ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ] ಬ್ರಹ್ಮಕವಿ ೩೪೧

ಈ ಗ್ರಂಥದಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ- ಮುನಿಯದೆ ಮುನಿಯಿಸದಾರುಮ| ನಿನಿಸುಂ ಸಮತೆಯೊಳೆ ನಡೆಯುತಿರೆ ಮುನಿ ಯೆನಿಕುಂ | ಮುನಿವ ಮುನಿಯಿಸುವಸಮತೆಯು|ಮಿನಿಸಿಲ್ಲದೊಡಾಗದಂತು ಯೋಗಮಮೋಘಂ|| ಮನಮಿರೆ ನೊಸಲೊಳ್ ಕಣ್ಗಳ | ವೆನಸುಂ ನಾಸಾಗ್ರದಲ್ಲಿ ಕಿವಿ ಕೇಳವೆನಲ್ | ತನು ತೊನೆಯದೆ ನಟ್ಟಂತಿರ | ಲೆನಸುಂ ನಿಂದಂದು ಸಹಜಯೋಗಮದಕ್ಕುಂ || ಧ್ಯಾನಮದು ನೆನೆದ ನೆನವಿಯೆ | ತಾನದು ದೃಢಮಾಗೆ ಧಾರಣಂ ಧಾರಣೆಯಿಂ | ತಾನೆ ನಿಜಮಾಗೆ ನಿಂದೆಡೆ | ಯೇನದುವೆ ಸಮಾಧಿಯೆಂಬ ಪೆಸರಂ ಪಡೆಗುಂ || ವರವಜ್ರಾಸನದಿಂದಂ | ನಿರತಂ ಪೆರಗಿರಿಸಿ ಕೈಗಳಂ ಮುಗಿದಿನಿಸಂ | ಗರುಡನವೂಲಿರ್ದು ಬಸಿರಿಂ| ತಿರಿಪಲ್ ಗುಲ್ಮಾದಿದೋಷಮಂ ಪರಿಹರಿಕುಂ ||

          --------------------
         ಬ್ರಹ್ಮಕವಿ. ಸು 1600 

ಈತನು ವಜ್ರಕುಮಾರಚರಿತೆಯನ್ನು ಬರೆದಿದ್ದಾನೆ. ಇವನು ಜೈನ ಕವಿ; ಇವನ ಸ್ಥಳ ಪಾಂಡ್ಯವಂಶದ ವಿರುಪನೃಪನ ಮಗ ಚೆನ್ನನೃಪನು ಆಳುತ್ತಿದ್ದ ಕುಂತಳದೇಕದೊಳಗಣ ಪುರಹರಕ್ಷೇತ್ರಪುರ; ತಂದೆ ನೇಮಣ್ಣ; ತಾಯಿ ಬೊಮ್ಮರಸಿ; ಗುರು ಗುಣ ಭದ್ರಾಚಾರ್ಯ ಕುಲದೈವ ಶಾಂತಿಜಿನೇ ಶ್ವರ; ಮಗ ಗುಮ್ಮಣ್ಣ, ಇವನ ಕಾಲವು ಸುಮಾರು 1600 ಆಗಿರಬಹು ದೆಂದು ಊಹಿಸುತ್ತೇವೆ.

  ಪೂರ್ವಕವಿಗಳಲ್ಲಿ ನಯಸೇನ, ಅಭಿನವಪಂಪ, ಗುಣವರ್ಮ, ಪೊನ್ನ, ಜನ್ನ ಇವೆರುಗಳನ್ನು ಸ್ಮರಿಸಿದ್ದಾನೆ.

ಇವನ ಗ್ರಂಥ

          ವಜ್ರಕುಮಾರಚರಿತೆ. 

ಇದು ಸಾಂಗತ್ಯದಲ್ಲಿ ಬರೆದಿದೆ; ಅಲ್ಲಲ್ಲಿ ಕೆಲವು ಕಂದವೃತ ಗಳೂ ಇವೆ. ನಮಗೆ ದೊರೆತ ಅಸಮಗ್ರಪ್ರತಿಯಲ್ಲಿ 3 ಸಂಧಿಗಳಿವೆ.

  ಕಥಾಸಾರ-ರಾಜಪುರೋಹಿತನಾದ ಸೋಮದತ್ತನೆಂಬ ಬ್ರಾಹ್ಮಣನು ವೈರಾಗ್ಯದಿಂದ ಜಿನದೀಕ್ಷೆಯನ್ನು ಹೊಂದಿ ಸನ್ಯಾಸವನ್ನು ಪರಿಗ್ರಹಿಸಲು, ಈ ಸಂಗತಿಯನ್ನು ತಿಳಿದು ಅವನ ಪತ್ನಿ ಯಜ್ಞಗತ್ತೆ ಸಹಿತೆಯಾಗಿ ಬಂದು ಪತಿಯನು