ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

358 ಕರ್ಣಾಟಕ ಕವಿಚರಿತೆ [17 ನೆಯ ರಮಣಿ ಅನಂತಮತಿಯಮ್ಮ ಇವರುಗಳನ್ನು ಕ್ರಮವಾಗಿ ಸ್ತುತಿಸಿದ್ದಾನೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ ಸರಸ್ಸು ಜೋಡುವಕ್ಕಿಯ ನಾಡು ಜೊನ್ನವಕ್ಕಿಯ ಬೀಡು! ಆಡುಂಬೊಲವಂಚೆಕೊಂಚೆಗಳ| ಪಾಡುವಳಿಗಳಿಕ್ಕೆ ಸುಖಗಾಳಿಬಾಳೆಗಳ | ಬೀಡೆನೆ ಸರಸಿಯೊಪ್ಪಿದುದು || ಉದ್ಯಾನ ಅಲ್ಲಲ್ಲಿ ಕನರ್ಗೊನರಲ್ಲಲ್ಲಿ ನುಣ್ದಳಿ | ರಲ್ಲಲ್ಲಿ ಮೊಗ್ಗೆ ಬಲ್ನನೆಯೆ | ಅಲ್ಲಲ್ಲಿ ಬಲುಗಾಯಿ ಪಣ್ಣು ತಣ್ಣುಳಿನಗ | ಳೆಲ್ಲಿಯು ಬನದೊಳೊಪ್ಪಿದುವು || ದೇಹಾನಿತ್ಯತೆ ಪಾಪದ ಬಿತ್ತು ಪರಾಭವದತಿಬೆಳೆ | ಕೋಪದ ಪೊಣಿ ಕುತ್ತ ದದ್ರಿ | ಪಾಪಿಕೃತಾಂತಗೆತ್ತಿದ ತುತ್ತು ತನುವೆಂದು | ಚಾನಲಮತಿ ನೆವ ಯಯ || ನಕ್ಷತ್ರ ಹಳಿಗಾಲದಂಬರವಿಳೆಗೆಯ್ದಿಯವನಿಯ | ಮುಟಗಿಪುದೆಂದಂಜಿಯಜನು | ಎಳಸಿ ಮಾಡಿಸಿ ಬೆಳ್ಳಿ ಮೊಳೆವೆಟ್ಟಿ ದನೊ ಎನೆ | ಪೊಳೆದುವಾಭಗಣವಭ್ರದೊಳು || ತಾಳಿದಗಳು ಜೀರಗೆಯುದ್ದಕ್ಕಿ ಮೆಂತೆಯ ಕರಿಬೇವು | ಕಾರೆಳ್ಳು ಮೆಣಸು ಸಾಸವೆಯಾ | ಹಾರದಿ ಹುರಿದ ಸಂಬರವಿಟ್ಟು, ಕಾಯ್ಗೊಡಿ | ಭೋರನೆ ತಳಿದು ತುಪ್ಪದೊಳು || ಒಗ್ಗರಿಸಿಯೆ ಅಟ್ಟಬಾಣಿ ಬದಣೆ ತೊಂಡೆ | ಹೆಗ್ಗುಂಬಳ ಹೀರೆ ಹಲಸು | ನುಗ್ಗೆ ಮಗ್ಗೆಯ ಹಲವು ಬಗೆಯ ತಾಳಿದಗಳ | ಹಿಗ್ಗುತ ಬಡಿಸಿದರಂದು | ಚಿನ್ನವರದರು ತ್ರಾಸ ಪಿಡಿಯದೆ ತೂಕದ ನೆಲೆಯನು ಚಿನ್ನ | ಕೀಸದೆ ಬಣ್ಣಲೆಕ್ಕ ವನು | ಲೇಸಾಗಿ ತಿಳಿಯೆ ಪೇಲುವ ಚಿನ್ನ ವರದರು | ಕೌಶಲತೆಯೊಳೊಪ್ಪಿಹರು|| ಹೊಯ್ಸಳನಾಡು ಬೀಡು ಸ್ಮರನ ರನ್ನ ವೀಡು ಶ್ರೀವೆಣ್ಣಿನ | ಗಾಡಿ ಶೃಂಗಾರದೇಟಿಗೆಯ | ಮೂಡಿಗೆ ಸದ್ಧರ್ಮಶಾಸ್ತ್ರದ ಹೊಯ್ಸಳ | ನಾಡು ಮೋಹಿಸಿತೇನನೆಂಬೆ || 1 ಜೈಮಿನಿಭಾರತದಲ್ಲಿಯೊ ಈ ಉಲ್ಲೇಖವಿದೆ.