ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ ರಾಮಚಂದ್ರ. ತಿ? ನಿಜದೀಪ್ತಿಪ್ರಕಾಶಿಕೆಯ ಅಂತ್ಯದಲ್ಲಿ ಈ ಪದ್ಯವಿದೆ ಭ್ರಾಂತಿನಿರಸನವ ಮಡಿದ | ಚಿಂತೆಯೊಳೇ ಚಿಂತಿಸುತ್ತಿರುವ ಶಾಂತರ್ | ಅಂತಿಂತೆನ್ನದೆ ನಿಜಗುರು | ಶಾಂತನ ನೆರೆದೆಲ್ಲ ಪರಮಸುಖಿಯಾಗಿರ್ಪಗ್ |


ಸಿದ್ದನಂಜಯತಿ 1623 ಈತನು ಚೋಳರೇಣುಕಾಚಾಯ್ಯನ ಶಿವಾಧಿಕಶಿಖಾಮಣಿಗೆ ಕನ್ನಡ ಟೀಕೆಯನ್ನು ಬರೆದಿದ್ದಾನೆ. ಇವನು ವೀರಶೈವಕವಿ, ನಮಸ್ಕಾರ ಪುರೀ ನಿಂಹಾಸನದ ಶಿವನಂಕಾರದೇವನ ಶಿಷ್ಯನು, ಕಳಿಲೆಕೆಂಪನಂಜಯ್ಯನಪ್ರಾರ್ಥ ನಾನುಸಾರವಾಗಿ ಈ ಟೀಕೆಯನ್ನು ಬರೆದಂತೆ ಹೇಳುತ್ತಾನೆ. ಇವನ ಟೀಕೆಗೆ ವೀರಭದ್ರೀಯ ಎಂದು ಹೆಸರು. ಇವನು ಸೋಸಲೆರೇವಣಾಚಾರನ (1623) ಸಮಕಾಲದವನು |

ರಾಮಚಂದ್ರ ಸು. 1625 ಈತನು ಅಶ್ವ ಶಾಸ್ತ್ರವನ್ನು ಬರೆದಿದ್ದಾನೆ. ಇವನು ಬ್ರಾಹ್ಮಣಕವಿ ಯೆಂದು ತೋರುತ್ತದೆ, ಬಿರುದೆಂತೆಂಬರಗಂಡ ಕಠಾರಿಯಸಾಳ್ವ ವೈರಿ ಗಜಗಂಡಭೇರುಂಡ ಚಾಮುಂಡಿಕಾವರಪ್ರಸಾದನಾದ ಮಹಿಸೂರು ನರಸ ರಾಜೇಂದ್ರನಂದನ ಚಾಮರಾಜಭೂವರನ' ಪ್ರೋತ್ಸಾಹದಿಂದ ಈ ಗ್ರಂಥ ವನ್ನು ಬರೆದಂತೆ ಹೇಳುತ್ತಾನೆ. ಈ ಚಾಮರಾಜನು 1617 ರಿಂದ 1637 ರ ವರೆಗೆ ಆಳಿದುದಾಗಿ ತಿಳಿವುದರಿಂದ ಕವಿಯ ಕಾಲವು ಸುಮಾರು 1625 ಆಗಬಹುದು ಇವನ ಗ್ರಂಥ

                     ಅಶ್ವಶಾಸ್ತ್ರ 

ಇದು ಶಾಲಿಹೋತ್ರನ ಅಶ್ವ ಶಾಸ್ತ್ರಕ್ಕೆ ವಾಕ್ಯರೂಪವಾದ ಕನ್ನಡ ಭಾಷಾಂತರ; ಅಧ್ಯಾಯ18. "ಶಾಲಿಹೋತ್ರನಹೇದ ಶಾಸ್ತ್ರಕ್ರಮದಿಂದ ಬಾಲಕರeವಂತೆ ಸಾಂಗೋಪಾಂಗವಾಗಿ ಕನ್ನಡಿಸಿದೆನು” ಎಂದು ಕವಿ ಹೇಳುತ್ತಾನೆ. ಇದರಲ್ಲಿ ಕುದುರೆಗಳ ವಯಸ್ಸು, ಹಲ್ಲು, ಸುಳಿ, ವ್ಯಾಧಿಗಳಿಗೆ. 1. 385ನೆಯ ಪುಟವನ್ನು ನೋಡಿ.