ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಶತಮಾನ] ಬಸವಲಿಂಗ, 358
ಶಿವದಾಸಮ್ಮನವರೆಗೆ ಪುರಾತನರನ್ನು ಸ್ಮರಿಸಿದ್ದಾನೆ. ಈ ಗ್ರಂಥದಿಂದ
ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ
ಸಮುದ್ರ
ಉಮೆವರನ ಮಸ್ತಕದೊಳನವರತ ನೆಲಸಿರ್ಪ |
ಹಿಮಕರನು ತನ್ನ ತನುಜನು ವಿಶ್ವವಅರಿಯಲ್ಕೇ |
ರಮೆ ಕುವರಿ ರಾಜಿನಾಂಬಕನೆನ್ನ ಸುತೆಯಾಣ್ಮನವರಮರುಮುನಿದನುಜರ ||
ಕ್ರಮಗೆಡಿಸಿ ಕಂಜಬಾಣಗಳಿಂದ ವಿರಹದಲಿ |
ಭ್ರಮೆಗೊಳಿಸಿ ಭಂಗಬಡಿಸುವ ಮಾರ ಮೊಮ್ಮಗನು |
ನಮಗಿಂದಲಧಿಕರಾರೆಂದು ಗಹಗಹಿಸುತ್ತ ಶರಧಿ ಸಲೆ ನಲಿಯುತಿಹುದು ||
ಸೋಮಲಾಂಬಿಕೆಯ ಪುತ್ರಾವೇಕ್ಷೇ.
ಹಸುಗಱುವ ಮಱಿಸಿ ಕರೆದೆನೊ ಪಾಲುಬೆಣ್ಣೆಯನು |
ಶಿಶುಬಾಲರಿಗೆ ಬೇಡಲಿಲ್ಲೆಂದು ಕಳುಹಿದೆನೊ |
ಅಸಮಕ್ಷದೈವವನು ಭಜಿಸಲೊಲ್ಲದೆ ನುಗ್ಗು ನುಸಿಗಳಿಗೆ ಶಿರಮಣಿದೆನೋ ||
ಅಸನವೆಸನಕೆ ಹರಿದು ಕುದಿಯುತಿರ್ದೆನೊ ಮುನ್ನ |
ಹಸಿದೆನೆಂಬವರಿಗನ್ನವ ನೀಡದಾದೆನೋ |
ಪಸುಗ್ರಾಸವನ್ನು ಕಳೆದ ಪಾತಕಿಯು ತಾನೆಂದು ಬೆಸಸಿದಳು ರಮಣನೊಡನೆ ||
ರಾತ್ರಿ
ರಮಣನಗಲಿದನೆಂದು ರೋದನಿಸಿ ಮುಖ ಬಳಲಿ |
ಕಮಲ ನೆಱೇ ನೊಂದು ಜೀವಿಸಲಾಳಾದಂತಿಹುವು |
ಕುಮುದಿನಿಯು ಹಾಸ್ಯಗೈಯುತ್ತ ಗಹಗಹಿಸುತ್ತ ವಿಕಸನವನೈದುತಿಹುವು ||
ಹಿಮಕರನು ರಾತ್ರಿವನಿತೆಯ ಮದುವೆಯಾಗೆ ತ |
- - - - - - - - - - - - - - - - - - - - - - - - - - - -- - - - - - - - - - -
1 ಬಸವ, ಚೆನ್ನ ಬಸವ, ಅಲ್ಲಮ, ಸಿದ್ದರಾಮ, ಮಡಿವಳವಾಚ, ಸೊಡ್ಡ ಳ ಬಾಳ, ಮರುಳುಶಂಕರ, ಬೊಂಬಿದೇವ, ಅಪ್ಪಣ್ಣ, ರೇವಣಾರ್ಯ, ಮಾದಯ್ಯ, ಮಾ ರಯ್ಯ, ಮಾಯಿದೇವ, ನಾಗಾಂಬಿಕೆ, ಮಹದೇವಿ, ನಿಜದೇವಿ, ತಿಲಕನ್ಯೆ, ಜಗದವ್ವೆ, ವೀರಚೋಳವ್ವ, ಸುಗ್ಗಲದೆವಿ, ಚಂಗುಳಿವೀರಸಂಗವ್ವೇ, ಶಿವದೇವಿ, ಲಿಂಗಮ್ಮ, ಅಕ್ಕಮ್ಮ, ಶಿವದಾಸಮ್ಮ.