ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 342 ಕರ್ಣಾಟಕಕವಿಚರಿತೆ [16 ನೆಯ

ಪುನಃ ಗೃಹಸ್ಥನನ್ನಾಗಿ ಮಾಡಬೇಕೆಂದು ಪ್ರಯತ್ನಿಸಿ ಸಾಧ್ಯವಾಗದಿರಲು ಬಾಲನಾದ ಪುತ್ರನನ್ನು ಪತಿಯಬಳಿ ಬಿಟ್ಟು ಹೊರಟುಹೋದಳು. ಅಂತರಿಕ್ಷದಲ್ಲಿ ಸಂಚರಿಸುತ್ತಿದ್ದ ಒಬ್ಬ ಖಚರರು ಈ ಬಾಲನನ್ನು ವಿಮಾನದಲ್ಲಿ ಕುಳ್ಳಿರಿಸಿಕೊಂಡು ಹೋಗಿ ತನ್ನ ಪ್ರಭು ವಾದ ಭಾಸ್ಕರನಿಗೆ ಕೊಡಲು, ಆತನೂ ಅವನ ಹೆಂಡತಿ ಮಣಿಮಾಲೆಯೂ ಬಾಲನನ್ನು ಪ್ರೀತಿಯಿಂದ ಸಲಹಿ ಅವನಿಗೆ ಸಂಭ್ರಮದೊಡನೆ ವಿವಾಹವನ್ನು ಬೆಳೆಯಿಸಿದರು. ಇವನೇ ವಜ್ರಕುಮಾರನು.

      ಧರ್ಮಾಮೃತದ 1 ಪದ್ದತಿಯನ್ನು ಅನುಸರಿಸಿ ಈ ಕಥೆಯನ್ನು ತನ್ನ

ಮಗ ಗುಮ್ಮಣ್ಣನಿಗೋಸ್ಕರ ಬರೆದಂತೆ ಕವಿ ಹೇಳುತ್ತಾನೆ.

      ಗ್ರಂಥಾವತಾರದಲ್ಲಿ ಶಾಂತಿಜಿನಸ್ತುತಿ ಇದೆ. ಬಳಿಕ ಕವಿ ಸಿದ್ದಾದಿ

ಗಳು, ಸರಸ್ವತಿ, ವೃಷಭಸೇನಾದಿಗಣಧರರು ಇವರುಗಳನ್ನು ಸ್ಮರಿಸಿ ತರುವಾಯ ಕೊಂಡಕುಂದನು ಮೊದಲಾಗಿ ಶಾಂತಿಕೀರ್ತಿಯವರೆಗೆ2 ಗುರು ಗಳನ್ನು ಕ್ರಮವಾಗಿ ಸ್ತುತಿಸಿದ್ದಾನೆ. ಈ ಗ್ರಂಥದಿಂದ ಕೆಲವು ಪದ್ಯಗ ಳನ್ನು ಉದ್ಧರಿಸಿ ಬರೆಯುತ್ತೇವೆ---

                         ಚಂದ್ರ
ತಾರಾಗಣದ ತೊತ್ತು ಚೋರಜಾರರ ಮಿತ್ತು | ನೀರಜತತಿಗೆ ವಿಪತ್ತು | 
ವಾರಧಿಚಯದೊತ್ತು ಕೌಮುದಿಗಳ ಬಿತ್ತು | ಧಾರಣಿಗಿಂದುದಯಿಸಿತು ||
                        ಬೇಡಿತಿಯರು 

ಕರಿಯರು ಕಾಯದಶೋಕೆದಳಿರನುಟ್ಟು | ಗುರುಗಂಜಿಸರ ಕೊಗಲೊಳಗೆ | ಕರಿವೇಣುಮುತ್ತ ಮುಡಿಗೆ ಕಟ್ಟಿ ಸಂಜೆಯ | ಸಿರಿಯಂತಿಹರು ಶಬರಿಯರು ||

                         ಹಿಮಗಾಲ 

ಕರೆದುವು ತಾವರೆ ತುಬಿರಿದೊಡೆದುವು | ಕೊರಗಿ ನುಡಿಯವು ಪಿಕಾಳಿ | ಸ್ಮರನ ಬಾಣಗಳ ಖಂಡಿಸಿದನು ಹಿಮನೃಪ | ಸುರಿದು ತುಷಾರಮಾರ್ಗಣದಿಂ ||

                        ಅಹಿಚ್ಛತ್ರಪುರ 

ಪತ್ತನದೊಳಗಣ ಪರದರು ಧನದನ |ವಿತ್ತನ ಜಳೆದು ನಗುವರು | ಮಿತ್ರನುಮಾಪತಿ ತಿರಿದುಣ್ಬ ಸಂಪತ್ತಿ | ಯೊತ್ತಿನಲ್ಲಿರ್ದೇನುಫಲವು ||

I Vol. I, 97• 2 ಪೃಧಿವಿಯ ಮೆಟ್ಟದೆ ನಡೆವ ಚತುರಂಗುಲಚಾರಣ ಕೊಂಡ

ಕುಂದ, ಸ್ವಗುರು ಗುಣಭದ್ರ, ಚಾರುಕೀರ್ತಿ ಪಂಡಿತ, ವಿದ್ಯಾನಂದ, ಲಕ್ಷ್ಮೀಸೇನ ಯತಿ, ಕಾಣೂರ್ಗಣದ ಭಾನುಮುನಿ, ಪಾಲ್ಯಕೀರ್ತಿ, ಶಾಂತಿಕೀರ್ತಿ.