ಈ ಪುಟವನ್ನು ಪರಿಶೀಲಿಸಲಾಗಿದೆ
338 ಕರ್ಣಾಟಕಕವಿಚರಿತೆ [16ನೆಯ
ಚಭೂತಗಳ ಸೇರುವೆಯನ್ನು ನಿರೂಪಿಸುತೇವೆ. ಈ ಗ್ರಂಥದಿಂದ ಒಂದೆ ರಡು ಪದ್ಯಗಳನ್ನು ಉದಾಹರಿಸುತ್ತೆವೆ ತವೆ ನಭವೇ ತಾಂ ಜ್ಞಾನಾಸ್ಪದವಾ | ಪವನನೊಳೆಯ್ದಲ್ ಮನವಾಯ್ತಗ್ನಿಯ | ನವಗಾಹಿಸಿ ಬುದ್ದಿಯದಾಯ್ತಂಬುವನೊಂದಲ್ ಚಿತ್ರವದು || ಅವನಿಯ ಬೆರಸಲಹಂಕೃತಿಯಾಯ್ತಿಂ | ತಿವು ತಾಂ ಜ್ಞಾನಾದ್ಯಂತಃಕರಣ | ವಿಸಲಂಬರದಂಶದಿನುದಿಸಿರ್ಪುವು ನಿಶ್ವಯದಿಂದ || ಮರುತಾಂತಂ ನಭಕೆಯ್ದೆ ಸಮಾನಂ | ಮರುತಂ ತಾಂ ವ್ಯಾನಂ ಮರುತಾಂಶ | ಬೆರಸಿರೆ ಶಿಖಿಯೊಳುದಾನಂ ಚಲದೊಳ್ ಕೂಡಲಸಾನವದು ಧರೆಯೊಳಗೊಂದಲ್ ಪ್ರಾಣಂ ಜನಿತಂ ಮರುತಾಂಶದ ಮಾರುತಪಂಚಕಗಳು| ಮುಕಿಸಲುದಿಸಿದವೆಂದುಸಿರುವರಧ್ಯಾತ್ಮಿಗಳನವರತಂ || ಈ ಪದಗಳಿಗೆ ಒಂದು ಕನ್ನಡವ್ಯಾಖ್ಯಾನವೂ ಇದೆ. --- ಮಲ್ಲಿಕಾರ್ಜುನರಾಯ ಸು. 1600 ಇವನು ಚೋರಕಥೆಯನ್ನು ಬರೆದಿದ್ದಾನೆ. ಇತನು ವೀರಶೈವಕವಿ. ಪೂರ್ವಕವಿಗಳಲ್ಲಿ ಮಲುಹಣ, ಮಯೂರ, ಕಾಳಿದಾಸ, ಹಂಪೆಯಹರೀಶ, ರಾಘವಾಂಕ ಇವರುಗಳನ್ನು ಸ್ಮರಿಸಿದ್ದಾನೆ. ಇವನ ಕಾಲವು ಸುಮಾರು 1600 ಆಗಿರಬಹುದು. ಇವನ ಗ್ರಂಥ ಚೋರಕಥೆ ಇದು ತ್ರಿಪದಿಯಲ್ಲಿ ಬರೆದಿದೆ; ಸಂಧಿ, ಪದ್ಯ 770, ಇದರಲ್ಲಿ ರತ್ನಾಪುರಿಯನ್ನು ಆಳುತ್ತಿದ್ದ ವಜ್ರಮಕುಟರಾಯನ ಇಬ್ಬರು ಮಕ್ಕಳು ಚೋರರಾದ ಕಥೆ ಹೇಳಿದೆ. ಗ್ರಂಥಾವತಾರದಲ್ಲಿ ಈಶ್ವರಸ್ತುತಿಯೂ ಕೃಷ್ಣ ಸ್ತುತಿಯೂ ಇವೆ. ---- ಶೃಂಗಾರಕವಿ ಸು. 1600 ಈತನ ಕರ್ಣಾಟಕಸಂಜೀವನವೆಂಬ ನಿಘಂಟುವನ್ನು ಬರೆದಿದ್ದಾನೆ. ಇವನು ಜೈನಕವಿ; ರಸಿವಾಳಿಗೆ ಪ್ರಭುವಾದ ಬೊಮ್ಮರಸನಾಯ