಣಸುವಂಕದ ಕಣನು ಭಾರತಿಯ | ಸರಸಕವಿತೆಯ ವಿಲಾಸದ ತಾಣ ಚಕ್ರಿಯಾವಾಸ ಮೋಹದ ಸುಗ್ಗಿ ಯು || ಹರನ ಗಿರಿಜೆಯ ಭೋಗಮಂಟಪವು ಸುರಪತಿಯ | ವರವಿಭವಸಾಲೆ ಶಂಕರ ಭೋಗಮೋಕ್ಷಗಳ | ಕರೆದೀವ ರಾವಿದೆಂಬುದ ತಿಳಿದು ಲಾಲಿಸುವುದೀ ಸೌಂದರವಿಳಾಸವ | ಗ್ರಂಥಾವತಾರದಲ್ಲಿ ಈಶ್ವರ, ಪಾರವತಿ ಇವರುಗಳ ಸ್ತುತಿ ಇದೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ.