ಈ ಪುಟವನ್ನು ಪರಿಶೀಲಿಸಲಾಗಿದೆ
362 ಕರ್ಣಾಟಕ ಕವಿಚರಿತೆ. [17 ನೆಯ
ಈತನು ವೀರಶೈವಕವಿ; ಸುಮಾರು 1620 ರಲ್ಲಿ ಇದ್ದಿರಬಹುದೆಂದು ತೋರುತ್ತದೆ.
ಇವನ ಗ್ರಂಥಗಳಲ್ಲಿ
1. ಶಂಕರಶತಕ
ಇದು ವೃತ್ತರೂಪವಾಗಿದೆ; ಪ್ರತಿಪದ್ಯವೂ ಗುರುಶಂಕರೇಶ್ವರ ಎಂದು ಮುಗಿಯುತ್ತದೆ. ಇದಕ್ಕೆ ಗುರುಶಂಕರೇಶ್ವರಶತಕ ಎಂಬ ಹೆಸರೂ ಉಂಟು. ಇದು ವೀರಶೈವವೇದಾಂತವನ್ನು ಬೋಧಿಸುತ್ತದೆ. ಇದರಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ_ _
ಮನದಧಿಕಾರನಾಗಿ ಕೆಲಸಾರಿತು ಭಕ್ತಿವಸಂತಕಾಲ ಸಂ |
ಜನಿಸಿತು ಲಿಂಗಮೋಹಲತೆಯಂಕುರಿಸಿತ್ತು ನಿಜಾನುಭಾವಮಾ ||
ವಿರತರು ಹೂತುಕಾತುದು ಶುಭೋದಯವಾದುದು ಭಾವು ಭಾಗ್ಯವೇ|
ದಿನದಿನಕಂ ಮಹಾಸುದಿನವಾಯ್ತೆನಗಂ ಗುರುಶಂಕರೇಶ್ವರಾ ||
ಮರದ ಮೊದಲ್ಗೆ ನೀರೆರೆವರಲ್ಲದೆ ಶಾಖೆಗೆ ಬೇರ ಕಟ್ಟೆಯಂ |
ವಿರಚಿಸಿ ಮತ್ತೆ ನೀರೆರೆಮೇ ತನುರೂಪದ ಕೂಪದಿಂ ಚರಾ ||
ಚರಜಗವೆಲ್ಲಮಂ ತಳೆದ ದೇವರ ಪೂಜಿಸುವರ್ಗೆ ಮಿಕ್ಕ ನಿ |
ಜ೯ರರನದೇಕೆ ಪೂಜಿಸುವ ಕೋಟಲೆ ಪೇಳುಕ್ ಗುರುಶಂಕರೇಶ್ವರಾ||
ಕಾಮದ ಗಾಳಿ ಬೀಸಿ ನೆರೆ ಕೋಪದ ಮೋಡ ಮುಸುಂಕಿ ಲಾಭಲೋ|
ಭಾಮಿಷಮಿಂಚು ಸಂಚರಿಸಿ ಮೋಹದ ಪೆಮ೯ರೇ ಪೊಯ್ದು ಮಾಯಿ ನಾ | ನಾಮದಧಾರೆಕಲ್ಕರೆದು ಮತ್ಸರಮೇಘರವಂ ತೊಡದ್ದು೯ದ |
ಯ್ಯೋಮಿಗೆ ಜೀವಹಂಸಿಗೆರವಿಲ್ಲ ಕಣಾ ಗುರುಶಂಕರೇಶ್ವರಾ ||
2 ಶಂಕರದೇವರ ಕಂದ
ಇದು ಭಕ್ತಿರಸಪ್ರಧಾನವಾಗಿದೆ, ಪ್ರತಿಪದ್ಯವೂ ಪ್ರಸನ್ನಶಂಕರಲಿಂಗ ಎಂದು ಮುಗಿಯುತ್ತದೆ.ಇದರಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ__
ಉಂಡಂತಾದುದು ಸುಖವೆಡೆ | ಗೊಂಡಂತಾದುದು ಮನಕ್ಕೆ ದಿವ್ಯಾಮೃತಮಂ | ಕೊಂಡಂತಾದುದು ನಿಮ್ಮಂ | ಕಂಡಾಕ್ಷಣದೊಳ್ ಪ್ರಸನ್ನಶಂಕರಲಿಂಗಾ || ತಗೆದಪ್ಪುತೆ ಬಿಗಿದಪ್ಪುತೆ |ನೆಗೆದಾಡುತೆ ಕೊಬ್ಬಿ ಕೊನರಿ ಕುಡಿವರಿಯುತ್ತುಂ | ಹೋದರಂತೆ ಹೊಮ್ಮುತ ರಮಿಸುವೆ | ನಗಲದೆ ನಿಮ್ಮಂ ಪ್ರಸನ್ನಶಂಕರಲಿಂಗಾ ||