ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



   338             ಕರ್ಣಾಟಕಕವಿಚರಿತೆ                          [16ನೆಯ
   ಚಭೂತಗಳ ಸೇರುವೆಯನ್ನು ನಿರೂಪಿಸುತೇವೆ. ಈ ಗ್ರಂಥದಿಂದ ಒಂದೆ 
   ರಡು ಪದ್ಯಗಳನ್ನು ಉದಾಹರಿಸುತ್ತೆವೆ
     ತವೆ ನಭವೇ ತಾಂ ಜ್ಞಾನಾಸ್ಪದವಾ | ಪವನನೊಳೆಯ್ದಲ್ ಮನವಾಯ್ತಗ್ನಿಯ |
     ನವಗಾಹಿಸಿ ಬುದ್ದಿಯದಾಯ್ತಂಬುವನೊಂದಲ್ ಚಿತ್ರವದು || 
     ಅವನಿಯ ಬೆರಸಲಹಂಕೃತಿಯಾಯ್ತಿಂ | ತಿವು ತಾಂ ಜ್ಞಾನಾದ್ಯಂತಃಕರಣ |
     ವಿಸಲಂಬರದಂಶದಿನುದಿಸಿರ್ಪುವು ನಿಶ್ವಯದಿಂದ ||
     ಮರುತಾಂತಂ ನಭಕೆಯ್ದೆ ಸಮಾನಂ | ಮರುತಂ ತಾಂ ವ್ಯಾನಂ ಮರುತಾಂಶ | 
     ಬೆರಸಿರೆ ಶಿಖಿಯೊಳುದಾನಂ ಚಲದೊಳ್ ಕೂಡಲಸಾನವದು 
     ಧರೆಯೊಳಗೊಂದಲ್ ಪ್ರಾಣಂ ಜನಿತಂ ಮರುತಾಂಶದ ಮಾರುತಪಂಚಕಗಳು|                
     ಮುಕಿಸಲುದಿಸಿದವೆಂದುಸಿರುವರಧ್ಯಾತ್ಮಿಗಳನವರತಂ ||
        ಈ ಪದಗಳಿಗೆ ಒಂದು ಕನ್ನಡವ್ಯಾಖ್ಯಾನವೂ ಇದೆ.
                   ---
            ಮಲ್ಲಿಕಾರ್ಜುನರಾಯ ಸು. 1600 
        ಇವನು ಚೋರಕಥೆಯನ್ನು ಬರೆದಿದ್ದಾನೆ. ಇತನು ವೀರಶೈವಕವಿ.
   ಪೂರ್ವಕವಿಗಳಲ್ಲಿ ಮಲುಹಣ, ಮಯೂರ, ಕಾಳಿದಾಸ, ಹಂಪೆಯಹರೀಶ, 
   ರಾಘವಾಂಕ ಇವರುಗಳನ್ನು ಸ್ಮರಿಸಿದ್ದಾನೆ. ಇವನ ಕಾಲವು ಸುಮಾರು 
   1600 ಆಗಿರಬಹುದು.
       ಇವನ ಗ್ರಂಥ
                    ಚೋರಕಥೆ 
       ಇದು ತ್ರಿಪದಿಯಲ್ಲಿ ಬರೆದಿದೆ; ಸಂಧಿ, ಪದ್ಯ 770, ಇದರಲ್ಲಿ 
   ರತ್ನಾಪುರಿಯನ್ನು ಆಳುತ್ತಿದ್ದ ವಜ್ರಮಕುಟರಾಯನ ಇಬ್ಬರು ಮಕ್ಕಳು 
   ಚೋರರಾದ ಕಥೆ ಹೇಳಿದೆ. ಗ್ರಂಥಾವತಾರದಲ್ಲಿ ಈಶ್ವರಸ್ತುತಿಯೂ ಕೃಷ್ಣ 
   ಸ್ತುತಿಯೂ ಇವೆ.
                     ----
                ಶೃಂಗಾರಕವಿ ಸು. 1600
      ಈತನ ಕರ್ಣಾಟಕಸಂಜೀವನವೆಂಬ ನಿಘಂಟುವನ್ನು ಬರೆದಿದ್ದಾನೆ.
   ಇವನು ಜೈನಕವಿ; ರಸಿವಾಳಿಗೆ ಪ್ರಭುವಾದ ಬೊಮ್ಮರಸನಾಯ