ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಶತಮಾನ]        ಶಂಕರದೇವ            361

ಚಾಮರಾಜನು ತನ್ನ ಅಂಕಿತದಲ್ಲಿ ವಿರೂಪಾಕ್ಷನೆಂಬ ವಿದ್ವಾಂಸನಿಂದ ಬರೆಯಿಸಿದಂತೆ ತೋರುತ್ತದೆ.

          2 ಬ್ರಹ್ಮೋತ್ತರಖಂಡಟೀಕೆ                  
  ಇದು ಸ್ಕಾಂದಪುರಾಣದಲ್ಲಿಯ ಬಹ್ಮೋತ್ತರಖಂಡಕ್ಕೆ ಗದ್ಯರೂಪವಾದ ಕನ್ನಡವ್ಯಾಖ್ಯಾನ, ಅಧ್ಯಾಯ 22. ಇದಕ್ಕೆ ಮಣಿಪ್ರಕಾಶ ಎಂದು ಹೆಸರು ಗ್ರಂಥಾಂತ್ಯದಲ್ಲಿ ಈ ಗದ್ಯವಿದೆ__
  ರಾಜಾಧಿರಾಜ ರಾಜಪರಮೇಶ್ವರ ಶ್ರೀಚಾಮುಂಡೀಶ್ವರೀವರಪ್ರಸಾದನಾದ ಮಹಿಶೂರಪುರವರಾಧೀಶ್ವರನಾದ ಶ್ರೀ ನರಸರಾಜಭೂವರತನೂಭವನಾದ ಚಾಮರಾಜ ಭೂಪಾಲನಿಂದ ವಿರಚಿತಮಪ್ಪ ಬ್ರಹ್ಮೋತ್ತರಖಂಡಮಣಿಪ್ರಕಾಶದಲ್ಲಿ.
                 _ _ _ _
             ಜಕ್ಕಭೂಪಾಲ ಸು. 1620          
  ಈತನು ಭಾರತಕಧಾಸಂಗ್ರಹವನ್ನು ಬರೆದಿದ್ದಾನೆ. ಇವನು ರಾಜ ವಂಶಕ್ಕೆ ಸೇರಿದವನು; ಜುಂಜರಾಜನ ಮಗನು ಇವನಿಗೆ ಜಕ್ಕಣ್ಣನಾಯವ ಎಂಬ ಹೆಸರೂ ಇದ್ದಂತೆ ತಿಳಿಯುತ್ತದೆ. ಇವನ ಕಾಲವು ಸುಮಾರು 1620 ಆಗಿರಬಹುದೆಂದು ಊಹಿಸುತ್ತೇವೆ.
    ಇವನ ಗ್ರಂಥ
             ಭಾರತಕಥಾಸಂಗ್ರಹ.                 
   ಇದು ಗದ್ಯರೂಪವಾಗಿದೆ.  "ಸರ್ವತ್ರ ಜನಕ್ಕೆ ಸುಲಭವಾಗಿ ತಿಳಿವಂತೆ ಕರ್ಣಾಟಕವಚನರಚನೆಯಿಂ ಪಂಚಮಶ್ರುತಿಯಾದ ಶ್ರೀಮಹಾ ಭಾರತವನು" ವಿವರಿಸಿದಂತೆ ಕವಿ ಹೇಳುತ್ತಾನೆ. ಈ ಗ್ರಂಥದ ಒಂದು ಪ್ರತಿಯ ಆರಂಭದಲ್ಲಿ ಭಾರತಕಥೆಯಷ್ಟನು ಸಹ ವ್ಯಾಖ್ಯಾನಿಸಿದ ಜಕಣ ನಾಯಕನ ಬೊಲ್ಲಿ” ಎಂದಿದೆ.
               __ __ __ __                                                                                            
                                      
          ಶಂಕರದೇವ. ಸು 1620               
   ಇವನು ಶಂಕರಶತಕವನ್ನು ಬರೆದಿದ್ದಾನೆ. ಪ್ರಸನ್ನಶಂಕರಲಿಂಗ ಎಂದು ಮುಗಿವ 120 ಕಂದಗಳುಳ್ಳ ಒಂದು ಗ್ರಂಥವಿದೆ. ಇದಕ್ಕೆ "ಶಂಕರ ದೇವರ ಕಂದ” ಎಂದು ಹೆಸರು. ಇದೂ ಏತತ್ಕವಿರಚಿತವಾಗಿರಬಹುದು.

●6