ಈ ಪುಟವನ್ನು ಪರಿಶೀಲಿಸಲಾಗಿಲ್ಲ.
17ನೆಯ ಶತಮಾನದ ಕವಿಗಳು
ಭಟಾಕಳ೦ಕದೇವ, 1604
ಈತನು ಕರ್ಣಾಟಕಕಬ್ದಾನುಶಾಸನವನ್ನು ಬರೆದಿದ್ದಾನೆ. ಇವನು
ಜೈನಕವಿ; ಇವನ ಗುರು
ಮೂಲಸಂಘ ದೇಶೀಯಗಣ ಪುಸ್ತಕಗಚ್ಛ ಕುಂಡಕುಂದಾನ್ವಯವಿವಾಮಾನ
ಶ್ರಿಮಾಧ್ರಾಯಠಾಜಗುರುಮಂಡಲಾಚಾರ್ಯ ಮಹಾವಾದವಾದೀಶ ರ ರಾಯವಾದಿ
ಪಿತಾಮಹ ಸಕಲವಿದ್ವಜ್ಜನಚಕ್ರವರ್ತಿ ಬಲ್ಲಾಳರಾಯಜೀವರಕ್ಷಾಪಾಲಕೇತ್ಯಾದ್ಯನೇ
ಕಾನ ರ್ಧಬಿರುದಾವಲೀವಿರಾಜಮಾನ ಶ್ರೀಮಾರುಕೀರ್ತಿ ಪಂಡಿತದೇವಾಚಾರ್
ಶಿಷ್ಯ ಪರಂಪರಾಯಾತ ಶ್ರೀಸಂಗೀತಪುರಸಿಂಹಾಸನಪಚ್ಛಾಚಾರಶ್ರೀಮದಕಲಂಕದೇವನು,
ಈ ಗ್ರಂಥವನ್ನು ಶಕ 1526 ನೆಯ ಶೋಭಕೃತ್ಸಂವತ್ಸರದಲ್ಲಿ, ಎಂ
ದರೆ 1604ರಲ್ಲಿ ಬರೆದಂತೆ ಹೇಳುತ್ತಾನೆ, ಮದರಾಸ್ ಪ್ರಾಚ್ಯ ಕೋಶಾಲ
ಯದಲ್ಲಿರುವ ಬಿಳಿಗಿಯತಾಲ್ಲೂಕಿನ ಒಂದು ಶಾಸನದ (1592) ಪ್ರತಿಯಿಂದ
ಈತನ ಗುರುಪರಂಪರೆಯೇ ಮುಂತಾದ ವಿಷಯಗಳನ್ನು ಕುರಿತು ಈಯಂ
ಶಗಳು ತಿಳಿಯುತ್ತವೆ:-
ಕರ್ಣಾಟಸಿಂಹಾಸನಾಧೀಶ್ವರ ಬಲ್ಲಾಳರಾಯಜೀವರಕ್ಷಾಪಾಲಕನಾದ ಚಾರು
ಕೀರ್ತಿ ಪಂಡಿತನು ಹೀಗೆ ಕೀರ್ತಿಯನ್ನು ಪಡೆದನು---
ತಿಂಬೆಂ ರಾಯನನೆಂದು ನೆ | ಲಂ ಬಾಯ್ದೆಡೆ ತನ್ನ ಮಂತ್ರಜಪವಿಧಿಯಿನದಂ |
ಕುಂಬಳಕಾಯಿಂ ಪೋಟ್ಟು ಯ | ಶಂಬಡೆದೆಸಕಕ್ಕೆ ಪಂಡಿತಾರನ ಸೋ೦ತಂ!!
ಇವನ ಶಿಷ್ಯ ಪರಂಪರೆಯಲ್ಲಿ ಶತಕೀರ್ತಿ ತನ್ನ ಶಿಷ್ಯನಿಗೆ ಅಗ್ಗಳನಿಂದ ಚಂದ್ರಸ ಭ
ಪುರಾ ಇವನ್ನು ಹೇಳಿಸಿದನು. ಶ್ರುತಕೀರ್ತಿಯ ಶಿಷ್ಟನಾದ ವಿಜಯಕೀರ್ತಿ ವೈದಿಕ
ಮತದವನಾಗಿದ್ದ ಅಭಯಚಂದ್ರ,ಸೂರಿಯನ್ನು ಜೈನನನ್ನಾಗಿಮಾಡಿದನು; ಸಂಗೀತಪು
1, ವಿಷ್ಣುವರ್ಧನನು ವೈಷ್ಣವನಾದಮೇಲೆ ಜೈನರಿಗೆ ಹಿಂಸೆಯನ್ನು ಉಂಟು
ಮಾಡಲು ಕೆಲವು ದೊಡ್ಡದಾಗಿ ಬಾಯಿಬಿಟ್ಟು ಊರುಗಳೂ ಪ್ರಾಣಿಗಳೂ ನಾಶವಾಗು
ತಿರಲು ಉಪಾಯಾಂತರವಿಲ್ಲದೆ ದೊರೆ ಬಂಮ ಪ್ರಾರ್ಧಿಸಿಕೊಳ್ಳಲು ಚಾರುಕೀರ್ತಿ ಪಂ
ಡಿತನು ಕುಂಬಳಕಾಯಿಗಳನ್ನು ಮಂತ್ರಿಸಿಹಾಕಿ ಆ ಬಿಲವನ್ನು ಮುಚ್ಚಿದನು ಎಂದು
ಜೈನರಲ್ಲಿ ಇತಿಹಾಸವಿದೆ,