ಈ ಪುಟವನ್ನು ಪರಿಶೀಲಿಸಲಾಗಿದೆ
362 ಕರ್ಣಾಟಕ ಕವಿಚರಿತೆ. [17 ನೆಯ
ಈತನು ವೀರಶೈವಕವಿ; ಸುಮಾರು 1620 ರಲ್ಲಿ ಇದ್ದಿರಬಹುದೆಂದು ತೋರುತ್ತದೆ.
ಇವನ ಗ್ರಂಥಗಳಲ್ಲಿ 1. ಶಂಕರಶತಕ ಇದು ವೃತ್ತರೂಪವಾಗಿದೆ; ಪ್ರತಿಪದ್ಯವೂ ಗುರುಶಂಕರೇಶ್ವರ ಎಂದು ಮುಗಿಯುತ್ತದೆ. ಇದಕ್ಕೆ ಗುರುಶಂಕರೇಶ್ವರಶತಕ ಎಂಬ ಹೆಸರೂ ಉಂಟು. ಇದು ವೀರಶೈವವೇದಾಂತವನ್ನು ಬೋಧಿಸುತ್ತದೆ. ಇದರಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ_ _ ಮನದಧಿಕಾರನಾಗಿ ಕೆಲಸಾರಿತು ಭಕ್ತಿವಸಂತಕಾಲ ಸಂ | ಜನಿಸಿತು ಲಿಂಗಮೋಹಲತೆಯಂಕುರಿಸಿತ್ತು ನಿಜಾನುಭಾವಮಾ || ವಿರತರು ಹೂತುಕಾತುದು ಶುಭೋದಯವಾದುದು ಭಾವು ಭಾಗ್ಯವೇ| ದಿನದಿನಕಂ ಮಹಾಸುದಿನವಾಯ್ತೆನಗಂ ಗುರುಶಂಕರೇಶ್ವರಾ || ಮರದ ಮೊದಲ್ಗೆ ನೀರೆರೆವರಲ್ಲದೆ ಶಾಖೆಗೆ ಬೇರ ಕಟ್ಟೆಯಂ | ವಿರಚಿಸಿ ಮತ್ತೆ ನೀರೆರೆಮೇ ತನುರೂಪದ ಕೂಪದಿಂ ಚರಾ || ಚರಜಗವೆಲ್ಲಮಂ ತಳೆದ ದೇವರ ಪೂಜಿಸುವರ್ಗೆ ಮಿಕ್ಕ ನಿ | ಜ೯ರರನದೇಕೆ ಪೂಜಿಸುವ ಕೋಟಲೆ ಪೇಳುಕ್ ಗುರುಶಂಕರೇಶ್ವರಾ|| ಕಾಮದ ಗಾಳಿ ಬೀಸಿ ನೆರೆ ಕೋಪದ ಮೋಡ ಮುಸುಂಕಿ ಲಾಭಲೋ| ಭಾಮಿಷಮಿಂಚು ಸಂಚರಿಸಿ ಮೋಹದ ಪೆಮ೯ರೇ ಪೊಯ್ದು ಮಾಯಿ ನಾ | ನಾಮದಧಾರೆಕಲ್ಕರೆದು ಮತ್ಸರಮೇಘರವಂ ತೊಡದ್ದು೯ದ | ಯ್ಯೋಮಿಗೆ ಜೀವಹಂಸಿಗೆರವಿಲ್ಲ ಕಣಾ ಗುರುಶಂಕರೇಶ್ವರಾ || 2 ಶಂಕರದೇವರ ಕಂದ ಇದು ಭಕ್ತಿರಸಪ್ರಧಾನವಾಗಿದೆ, ಪ್ರತಿಪದ್ಯವೂ ಪ್ರಸನ್ನಶಂಕರಲಿಂಗ ಎಂದು ಮುಗಿಯುತ್ತದೆ.ಇದರಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ__
ಉಂಡಂತಾದುದು ಸುಖವೆಡೆ | ಗೊಂಡಂತಾದುದು ಮನಕ್ಕೆ ದಿವ್ಯಾಮೃತಮಂ | ಕೊಂಡಂತಾದುದು ನಿಮ್ಮಂ | ಕಂಡಾಕ್ಷಣದೊಳ್ ಪ್ರಸನ್ನಶಂಕರಲಿಂಗಾ || ತಗೆದಪ್ಪುತೆ ಬಿಗಿದಪ್ಪುತೆ |ನೆಗೆದಾಡುತೆ ಕೊಬ್ಬಿ ಕೊನರಿ ಕುಡಿವರಿಯುತ್ತುಂ | ಹೋದರಂತೆ ಹೊಮ್ಮುತ ರಮಿಸುವೆ | ನಗಲದೆ ನಿಮ್ಮಂ ಪ್ರಸನ್ನಶಂಕರಲಿಂಗಾ ||