ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

383 ಶತಮಾನ] ಸಿದ್ಧನಂಜೇಶ ಇವನ ಬಂಧವು ಧಾರಾಳವಾಗಿದೆ. ಈ ಗ್ರಂಥದಿಂದ ಕೆಲವು ಪದ್ಯ ಗಳನ್ನು ತೆಗೆದು ಬರೆಯುತ್ತೇವೆ__ ರಾಘವಾಂಕನ ಸ್ತುತಿ ಸುರಸಭಾವನಯುತಂ ಕವಿತೆಯೊಳು ಹೃದಯದೊಳು | ಸುರಸಭಾವನಯುತಂ ಮನನದೊಳು ಯಕ್ಷ ತನು || ಸುರಸಭಾವನಯುತಂ ತಾನಲ್ಲದಿಲ್ಲೆನುತೆ ಸತ್ಸಂಡಿತರು ತುತಿಸಲು || ಹರಿಹರಮಹೋದಯಂ ಶುಶ್ರೂ ಷೆಗೆಯ್ದು ನರ || ಹರಿಹರಮಹೋದಯಂ ಕಾಕತಿಪಸಭೆಯಲ್ಲಿ | ಹರಿಹರಮಹೋದಯಂ ಶರಣಾಗತಗ್ಗೆ ೯ನಿಸಿ ಮೆಣಿದನಾರಾಘವಾಂಕಂ || ಚಂದ್ರೋದಯ ಕಂದುಗೊರಲಂ ತನ್ನ ಚೆಲುವ ನಿಟ್ಟಿಸುವಡೆ ಪು | ರಂದರಂ ಸಿಡಿದ ಮಾಣಿಕಗನ್ನಡಿಯೊ ಪ್ರಾಚಿ | ಯೆಂದೆಂಬ ಪೆಣ್ಣ ಬೈತಲೆವಣಿಯೊ ಸುರಗಜದ ತಲೆಗೆ ಪೂಸಲು ಕಲಸಿದ || ಸಿಂದೂರಪಿಂಡವೋ ಚಕ್ರಯುಗವಿರಹಾಗ್ನಿ | ಯೊಂದುರುಳಿಯೋ ಸ್ಮರನ ಕೆಂಬರಲ ಚೆಂಡೊ ತಾ || ನೆಂದೆಂಬಭಿಪ್ರಾಯಮಂ ಬೀಣಿದುದು ಚಂದ್ರಬಿಂಬವುದಯಾಚಲದೊಳು || ಸೂರ್ಯೋದಯ ಪಾಣಿತ್ತು ಭ್ರಮರ ಶತಪತ್ರದಿಂ ವಿರಹಾಗ್ನಿ | ಯಾಣಿತ್ತು ಚಕ್ರಕ್ಕೆ ಜೊನ್ನವಕ್ಕಿಗೆ ದುಗುಡ | ಹೇಳಿತ್ತು ಚಂದ್ರಕಳೆ ಜಾಳಿತ್ತು

ಕುಮುದಕಣಿಲ್ತೋಳಿತ್ತು ತಮಕೆ ಕೇಡು || ಸಾರಿತ್ತುವುಡುಕಾಂತಿ ತಾಕತ್ತು ಕಮಲದೊಲ | ಮೀಣಿತ್ತು ಮುಂಗೋಟ ಚೀಣಿತ್ತುವೆಲರ್ ತಂಪ | “ಬೀಡಿತ್ತು ಮಡಕೆಂಪೇಣಿತ್ತು ರವಿಯುದಿಸಲು ಜ್ಜುಗಂಗೆಯ್ವಾಗಲು || ಏಳುಬಗೆಯ ಪಟ್ವದಿ (ಒಂದೇ ಆನುಪೂರ್ವಿಯಲ್ಲಿ ಬರೆದಿದೆ)

ವಾರ್ಧಕ ಶರವಣ ಜನಕಗರಸುರುಚಿರಗರಧರ ಪುರ | ಹರಿಹರವರದಕರರುಷಿರುಜುರುಚಿಗನುರಣರು |