ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

391 ಶತಮಾನ] ಸಿದ್ಧ ನಂಜೇಶ. ಕವಿ ಸಂಗ್ರಹಿಸಿದಂತೆ ಹೇಳುವುದರಿಂದ ಇವನು 1530 ರಿಂದ ಈಚೆಯ ವನು ಎಂಬುದು ಸ್ಪಷ್ಟವಾಗಿದೆ. ಸುಮಾರು 1600 ರಲ್ಲಿದ್ದ ಸಂಪಾದನೆಯ ಸಿದ್ದವೀರಾಚಾರ್ಯ ನ ಹೆಸರನ್ನು ರಾಘವಾಂಕಚಾರಿತ್ರದ ಅಂತ್ಯಭಾಗದಲ್ಲಿ ಹೇಳಿರುವುದರಿಂದ ಅವನ ಕಾಲಕ್ಕೂ ಈಚೆಯವನಾಗಿರಬೇಕು; ಸುಮಾರು 1650 ರಲ್ಲಿ ಇದ್ದಿರಬಹುದು. ಪೂರ್ವಕವಿಗಳಲ್ಲಿ ಹರಿದೇವ, ಕೆರೆಯ ಪದ್ಮರಸ, ರಾಘವಾಂಕ, ಪಾ ಲ್ಕುರಿಕಸೋಮೇಶ್ವರ, ಭೀಮಕವಿ, ಲಕ್ಕಣ್ಣ ದಂಡೇಶ, ಜಕ್ಕಣಾಚಾರ್ಯ ಚಾಮರಸ, ಮಗ್ಗೆಯಾಚಾರ್ಯ, ಕಲ್ಲಮಠದಾಚಾರ್ಯ, ಸಿಂಗಿರಾಜ, ಬಸವ ಸೌರಾಣದ ಮಲ್ಲಣಾರ್ಯ (1530) ಇವರುಗಳನ್ನು ಸ್ಮರಿಸಿದ್ದಾನೆ. ಅಲ್ಲದೆ ಪದ್ದತಿಯ ಪ್ರಕಾರ ಬಾಣ, ಕಾಳಿದಾಸ, ಮಳಯರಾಜ, ಮಲುಹಣ, ಹಲಾಯುಧ, ಗುಜ್ಞರ, ಭೋಜ, ದಂಡಿ, ಮಯೂರ ಇವರುಗಳನೂ, ಸ್ತುತಿಸಿದ್ದಾನೆ. ಇವನ ಗ್ರಂಥಗಳಲ್ಲಿ 1 ರಾಘವಾಂಕ ಚಾರಿತ್ರ - ಇದು ವಾರ್ಧಕಸಟ್ವದಿಯಲ್ಲಿ ಬರೆದಿದೆ; ಸಂಧಿ I9, ಪದ್ಯ 1521. ಇದರಲ್ಲಿ ರಾಘವಾಂಕಕವಿಯ (ಸು, II65) ಚರಿತ್ರವು ಹೇಳಿದೆ. ಈ ಗ್ರಂಥರಚನೆಗೆ, “ಸುಶಾಂತಬಂಧುರ ಸಂಸ್ಕೃತಪ್ರಾಕೃತೋಭಯಕವಿತ್ವಾಯಿ ಲರ ಶಿರೋಮಣಿಯೆನಿಪ ನಂದೀಶಕವಿಯ ಕೃಪೆಯಿಂ ಪ್ರಕಟಮಂ ಮಾ ಡಿದೆಂ', “ಕರ್ಣಾಟಕಕವಿತ್ವ ಕೋವಿದ ಪಂಚವಣ್ಣಿಗೆಯಸಿದ್ದ ನಂಜೇಶಾಂ ಘ್ರಕಮಲಮದುವ ರಾಜವಟ್ಟ ಯಾರಾಧ್ಯನ ಕೃಪೆಯಿಂ ಗ್ರಂಥ ಪೂರ್ಣವಾ ಯಿತು ಎಂಬ ಪದ್ಯಭಾಗಗಳಿಂದ ನಂದೀಶಕವಿಯೂ ರಾಚವಟ್ಟಯಾರಾಧ್ಯನೂ ಸಹಾಯಕರಾಗಿದ್ದಂತೆ ತಿಳಿಯುತ್ತದೆ ಈ ಕಾವ್ಯದ ಉತ್ಕೃಷ್ಟವಿದುಯನ್ನು ಕವಿ ಹೀಗೆ ಹೇಳಿದ್ದಾನೆ‌

ಇದುವೆ ರಸಿಕರ ರಸಾಯನ ಕಬ್ಬಿಗರ ಕಬ್ಬ | ವಿದು ಪ್ರೇಮದಿಂ ಕೇಳ್ವ ಜನದ ಕರ್ಣಾಭರಣ | ವಿದುವೆ ಸೊಬಗರ ಸೊಬಗು ಕೋವಿದರ ಕೊರಲ ಹಾರಂ ಗಮಕಿಗಳ ಗಮಕವು|| I Vol I, I80