ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

404 ಕರ್ಣಾಟಕ ಕವಿಚರಿತ [17ನೆಯ ಒದ್ದು ಕೊಂಡತಿಮೊರೆದು ಹಲುಗಡಿ | ದದ್ದು ಕಣ್ಣುಗಳುಸಿರು ಭೋರಿ | ಟ್ಟುದ್ದ ಕೇಳುತಲಿಹನು ನರನೀಪರಿಯ ಮರಣದಲಿ || ಸ್ತ್ರೀಯರು ಮನುಮತನ ಮಸಗಣೆಗಳೋ ಮುನಿ | ಜನದ ಚಿತ್ತಾಂಬುಧಿಯ ಕಲಕಲು | ಜನಿಸಿದಾನೆಗಳೋ ವಿಚಾರಿಸಲರಿದು ಯೋಗಿಗಳ || ಮನವನೊಡೆಹೊಯ್ವಸಿಗಳೋ ಸುರ | ವನಿತೆಯರುಗಳೊ ವಿಟರ ಭಾಗ್ಯದ | ವನವೊ ವರ್ಣಿಸಬಲ್ಲ ಕವಿಯಾರರಸ ಕೇಳೆಂದ || ವೆಂಕಕವಿ, ಸು.1650. ಈತನು ವೆಂಕಟೇಶ್ವರಪ್ರಬಂಧವನ್ನು ಬರೆದಿದ್ದಾನೆ. ಇವನು ಬ್ರಾಹ್ಮಣಕವಿ; ಸಿಂಗಪಭಟ್ಟನ ಮಗನು. “ಹರಿ ಕೋಟೆಬೆಟ್ಟದೊಳೆ ನಿಂದಂ ಕೋಟೆರಾಯಾಖ್ಯೆಯಿಂ” ಎಂದು ಆಶ್ವಾಸಗಳ ಅಂತ್ಯದಲ್ಲಿರುವುದ ರಿಂದಲೂ ಬೆಟ್ಟದಕೊಟೆರಾಯನ ಸ್ತುತಿ ಅಲ್ಲಲ್ಲಿರುವುದರಿಂದಲೂ ಕವಿ ಬೆಟ್ಟದಕೋಟೆಯವನೆಂದೂ ಗ್ರಂಥವು ಅಲ್ಲಿಯ ದೇವರವಿಷಯವಾದು ದೆಂದೂ ತೋರುತ್ತದೆ. ಗುಂಡಲಪೇಟೆ ತಾಲ್ಲೂಕಿನಲ್ಲಿರುವ ಹಿಮವದ್ಗೋ ಪಾಲಸ್ವಾಮಿಬೆಟ್ಟದ ಪ್ರಾಂತಕ್ಕೆ ಬೆಟ್ಟದಕೋಟೆಯೆಂದು ಪೂರ್ವದ ಹೆಸರು. ಕವಿಯ ಕಾಲವು ಸುಮಾರು 1650 ಆಗಿರಬಹುದೆಂದು ತೋರುತ್ತದೆ. ತನ್ನ ಕವಿತೆಯವಿಷಯವಾಗಿ ಹೀಗೆ ಹೇಳಿಕೊಂಡಿದ್ದಾನೆಧೀಮಂತಂ ಕವಿವೆಂಕನಾತನ ವಚಃಪ್ರೌಢಿಪ್ರಭಾವಂ ಮಹಾ |ಭೂಮಿಾಭೃತ್ಸಭೆಯಲ್ಲಿ ನೂತ್ನ ಕವಿತಾವಿಖ್ಯಾತಿ ವಿದ್ವಾಂಸರಿಂ || ಮಾಮಾಸ್ತೋತ್ರತೆವೆತ್ತು ಲೋಕದೆ ನೆಗಟ್ಟಿತ್ತಾ ಸುಧಾಧಾರೆವೋಲ್ | ಈತನ ಗ್ರಂಥ ವೆಂಕಟೇಶ್ವರಪ್ರಬಂಧ. ಇದು ಚಂಪೂರೂಪವಾಗಿದೆ; ಬೆಟ್ಟದಕೊಟಯ ವೆಂಕಟೇಶ್ವರ ಸ್ವಾಮಿಯ ವಿಷಯವಾದ ಗ್ರಂಥವು. ನಮಗೆ ದೊರತ ಪ್ರತಿ ಅಸಮಗ್ರ. ಈ ಗ್ರಂಥದ ಉತ್ಕೃಷ್ಟತೆಯನ್ನು ಕವಿ ಹೀಗೆ ಹೇಳಿದ್ದಾನೆ ಈಕೃತಿ ಧಾತ್ರಿಗಲಂಕೃತಿ | ಮಾಕವಿಗಳ ಮನದ ಗೆಲವಿನಾಕಾರಂ ತಾಂ | ಲೋಕದ ಸಂತೋಷಂ ಸುವಿ | ವೇಕಿಗಳಿಷ್ಟಾರ್ಧಸಿದ್ದಿ ಧರಣೀತಳದೊಳ್ ||