361 ಶತಮಾನ] ಪಂಚಬಾಣ. ಎಂದು ಹೇಳುತ್ತಾನೆ. ಇದರಲ್ಲಿ ಭುಜಬಲಿ ಎಂಬ ನಾಮಾಂತರವುಳ್ಳ ಗುಮ್ಮಟೇಶ್ವರನ ಕಥೆ ಹೇಳಿದೆ. ಕಥಾಸಾರ- ಆದಿತೀರ್ಧಕರನಾದ ಋಷಭನಿಗೆ ಭರತ, ಭುಜಬಲಿ ಎಂಬ ಇಬ್ಬರು ಮಕ್ಕಳು ಹುಟ್ಟಿದರು, ಇವರಲ್ಲಿ ಪರಸ್ಪರ ವೈಮನಸ್ಯವುಂಟಾಗಿ ಇಬ್ಬರೂ ಯುದ್ಧಕ್ಕೆ ನಿಲ್ಲಲು, ಭುಜಬಲ ಅಣ್ಣನಾದ ಭರತನನ್ನು ಜಯಿಸಿ, ಅನಂತರ ವೈರಾಗ್ಯ ಹುಟ್ಟಿ ದೀಕ್ಷೆಯನ್ನು ವಹಿಸಿದನು. ಬಹಳಕಾಲದಮೇಲೆ ಚಾಮುಂಡರಾಯನು ಬೆಳುಗುಳದಲ್ಲಿ ಗುಮ್ಮಟೇಶ್ವರಬಿಂಬವನ್ನು ಪ್ರತಿಷ್ಠಿಸಿ ಮಸ್ತಕಾಭಿಷೇಕವನ್ನು ಮಾಡಿಸಿ ಬೆಳುಗುಳವೆಂಬ ಪುರವನ್ನು ಕಟ್ಟಿಸಿ ದೇವರಿಗೆ ಅನೇಕಗ್ರಾಮಗಳನ್ನು ಉಂಬಳಿಯಾಗಿ ಕೊಟ್ಟನು. ತನ್ನ ಕೃತಿಯ ಉತ್ಕೃಷ್ಟತೆಯನ್ನು ಕವಿ ಈ ಪದ್ಯಗಳಲ್ಲಿ ನಿರೂ ಪಿಸಿದ್ದಾನೆ-- ತಂಗಾಳಿಯ ತಂಪ ತರುಣಿಯಧರದಿಂಪ | ತಿಂಗಳ ಬೆಳಗಿನ ಸೊಂಪ | ಕಂಗೊಳಿಪುದು ಪಂಚಬಾಣನ ಕೃತಿ ಸುಜ | ನಂಗಳಿಗತಿಹರುಷವನು || ಪೆಸರು ಫಾಲೊಡೆಯನು ಎದುಂಬುದಂಬಿಲ | ದೆಸಕನಲ್ಲವು ಪಂಚಬಾಣ | ನೆಸಗುವ ಕೃತಿ ಪೂಸರದವೊಲಿಹುದು. - ಗ್ರಂಥಾವತಾರದಲ್ಲಿ ಗುಮ್ಮಟಸ್ತುತಿ ಇದೆ. ಬಳಿಕ ಕವಿ ಚತುರ್ವಿ೦ ಶತಿ ತೀರ್ಥಕರರು, ಸಿದ್ಧಾದಿಗಳು', ಸರಸ್ವತಿ, ಯಕ್ಷಾಧಿಪ ಬೆಟ್ಟ ದಬ್ರಹ್ಮ, ಪದಾ ವತಿ ಇವರುಗಳನ್ನು ಸ್ಮರಿಸಿ ಆಮೇಲೆ ಕೊಂಡಕುಂದ, ಪೂಜ್ಯಪಾದ ಶ್ರುತಕೀರ್ತಿ, ಚಾರುಕೀರ್ತಿಪಂಡಿತ, ತನ್ನ ಮನೆದೇವಿ ಪಾತಾಳಯಕ್ಷನ 1, (1) ಋಷಭ, (2) ಅಜಿತ, (3) ಶಂಭವ, (4) ಅಭಿನಂದನ, (6) ಸುಮತಿ, (6) ಪದ್ಮ ಪ್ರಭ, (7) ಸುಪಾರ್ಶ್ವ, (8) ಚಂದ್ರಪ್ರಭ(9) ಪುಷ್ಪದಂತ, (10) ಶೀತಲ, (11) ಶ್ರೇಯಾಂಸ, (12) ವಾಸುಪೂಜ್ಯ, (13) ವಿಮಲ, (14) ಅ ನಂತ, (15) ಧರ್ಮ, (16) ಶಾಂತಿ, (17) ಕುಂಧು, (18) ಆರ, {19) ಮಲ್ಲಿನಾಧ, (30) ಮುನಿಸುದ್ರತ (21) ನಿಮಿ, (29) ನೇವಿ , (23) ! ಪಾರ್ಶ್ವ, (೭ ) ವರ್ಧ ಮಾನ ಅಧಾವಾ ಮಹಾವೀರ, 2, 16ನೆಯ ಪುಟವನ್ನು ನೋಡಿ, - - - - -+--- - - - - - -
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೪೨
ಗೋಚರ