ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಶತಮಾನ] ಶೃಂಗಾರಕವಿ ಕನ ಮಗನು. “ಕಳೆಯಾಣ್ಮ ಶೃಂಗಾರಕವಿಗೆ ಪೆರರುಕ್ತಿಯಂ ಕಳಲೊಲ್ಲ ದುಸಿರ್ವ ಚಲಂ” ಎಂದು ಹೇಳಿಕೊಂಡಿದ್ದಾನೆ. ಇವನ ಹೆಸರನ್ನು ನೋಡಿದರೆ ಈತನು ಈ ನಿಘಂಟುವಲ್ಲದೆ ಕಾವ್ಯಗಳನ್ನೂ ಬರೆದಿರಬೇಕೆಂದು ತೋರುತ್ತದೆ.ರತ್ನಾಕರಾಧೀಶ್ವರಶತಕವನ್ನು ಬರೆದಿರುವ ಹಹಂಸರಾಜ ನಿಗೆ ಶೃಂಗಾರಕವಿ ಎಂಬ ಬಿರುದುಂಟು. ಅವನೂ ಜೈನಕವಿ. ಅವನೇ ಈ ಗ್ರಂಥವನ್ನೂ ಬರೆದಿರಬಹುದೂ ಎಂಬ ಸಂದೇಹವು ಹುಟ್ಟಬಹುದು. ಆದರೆ ಪ್ರಕೃತಗ್ರಂಥದಲ್ಲಿ ಹಂಸರಾಜ ಎಂಬ ಹೆಸರು ಉಕ್ತವಾಗಿಲ್ಲ.ಕವಿ ಸುಮಾರು 1600 ರಲ್ಲಿ ಇದ್ದಿರಬಹುದೆಂದು ಊಹಿಸುತ್ತೇವೆ. ಕೇಶಿರಾ ಜನು ಶಬ್ದಮಣಿದರ್ಪಣದಲ್ಲಿ ಹೇಳುವಂತೆ ಈ ಕವಿ ರಳ ಕುಳಕ್ಷಳಗಳ ವಿಷಯದಲ್ಲಿ ಪ್ರಾಸನಿಯಮವನ್ನು ಅನುಸರಿಸಬೇಕು; ಅವುಗಳನ್ನು ಬೆರಸ ಲಾಗದು; ಇದು ಪಂಪರಾಜಾದಿಕರ್ಣಾಟಕಕವಿರಾಯರ ಮತ ಎಂದು

ಆದೇಶವೆಂದು ಸಹಜತೆಯೆಂದು ರಳಕ,ಳದ |
ಭೇದವೆರಡಕ್ಕುಮಾಕ್ಷಳನೊಂದೆಬಗೆಯಿಂತು |                             ಮದೆರದೆ ಕರ್ಣಾಟಕಾವ್ಯಕೆ ಳಕಾರ ಮೂರುವರಲ್ಲಿ ರಳಕೆ ರಳನೇ||

ಪಾದನಾದೊಡೆ ಕುಳಂಕ್ಷಳನೆರಡು ಬೆರಸೆ ಸೌ | ಖ್ಯೋದಯ೦ ಕ್ಷಳಕುಳನ ನಿಯಮಕ್ಕೆ ರಳನ ಸಂ | ಪಾದಿಸಿದೊಡಶುಭಮಿದು ಸಂಸರಾಜಾದಿಕರ್ಣಾಟಕವಿರಾಯರ ಮತಂ || ಎಂಬ ಪದ್ಯದಲ್ಲಿ ಹೇಳುತ್ತಾನೆ.

  ಇವನ ಗ್ರಂಥ 
            ಕರ್ಣಾಟಕಸಂಜೀವನ 

ಇದು ಕನ್ನಡನಿಘಂಟು; ವಾರ್ಧಕಪಟ್ಟದಿಯಲ್ಲಿ ಬರೆದಿದೆ; 35 ಪದ್ಯ ಗಳಿವೆ. ಇದರಲ್ಲಿ ರಳಕುಳಕ್ಷಳಗಳನ್ನುಳ್ಳ ಕನ್ನಡನುಡಿಗಳೂ ಅವುಗಳ ಅರ್ಥವೂ ಹೇಳಿವೆ. “ಕನ್ನಡದೊಳೂರೆವೂಡಿದು ಲಕ್ಷಣಕೆ ಜೀವನಂ” ಆದುದರಿಂದ ಕವಿ ಗ್ರಂಥಕ್ಕೆ ಈ ಹೆಸರನ್ನು ಕೊಟ್ಟಿದ್ದಾನೆ. ಗ್ರಂಥಾವತಾರದಲ್ಲಿ ಜಿನಸ್ತುತಿ ಇದೆ. ಈ ಗ್ರಂಥದಿಂದ ಒಂದೆರೆಡು ಪದ್ಯಗಳನ್ನು ತೆಗೆದುಬರೆಯುತ್ತೇವೆ. ಆವರ್ತಗಮನಾಂಕುರದೂಳೆ ಸಳಿಯೆನಿಸುತುಂ| ಜೀವಿಸ ಬಿತ್ತಲ್ಪಡುವುದರ್ಕೆ ಬಟ್ಟುಂಕುವೆಸ !