ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 385 ಶತಮಾನ]


           ಸೋಸಲೆ ರೇವಣಾಚಾರ್ಯ
          ಸೋಸಲೆ ರೇವಣಾಚಾರ್ಯ ಸು 1623 

ಈತನು ಮಹಿಮ್ನಸ್ತವ, ವೀರಶೈವಸಿದ್ಧಾಂತಶಿಖಾಮಣಿ, ಶಿವಾಧಿಕ್ಯ ಶಿಖಾಮಣಿ, ಸದ್ಗುರುರಗಳೆ ಇವುಗಳಿಗೆ ಕನ್ನಡವ್ಯಾಖ್ಯಾನವನ್ನೂ ಶಾರೀರ ಪ್ರಕಾಶಿಕೆ, ಅತಃಕರಣಪ್ರಕಾಶಿಕೆ, ಸ್ವಸ್ವರೂಪಪ್ರಕಾಶಿಕೆ, ಪರಮಾತ್ಮಪ್ರಕಾ ಶಿಕೆ, ನಿಜದೀಪ್ತಿಪ್ರಕಾಶಿಕೆ ಎಂಬ ಗ್ರಂಧಗಳನ್ನೂ ಬರೆದಿದ್ದಾನೆ. ಇವನು ವೀರಶೈವಕವಿ; ತನ್ನ ಪರಂಪರೆಯನ್ನು ಹೀಗೆ ಹೇಳಿಕೊಂಡಿದ್ದಾನೆ -ರೇಣು ಕಾಚಾಯ೯ವಂಶೋದ್ಬವ ವಿಶ್ವನಾಧ ; ಅವನ ಮಗ ವಾರಾಣಸೀಶ; ಅವನ ಮಕ್ಕಳು ವೀರಾಯ೯, ಸರ್ವೆಶ್ವರ, ಸರ್ವೆಶ್ವರನ ಮಗ ವೀರಣ, ಅವನ ಮಗ ರೇವಣಾಯ೯ ; ಅವನ ಮಗ ಕವಿ ರೇವಣಾಚಾಯ೯ ಅಥವ ರೇಣುಕಾಚಾಯ್ಯ, ತನ್ನನ್ನು.

ಶ್ರೀಮದ್ವೇದವೇದಶಿರಶ್ಶಿವಾಗಮವುಣ್ಯ ಪುರಾಣಪ್ರಭೃತಿಪ್ರಭೂತಪ್ರಧಿತಪ್ರಮ ಧಸಂಗೀತಗೀತವಿದ್ಯಾನವದ್ಯ ಶ್ರೀ ವೀರಶೈ ವಷಟ್ಟತ ಶಿವಯೋಗಶಿವಾದ್ವೈ' ತಸತ್ಪದ ಪ್ರತಿಷ್ಠಾಪನಾಚಾಯ್ಯವಯ್ಯ ಎಂದು ವಿಶೇಷಿಸಿ ಹೇಳಿಕೊಂಡಿದ್ದಾನೆ. ಮಹಿಮ್ಮ ಸ್ತವಟೀಕೆಯನ್ನು ಚಿಕ ನಾಯಕಪುರದ ಅರಸಾದ ಮುದಿನಾಯಕನ ಸಂತೋಷಾರ್ಧ ವಾಗಿ ಸೋಮ ಶೇಖರಯೋಗಿ ತನ್ನಿಂದ ಮಾಡಿಸಿದಂತೆ ಹೇಳುತ್ತಾನೆ. ಈ ಮುದಿನಾಯಕನು 1623 ಯಲ್ಲಿ ಇದ್ದಂತೆ ಚಿಕ್ಕನಾಯಕನಹಳ್ಳಿ 1 ನೆಯ ಶಾಸನದಿಂದ ತಿಳಿ. ಯುತ್ತದೆ. ಕವಿಯ ಕಾಲವೂ ಅದೇ.

ಇವನ ಮಹಿಮ್ನ ಸ್ತವಟೀಕೆಗೆ ಮಹಿಮ್ನಃಪ್ರದೀಪಿ ಎಂದು ಹೆಸರು ಈ ಟೀಕೆಯ ಅಂತ್ಯಭಾಗದಲ್ಲಿ « ಶಶಿಕಲೆಯೆಂಬ ಸರ್ವಲಘುವೃತ್ತ” ಎಂಬ ಹೆಸರಿನಿಂದ ಒಂದು ವೃತ್ತವಿದೆ. ಇದು ಟೀಕಾಕಾರನಿಂದ ರಚಿತವಾಗಿರ ಬಹುದು, ಇದನ್ನು ಇದ್ದ ಹಾಗೆ ಕೆಳಗೆ ಬರೆಯುತ್ತೇವೆ-

ಹರಿಹರಹರಿತ ರಿಹರಿಸಖದೃಗವ ಹರಿಸುರವರಹರಿಹರಿನತಚರಣ | ಹರಿಸುತಹರಹರ ಹರಿವರಕಟಕನೆ ನರಹರಿ ಹರಹರಹರಿವರವಕುಟ || ಭವಭವಹರಹರ ಗಣಗಣಪತಿಪಿತ ಪಶುಪಪರಮಶಿವಪದಪದವಚನ | ವೃಷಭಗಭಗಪಡನಗಗುರು ನಿಗಮಗಗುಹಷಿತ? ಇಹರಸುರಹರಯಮಹರ || 1 ಚಿಕನಾಯಕಪೂಷ್ಕತು೯ದಿನಾಯಕ ಭೂಭುಜ:ಮುದೇ ಟೀಕಾ ಕಾರಿತೇಯಂ ಸೋಮಶೇಖರಯೋಗಿನಾ ||