366 ಕರ್ಣಾಟಕ ಕವಿಚರಿತೆ. [17 ನೆಯ ಇವನು ಬರೆದ ವೀರಶೈವಸಿದ್ಧಾಂತಶಿಖಾಮಣಿಟೀಕೆಗೆ ಸಿದಾ ರ್ಥ ಸಂಬೋಧಿನಿ ಎಂದು ಹೆಸರು. ಇದನ್ನು ಭೋಗಮಲ್ಲೇಶನ ಶಿಷ್ಯನಾದ ಸಿದ್ದ ವೃಷೇಶ್ವರನ ಆಜ್ಞಾನುಸಾರವಾಗಿ ಬರೆದಂತೆ ಹೇಳುತ್ತಾನೆ. ಶಿವಾಧಿಕ್ಯ ಶಿಖಾಮಣಿಟೀಕೆಯನ್ನು ಕಳಲೆಕೆಂಪನಂಜಾರ್, ನಮಸ್ಕಾರಪುರೀಸಿದ್ಧ ನಂಜಾಲ್ಯ, ಸುತ್ತೂರುನಿಂಹಾಸನದ ಗುರುನಂಜಾರನ ಶಿಷ್ಯ ಚೆನ್ನಬಸವ ಈ ಮೂವರುಗಳ ಇಚ್ಛಾನುಸಾರವಾಗಿ ಬರೆದಂತೆ ಹೇಳುತ್ತಾನೆ. ಮುದಿ ಗೆರೆ ರಘುವಪ್ಪನಾಯಕನೂ ಈ ಗ್ರಂಥರಚನೆಗೆ ಕಾರಣಭೂತನೆಂಬ ಅಂಶವು ಈಗ್ರಂಥದ ಈ ಭಾಗದಿಂದ ತಿಳಿಯುತ್ತದೆ.-- ಮುದಿಗೆರೆ ರಘುವಪ್ಪನಾಯಕರು ಸೋಸಲೆರೇವಣಾರಾಧ್ಯರನ್ನು ಕರೆಯಿಸಿ ಸಭೆ ಯಲ್ಲಿ ಸಮಸ್ತವೈಷ್ಣವರೊಡನೆ ಕೂಡಿ ಮಾಡಿದ ಪ್ರಶ್ನೆ:-ಮೊದಲು ವಾಲ್ಕುರಿಕೆ ಸೋಮಾರಾಧ್ಯರು ಚಕ್ರಪಾಣಿಗಂಗನಾಧನನು ವಾದದಲ್ಲಿ ಜಯಿಸಿ ಶಂಕಾಪರಿಹಾರ ವಿಲ್ಲದೆ ಶಿವನೇ ಘನವೆಂದು ಸೋಮನಾಧಭಾಷ್ಯ ವಂ ಮಾಡಿದರು. ಕೆರೆಯಪದ್ಮರ ಸರು ತ್ರಿಭುವನತಾತನನು ವಾದದಲಿ ಜಯಿಸಿ ಶಂಕಾಪರಿಹಾರವಿಲ್ಲದೆ ಶಿವನೇ ಘನ ವೆಂದು ಸಾನಂದಚರಿತೆಯಂ ಮಾಡಿದರು. ಈಗ ನೀವು ಸಮಸ್ತ ದರ್ಶನದವರೊಡನೆ ಕೂಡಿದ ಎನ್ನ ಶಂಕಾಪಹಾರವನು ಮಾಡಿ ವಾದದಲ್ಲಿ ಜಯಿಸಿ ಎಂದು ಪ್ರಶ್ನೆಯ ಮಾಡಲಾಗಿ-ಸೋಸಲೆ ರೇವಣಾರಾಧ್ಯರು ಹಿಂಡಿ ರುರುಳನೆನಿಸಿ ಗುಪ್ತಗಣೇಶ್ವರನಾದ ರೇವಣಸಿದ್ದೇಶ್ವರನು ವೈಷ್ಣವಚೋಳನನು ಜಯಿಸಿ ವೈಷ್ಣವಕೆ೦೪ಹಳವೆಂಬ ಹನ್ನೆ ರಡುಸಾವಿರಗ್ರಂಧವನು ಬರೆದರು, ಅದರ ಸಾರವನು ತೆಗೆದು ಶಿವಾಧಿಕ್ಯ ಶಿಖಾಮಣಿ ಯನು ಮಾಡುತ್ತೇನೆ ಎಂದರು. ಬಳಿಕ ಈ ಗ್ರಂಥಗಳ ಹೆಸರುಗಳು ಹೇಳಿವೆ:-ರಾಜಮಹೇಂದ್ರದಲ್ಲಿ ಈಶಾನಗುರುಗಳು ಸಂಸ್ಕೃತಕಾವ್ಯವಾಗಿ ಹೇಳಿದ ಸಿದ್ದೇಶ್ವರಚಾರಿತ್ರ, ಹರಿ ಹರದೇವರು ಹೇಳಿದ ರೇವಣಸಿದ್ದ ಶ್ವೆರರಗಳೆ, ಚತುರ್ಮುಖಬೊಮ್ಮರ ಸರು ಹೇಳಿದ ಸಿದ್ದೇಶ್ವರಪುರಾಣ
ಶಾರೀರಪ್ರಕಾಶಿಕೆ ಮೊದಲಾದ 5 ಗ್ರಂಥಗಳು ವೀರಶೈವವೇದಾಂತ ವನ್ನು ಬೋಧಿಸುತ್ತವೆ. ಇವ ಒಂದೇ ಗ್ರಂಥದ 5 ಭಾಗಗಳಾಗಿರಬಹುದು.
ಆರಂಭದಲ್ಲಿ ಈ ಶ್ಲೋಕವಿದೆ --- ಗುರುಂ ವೀರೇಶ್ವರಂ ನತ್ವಾ ರೇವಣಸಿದ್ಧಯೋಗಿನಂ || ಸುತ್ವಾ ತನ್ನಾಮತಃ ಕುರ್ವೆ ಶ್ರೀಶಾರೀರಪ್ರಕಾಶಿಕಾಂ ||