ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಶತಮಾನ] ಬಿಸವಲಿಂಗ. 353

   ವೂತಗಮನವ ಚರಣದೊಳ್ ತೋರು ನಸುನಗುತ |   
   ಪಾತಾಳಸ್ವರ್ಗೇಂದುವುಡುಲೋಕದಿಗ್ದೆಸೆಗಳೊಳಗೆ ಚರಿಸುವಳೇಗಳು |  -     
                   --------
                ಪಾಯಣಮುನಿ 1606  
     ಈತನು ಸನತ್ಕುಮಾರಚರಿತೆಯನ್ನು ಬರೆದಿದ್ದಾನೆ. ಇವನು ಜೈನ  
ಕವಿ, ಶ್ರೀರಂಗಪಟ್ಟಣದ  ಆದಿಜಿನೇಶನ  ಚರಣಸನ್ನಿಧಿಯಲ್ಲಿ  ಈ ಗ್ರಂಥ 
ವನ್ನು ಶಕ 1528 ಪರಾಭವದಲ್ಲಿ-ಎಂದರೆ1606 ರಲ್ಲಿ-ಮುಗಿಸಿದಂತೆ ಹೇ 
ಳುವುದರಿಂದ ಈತನ ಸ್ಥಳ ಶ್ರೀರಂಗಪಟ್ಟಣವೆಂದು ತೋರುತ್ತದೆ.
     ಇವನ ಗ್ರಂಥ
             ಸನತ್ಕುಮಾರಚರಿತೆ                      
     ಇದು ಸಾಂಗತ್ಯದಲ್ಲಿ ಬರೆದಿದೆ.
                ----
             ಬಸವಲಿಂಗ.1611                                          
     ಈತನು ಶಿವಾಧಿಕ್ಯಪುರಾಣವನ್ನು ಬರೆದಿದ್ದಾನೆ.  ಇವನು ವೀರಶೈ  
ವಕವಿ. ಇವನ ಗುರು "ಸಾರಂಗಸಿಂಹಾಸನಕೆ ಬಂದು ಘನಲಿಂಗಪದವನಂ 
ಗವಿಸಿ ನಿಂದು  ಮಂಗಳವಾಡದಾಷ್ಟ್ರದೊಳು ಮೂರುಸಿಂಹಾಸನದ  ಡಾಮ 
ರವನೆಬ್ಬಟ್ಟಿ ಭೂರಿವೃಷ್ಟಿಯ ಕರೆದು ಬಗೆವೆತ್ತ  ಚೆನ್ನಮಲ್ಲೇಶ.  ಶಾಂತ  
ದೇಶಿಗರ  ಕರುಣದಿಂ ಗ್ರಂಧವನ್ನು  ಬರೆದಂತೆ   ಹೇಳುತ್ತಾನೆ.  ಅಲ್ಲದೆ 
ಚೆನ್ನವೀರೇತದೇಶಿಕರು ಕೃತಿಯನುಸುರೆನೆ ನಿರೂಪವ ಕೊಂಡು ಬರೆದೆನು 
ಎನ್ನುತ್ತಾನೆ.
  ಈ ಗ್ರಂಧವನ್ನು ಶಕ "ದ್ರುತಿಪಂಚಶತವತ್ಸರದಮೇಲೆ ಅಷ್ಟಾದಶವರುಷವೆನೆ 

ವಿರೋಧಿಕೃತುವೆಂಬ ಸಂವತ್ಸರ"ದಲ್ಲಿ ಒರೆದಂತೆ ಹೇಳಿದೆ.ಆದರೆ ವಿರೋಧಿಕೃತು 1518 ಆಗುವುದಿಲ್ಲ, ಶಕ 1533 ಆಗುತ್ತದೆ. ಇಲ್ಲಿ ಏನಾದರೂ ತಪ್ಪು ಬಿದ್ದಿರಬ ಹುದೆಂದು ತೋರುತ್ತದೆ. ಶಕ 1533 ರನ್ನು ಇಟ್ಟು ಕೊಂಡರೆ ಗ್ರಂಧದ ಕಾಲವು 1611 ಆಗುತ್ತದೆ.

    45