ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

354 ಕರ್ಣಾಟಕ ಕವಿಚರಿತೆ. [17 ನೆಯ

               ಪೂರ್ವಕವಿಗಳಲ್ಲಿ  ಶಿವಲೆಂಕಮಂಕಣ್ಣ , ಮಲುಹಣ,  ಮಲ್ಲಿಕಾ                    
  ರ್ಜುನಪಂಡಿತ, ಕೇಶಿರಾಜಯ್ಯ, ಶ್ರೀಪತೀಶ್ವರ, ಬಾಣ, ಮಯೂರ, ಓಹಿಲ,   
  ಉದ್ಬ​ಟದೇವ, ಪಾಲ್ಕುರಿಕೆ ಸೋಮೇಶ್ವರ, ಪದ್ಮರಾಜ, ಮಾಯಿದೇವ ಇವ 
  ರುಗಳನ್ನು ಸ್ಮರಿಸಿದ್ದಾನೆ.
 
        ಇವನ ಗ್ರಂಥ
       
                           ಶಿವಾಧಿಕ್ಯಪುರಾಣ
         
           ಇದು  ವಾರ್ಧಕಷಟ್ಪದಿಯಲ್ಲಿ  ಬರೆದಿದೆ;  ಸಂಧಿ 11,  ಪದ್ಯ   965;   
     ಕೆಲವು  ಕಂದವೃತ್ತ​ವಚನಗಳೂ  ಇವೆ; ಒಟ್ಟು 1400; ಇನ್ನೊಂದು ಪ್ರತಿ    
     ಯಲ್ಲಿ  [621 ಎಂದಿದೆ  ಇದಕ್ಕೆ ಬಳ್ಳಿಗಾವಿಮಾಹಾತ್ಮ್ಯ​, ಸಮಯಾಚಾರ  
     ಮಠದ ಪೌರಾಣ ಎಂಬ ಹೆಸರುಗಳೂ ಉಂಟು.
        ಕಧಾಗರ್ಭ - ಬೆಳುವಲದೇಶದ   ಬಳಿ   ಗಾವಿಪುರದಲ್ಲಿ  ಆರಿರಾಯಶರಭಭೇ      
  ರುಂಡ ಎಂಬ ಬಿರುದುಳ್ಳ ಭುಜಂಗರಾಯನೆಂಬ ಅರಸನಿದ್ದನು, ಅವನ ರಾಣಿ ನಾಗ  
 ಪದ್ಮಲದೇವಿ, ಅದೇ ಊರಲ್ಲಿ ಶಿವಭಕ್ತ ಶಂಭುಭಟ್ಟನಿಗೂ ಸೋಮಲಾಂಬಿಕೆಗೂ ಪುತ್ರ  
 ನಾದ ವಿಶ್ವಾಚಾಧ್ಯನೆಂಬ  ಶಿವಭಕ್ತನಿದ್ದನು,  ಈತನು  ಹೊಲೆಯನಾದ  ಶಿವದೇವನ    ಮನೆಗೆ ಹೋಗಿ ಊಟಮಾಡಿದನೆಂದು ವಿಪ್ರವಾದಿಗಳು ಆಕ್ಷೇಪಿಸಲು ವಿಶ್ವಾಚಾರ್ಯನು   
 ಅವರನ್ನು ವಾದದಲ್ಲಿ ಭಂಗಿಸಿ  ಬ್ರಹ್ಮವಿಷ್ಣ್ವಾ​ದಿಗಳನ್ನು   ತೃಣೀಕರಿಸಿದನು,    ಅವರು   
 ಅರಸಿಗೆ ಮೊರೆಯಿಡಲು ಅರಸು ಕೋಪೋದ್ರೇಕದಿಂದ ವಿಶ್ವಾಚಾರ್ಯ​ನನ್ನು ಕರಸಲು  
ಆತನು ಸಭೆಯಲ್ಲಿ ವೇದಾಗಮಪುರಾಣಶಾಸ್ತ್ರಶ್ರುತಿಸ್ಮ್ರತೀತಹಾಸಾದ್ಯುಪನಿಷದ್ವಾಕ್ಯಗ  
ಳಿಂದ ಹರಿಯನ್ನು  ತೃಣೀಕರಿಸಿ   ಶಿವಾಧಿಕ್ಯವನ್ನು  ಸ್ಥಾಪಿಸಿ  ದೊರೆಯನ್ನು ಶಿವಭಕ್ತನ   
 ನ್ನಾಗಿ  ಮಾಡಿಕೊಂಡನು,  ಒಡನೆ  ಶಂಭು  ಪ್ರಸನ್ನನಾಗಲು  ದೊರೆ  ಸಹಿತ ತಾನು  
 ತನ್ನ ತಂದೆತಾಯಿಗಳು ಎಲ್ಲರೂ ಪುಷ್ಪಕವನ್ನೇರಿ ಕೈಲಾಸಕ್ಕೆ ಹೋದರು.
        ಈ ಗ್ರಂಥದ ಉತ್ಕೃಷ್ಟತೆಯನ್ನು ಕವಿ ಹೀಗೆ ಹೇಳಿದ್ದಾನೆ..
          ಪರಮಭಕ್ತರ ಪೆರ್ಚು ಪರವಾದಿಗೆದೆಗಿಚ್ಚು ಶರಣಷಟ್ಸಲಬ್ರಹ್ಮಿಗಳ ಮೆಚ್ಚು  

ಪರಶಿವನ ಮಹಿಮೆಯಚ್ಚು.

              ಗ್ರಂಥಾವತಾರದಲ್ಲಿ ಶಿವಸ್ತುತಿ ಇದೆ, ಬಳಿಕ ಕವಿ ಪಾರ್ವತಿ, ನಂದಿ   
      ಭ್ರುಂಗಿ, ವೀರಭದ್ರ, ಸ್ಕಂದ, ಗಣೇಶ ಇವರುಗಳನ್ನು ಸ್ತುತಿಸಿ ಬಸವನಿಂದ