ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಶತಮಾನ] ಬಸವಲಿಂಗ, 358

              ಶಿವದಾಸಮ್ಮನವರೆಗೆ ಪುರಾತನರನ್ನು ಸ್ಮರಿಸಿದ್ದಾನೆ. ಈ ಗ್ರಂಥದಿಂದ    
              ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ
                                    
                                              ಸಮುದ್ರ   
                     
         ಉಮೆವರನ ಮಸ್ತಕದೊಳನವರತ ನೆಲಸಿರ್ಪ |                
         ಹಿಮಕರನು   ತನ್ನ    ತನುಜನು   ವಿಶ್ವವಅರಿಯಲ್ಕೇ |                       
         ರಮೆ ಕುವರಿ ರಾಜಿನಾಂಬಕನೆನ್ನ ಸುತೆಯಾಣ್ಮ​ನವರಮರುಮುನಿದನುಜರ ||   
         ಕ್ರಮಗೆಡಿಸಿ ಕಂಜಬಾಣಗಳಿಂದ ವಿರಹದಲಿ |                       
         ಭ್ರಮೆಗೊಳಿಸಿ ಭಂಗಬಡಿಸುವ ಮಾರ ಮೊಮ್ಮಗನು |  
         ನಮಗಿಂದಲಧಿಕರಾರೆಂದು ಗಹಗಹಿಸುತ್ತ ಶರಧಿ ಸಲೆ ನಲಿಯುತಿಹುದು ||
               
                              ಸೋಮಲಾಂಬಿಕೆಯ ಪುತ್ರಾವೇಕ್ಷೇ. 
        ಹಸುಗಱುವ ಮಱಿಸಿ ಕರೆದೆನೊ ಪಾಲುಬೆಣ್ಣೆಯನು |      
        ಶಿಶುಬಾಲರಿಗೆ ಬೇಡಲಿಲ್ಲೆಂದು ಕಳುಹಿದೆನೊ |                  
        ಅಸಮಕ್ಷದೈವವನು ಭಜಿಸಲೊಲ್ಲದೆ ನುಗ್ಗು ನುಸಿಗಳಿಗೆ ಶಿರಮಣಿದೆನೋ ||   
        ಅಸನವೆಸನಕೆ ಹರಿದು ಕುದಿಯುತಿರ್ದೆನೊ ಮುನ್ನ |     
        ಹಸಿದೆನೆಂಬವರಿಗನ್ನವ ನೀಡದಾದೆನೋ |                      
        ಪಸುಗ್ರಾಸವನ್ನು ಕಳೆದ ಪಾತಕಿಯು ತಾನೆಂದು ಬೆಸಸಿದಳು ರಮಣನೊಡನೆ ||
                              
                                               ರಾತ್ರಿ    
      ರಮಣನಗಲಿದನೆಂದು ರೋದನಿಸಿ ಮುಖ ಬಳಲಿ |                         
      ಕಮಲ ನೆಱೇ ನೊಂದು  ಜೀವಿಸಲಾಳಾದಂತಿಹುವು   |                  
      ಕುಮುದಿನಿಯು ಹಾಸ್ಯಗೈಯುತ್ತ ಗಹಗಹಿಸುತ್ತ ವಿಕಸನವನೈದುತಿಹುವು ||   
      ಹಿಮಕರನು ರಾತ್ರಿವನಿತೆಯ ಮದುವೆಯಾಗೆ ತ |

- - - - - - - - - - - - - - - - - - - - - - - - - - - -- - - - - - - - - - -

         1  ಬಸವ, ಚೆನ್ನ ಬಸವ, ಅಲ್ಲಮ, ಸಿದ್ದರಾಮ, ಮಡಿವಳವಾಚ, ಸೊಡ್ಡ ಳ  
 ಬಾಳ, ಮರುಳುಶಂಕರ, ಬೊಂಬಿದೇವ, ಅಪ್ಪಣ್ಣ, ರೇವಣಾರ್ಯ, ಮಾದಯ್ಯ, ಮಾ  
 ರಯ್ಯ, ಮಾಯಿದೇವ, ನಾಗಾಂಬಿಕೆ, ಮಹದೇವಿ, ನಿಜದೇವಿ, ತಿಲಕನ್ಯೆ, ಜಗದವ್ವೆ,  
 ವೀರಚೋಳವ್ವ, ಸುಗ್ಗಲದೆವಿ, ಚಂಗುಳಿವೀರಸಂಗವ್ವೇ, ಶಿವದೇವಿ, ಲಿಂಗಮ್ಮ, ಅಕ್ಕಮ್ಮ, ಶಿವದಾಸಮ್ಮ.