ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶತಮಾನ] ಶಂಕರದೇವ. 383

 ಪುಳಕದ ಜಳಕದೊಳಂಗಂ‌‌‍‍‍| ಮುರುಕಿ ಮನಂ ತುಳುಕಿ ತೂಗಿ         ತೊನೆವಾಡುತ್ತುಂ |
 ಇರುವ ಸುಖಾನಂದಾಶ್ರುವ | ನೆಳಸುವೆ ಸತತಂ ಪ್ರಸನ್ನ ಶಂಕರಲಿಂಗಾ || 
 ನಂಬಿಸಿ ಚುಂಬಿಸಿ ಪದಯುಗ | ಮುಂ ಏಗಿಬಿಗಿದಪ್ಪಿ ಹೆಪ್ಪನಿಟ್ಟಂತೆ ಮನಂ |
ತುಂಬಿದ ತೊಟೆಯವೊಲಿಹ ಸುಖ|ಮಂ ಬಯಸುವೆನಾಂ ಪ್ರಸನ್ನ ಶಂಕರಲಿಂಗಾ |
 ಪಡಕ್ಷರರಗಳೆ, ಭಕ್ತಿಬಿನ್ನಹದರಗಳೆ, ವೀರಶೈವರಗಳೆ, ಮೈದುನ                ರಾಮನರಗಳೆಎಂಬ ಗ್ರಂಥಗಳ ಕೊನೆಯಲ್ಲಿ ಪ್ರಸನ್ನ ಶಂಕರಲಿಂಗ ಎಂದು    ಮುಗಿವ ಕಂದಗಳು ದೊರೆವುದರಿಂದ ಈ ಗ್ರಂಥಗಳೂ ಏತತ್ಕವಿಕೃತವಾಗಿ ರಬಹುದೆಂದು ತೋರುತ್ತದೆ.
               ಪ್ರಡಕ್ಷರರಗಳೆ
ಇದರಲ್ಲಿ 71 ನುಡಿಗಳಿವೆ ; ಒಂದೊಂದೂ ಓಂನಮಶ್ಶಿ ಎಂದು ಮುಗಿಯುತ್ತೆದೆ. ಒಂದೆರಡು ನುಡಿಗಳನ್ನು ಉದಾಹರಿಸುತೇವೆ -

ಹುಲಿಗೆ ಹುಲ್ಲೆ ಸಿಲ್ಕಿದಂತೆ ಘೋರತರವಿಕಾರವಾರ್ಧಿ |

ಯೊಳಗೆ ಬಿದ್ದೆನಯ್ಯ ಶಂಕರಾಯ ಓಂನಮಶ್ಶಿವಾಯ || 
ತನುವಿಕಾರವೆನ್ನ ತಿಂದು ತೇಗಿ ನಿಮ್ಮ ಮುಂದೆ ಕೂಗಿ | ತೊನೆಯಲೀಯದಯ್ಯ ಶಂಕರಾಯ ಓಂನಮಶ್ಶಿವಾಯ | ತ್ರಿದಶಚಾಸದಂತೆ ಕೆಡುವ ಹೊನ್ನ ಹೆಣ್ಣ ಮಣ್ಣ ನಚ್ಪಿ| 

ಮದಡನಾದೆನಯ್ಯ ಶಂಕರಾಯ ಓಂನಮಶ್ಶಿವಾಯ ||

           - ಭಕ್ತಿಬಿನ್ನಹದರಗಳೆ.
ಇದರಲ್ಲಿ 138 ನುಡಿಗಳಿವೆ. ಎರಡನ್ನು ಉದಾಹರಿಸುತ್ತೇವೆ--
ಹೊನ್ನೆಂಬ ಹೊಲೆಹೊದ್ದಿ ಹುಸಿಯ ಹಸರವ ಹರಹಿ |
ಅನ್ನಿಗರ ಮೆಚ್ಚಿಸುವ ವೇಷವಿದ್ಯವ ಹರಹಿ ||
ಸುರತರುವ ಕಡಿದು ಎಲವದಮರಕೆ ನೀರೆರೆದು | 

ನೂರೆವಾಲ ಚೆಲ್ಲಿ ತಾಟಿಯ ಬಯಸಿ ಬಾಯ್ದೆರೆದು |

              ವೀರಶೈವರಗಳೆ.
 ಇದರಲ್ಲಿಯೂ 138 ನುಡಿಗಳಿವೆ. ಒಂದನ್ನು ಉದಾಹರಿಸುತ್ತವೆ:-
ತನ್ನ ನೆನೆವವಗ್ಗೆ೯ ತನ್ನನಿತ್ತು ಪರಮಭಕ್ತಿಸುಖದ | 
ರನ್ನ ದೊಡಿಗೆಯಂ ಸಮಂತು ತೊಡಿಸುತಿರ್ಪ ವೀರಶೈವ||