ಈ ಪುಟವನ್ನು ಪರಿಶೀಲಿಸಲಾಗಿಲ್ಲ.
352 ಕರ್ಣಾಟಕ ಕವಿಚರಿತೆ [17 ನೆಯ ರಲ್ಲಿ ಶಬ್ದ ಚಿತ್ರವು ವಿಶೇಷವಾಗಿದೆ. ಈ ಗ್ರಂಥಕ್ಕೆ ಪ್ರಾಸರತ್ನಾಕರ ಎಂಬ ಹೆಸರೂ ಉಂಟು. ಇದರಲ್ಲಿ ಪ್ರಭುದೇವನ ಅಥವಾ ಅಲ್ಲಮನ ಚರಿತವು ಹೇಳಿದೆ. ಇದನ್ನು ತನ್ನ ಗುರು ಸಿದ್ಧವೀರನ ಆಜ್ಞಾನುಸಾರವಾಗಿ ಬರೆ ದಂತ ಕವಿ ಹೇಳುತ್ತಾನೆ. ಗ್ರಂಥಾವತಾರದಲ್ಲಿ ಶಿವಸ್ತುತಿಯಿದೆ. ಬಳಿಕ ಕವಿ ಪಾರ್ವತಿ, ಗಣೇಶ, ಪಣ್ಮುಖ, ನಂದಿ, ಭೃಂಗಿ, ವೀರಭದ್ರ,ಬಸವ, ಸಿದ್ದರಾಮ, ತೋಂಟದದಸಿದ್ಧ, ಕೊಟ್ಟೂರುಬಸವ, ಸ್ವಗುರು ಸಿದ್ದವೀರ ಇವರುಗಳನ್ನು ಹೊಗಳಿದ್ದಾನೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ____
ಬೆಳುವಲನಾಡು ಮಡಿಯೆಂಬ ನುಡಿ ವ್ರೀಹಿಲಲಿತಕ್ಷೇತ್ರಂಗಳೊಳು | ಜಡಿಯೆಂಬ ನುಡಿ ಮೇಘದುತ್ಪಾತವರ್ಷದೊಳ್ | ವೊಡೆಯೆಂಬ ನುಡಿ ಕರುತತೆನೆಯೊಳಂ ಕಡಿಯೆಂಬನುಡಿತುಂದದೊಳಭಾವಿಸೆ|| ವಿಡಿಯೆಂಬ ನುಡಿ ತಳೋದರಿಯರುರುಮಧ್ಯದೊಳು | ಮುಡಿ ಯೆಂಬ ನುಡಿ ಮೋಹನಾಂಗಿಯರ ಧಮ್ಮಿಲ್ಲ | ದೆಡೆಯೊಳಲ್ಲದೆ ಮತ್ತೆ ಕಡೆನುಡಿಗಳಿಲ್ಲ ಬೆಳುವಲನಾಡನೇವೊಗಳ್ವನು || ಕೊಳ ರಾಜಹಂಸೆಗಳು ಮರಿಗಳ ಪಕ್ಕದೊಳಗಿಟ್ಟು| ನೈಜದಿಂ ಕಾಸಾರಕೊಯ್ದು ನಾಳಿಕತಂತು | ವೋಜೆಯಿಂ ಸರಪಣಿಯಹೂಡಿ ಸರಸಿರ ಹತ್ರವ ತೊಟ್ಟಿಲಾಗಿ ರಚಿಸಿ || ತೇಜದಿಂದೆಸೆವ ಶಿಶುಗಳನಲ್ಲಿ ಪಟ್ಟಿರಿಸಿ | ರಾಜಕರಗಳು ಸೋಂಕುವಂತೆ ನಸುಮುಸುಕಿಟ್ಟು | ಭ್ರಾಜಿಸುವಸಲ್ಲಾಸದಿಂದ ಜೋಜೋ ಎಂದುತೂಗಿ ತೊನೆವುವು ವನದೊಳು || ಕವಿಯ ಗುರು ಸಿದ್ಧವೀರನ ಕೀರ್ತಿ. ಆತನ ಸುಕೀರ್ತ್ಯ೦ಗನೆಯು ಬಿಳಿದನುಟ್ಟು ವಿ | ಖ್ಯಾತಹಾರಂ ಹೀರತೊಡಿಗೆಗಳ ತೊಟ್ಟುಸಿತ | ಜಾತಿಮಲ್ಲಿಗೆ ಕುಂದಕುಸುಮಗಳ ತುರುಬಿ ಬೆಳ್ದಾವರೆಯ ಕರದಿ ಪಿಡಿದು || ಶಾತಗರ್ಭೋದರನ ವಾಹನೈರಾವಣದ |