ಈ ಪುಟವನ್ನು ಪರಿಶೀಲಿಸಲಾಗಿದೆ
336 ಕರ್ಣಾಟಕ ಕವಿಚರಿತೆ. [16ನೆಯ
ಸಮುದ್ರ
ಘುಳುಫಳಿಸುತೇಳ್ವ ಬೊಬ್ಬುಳಿಗಳಿಮಂ ಸುಳುಗಳಿಂ |
ನಳನಳಿಸಿ ರಾಜಿಸುವ ಕಮಲದಿಂ ಕುಮುದದಿಂ |
ತಳತಳಿಸಿ ಹೊಳೆಯುತಿಹ ತೆರೆಗಳಿ೦ ಮೊರೆಗಳಿಂ ಕಮರಶೈವಾಲದಿಂದೆ ||
ತುಳುಕಿ ಪರಿದೊಲೆದೊಲೆದು ಸಂಚರಿಪ ಮೀಂಗಳಿಂ |
ಬಳಸಿ ಪರ್ಬದ ಪವಳಲತೆಗಳಿಂ ಶಂಖದಿo• |
ದೆಳಲತೆಯ ಕುಡಿಗವಲ ಸೊಂಪಿನಿಂ ಗುಂಪಿನಿಂ ಕಡಲು ಕಣ್ಗೆ ಸೆದಿರ್ದುದು ||
ಪರವೆಯ ಸೌಂದಯ್ಯ
ನನೆಯ ಸೂಡಿದ ಕಲ್ಪಲತೆಯೊ ಮಧುಕರನೆಳಗಿ |
ಜಿನುಗಿ ಸವಿಯದ ಪರಾಗದ ಪುತ್ಥಳಿಯೊ ಮೇಣು |
ಮುನಿ ಕುಡಿಯದಿಹ ಸಾಗರಮೊ ಚಕೋರನ ಚಂಚು ಸೋಂಕದಿಹ ಪೂರ್ಣಶಶಿಯೋ||
ವನಸಿಜನ ಪೊಸಮಸೆಯ ಖಂಡೆಯವೊ ಕಂತುವಿನ |
ಘನಪ್ರತಾಪದ ಜಸವೊ ಸ್ತ್ರೀರತ್ನಮೋ ಎನಿಸಿ |
ವನಿತೆಯಿರ್ದಳು ಪರವೆ ಬಿಂದುಗಳೆಯದಿಹಾಣಿಮುತ್ತೆನಲು ಧಳಧಳಿಸುತೆ||
ಚಿನವರದರು(ಸರಾಫರು)
ನಂದಿಯುಂಡಿಗೆ ರಾಮಟಿಂಕೆ ಶಿವರಾಯ ತಾ |
ನೊಂದೆಸೆಯ ಸಣ್ಣಗೆರೆಯಿಕ್ಕೇರಿ ಮಾಸಮೊಳೆ |
ಚಂದಿರನಹಣ ಜಳಕೆ ಮುಂಬೆಟ್ಟು ಅಚ್ಯುತನ ಹೊನ್ನ ರಾಸಿಗಳ ತಮ್ಮ |
ಮುಂದಿಟ್ಟು ಮಚ್ಚಗಳ ಪಿಡಿದೊರೆದು ಬಣ್ಣಗಳ |
ಬಂಧಿಸುವ ನಿಲುಕಡೆಗೆ ಮೇಣದುಂಡೆಯೊಳೊತ್ತಿ |
ಸಂದ ಕ್ರಯವಿಷ್ಟೆಂದು ನೋಡಿ ತೂಕವ ಮಾರ್ಪಿ ಚಿನವರದರೊಪ್ಪಿರ್ದರು ||
ಮಿಠಾಯಿಯಂಗಡಿ
ಕರಜಿಗೆಯಕಾಯಿಯತಿರಸವುದ್ದಿನೊಡೆಯು ಹಿಮ |
ಕರನಂತೆ ರಾಜಿಸುವ ಇಡ್ಡಲಿಗೆಯೆಳ್ಳುಂಡೆ |
ತರಣಿಮಂಡಲದಂತೆಯೆಸೆವ ಒಬ್ಬಟ್ಟು, ಗಾರಗೆಯ ಚಕ್ಕುಲಿ ಸೇವಗೆ ||
ಹೊರೆಯಪೇಣಿಯು ಮನೋಹರದುಂಡೆಯರಗುಸ |
ಕ್ಕರೆಬುರುಡೆ ಹಾಲುಂಡಲಿಗೆಯು ಸ್ವಾದಿಸಲಮೃತ |
ಸರಳಿನಿಂ ನಿರ್ಮಿಸಿದ ಲತೆಯಂತೆ ಜಿಲ್ಲಬಿಯ ಅಂಗಡಿಗಳೆಸೆದಿರ್ದುವು ||