403 ಶತಮಾನ ನರಹರಿ ಶೈಶವ ಹಿಡಿದು ಬಿಸಿಬಿಸಿನೀರನೆರೆಯಲು | ನುಡಿಯಲರ' ಯದೆ ತನ್ನೊಳಗೆ ಕಂ | ಗೆಡುತ ನಸುಸೊಪ್ಪಾಗಿ ಬೀಳುತ ಹಸಿದಳಲು ಮೊಲೆಯ || ಕೊಡದೆ ದೃಷ್ಟಿಯ ಮಂತ್ರಿಸುತ ಕ | ಪ್ಪಿಡುತ ನೆಟ್ಟಿಯ ಮುರುಹಿ ಶೂಪಿರಿ | ದೊಡನೆ ತೊಟ್ಟಿಲ ತೂಗುತಿಹರೀಮರುಳುನರರೆಂದ || ನಿಚ್ಚ ಮಲದೊಳು ಹೊರಳಿ ಮಗ್ಗು ಲೊ | ಳುಚ್ಚೆಹೊಯ್ದರುವೆಗಳ ಬಲುಬಲು | ಗೊಚ್ವೆನಾತನ ಸೈರಿಸದೆ ಕೆಕ್ಕರಿಸಿ ಕೈಕಾಲ || ಬೆಚ್ಚಿ ಬೆದರುತ ಹಸಿದು ಚರಣವ | ಕಚ್ಚಿ ಹೀರುತ ಬೇವುದೀಪರಿ | ಹುಚ್ಚರೈ ಸಂಸಾರಸುಖವೆಂದೆಂಬರಕಟೆಂದ || ಯೌವನ ಮೇಲೆ ಪ್ರಾಯಕನಾಗಿ ಕಾಮನ | ಕೋಲ ಗಾಯಕೆ ತಲ್ಲಣಿಸಿ ಪರ | ರಾಲಯಂಗಳ ಹೊಕ್ಕು ಬವಣೆಗೆ ಬಂದು ನಾರಿಯರ || ವೇಳಗಳನೇ ಕಾದು ಹೊಟ್ಟೆಗೆ | ಕೂಳ ಕಾಣದೆ ಹಸಿದು ಚಿಂತಿಸಿ | ಗೋಳಿಡುತಲಿಹನಿರುಳುಹಗಲೆವ್ವನದೊಳಿಂತೆಂದ || ವಾರ್ಧಕ್ಯ ಉದುರಿ ಹಲು ಬೆನ್ನುರುಗಿ ಕೈಕಾ | ಲುಡುಗಿ ಪುಸ್ತಕ ನಡುಗಿ ರೋಗದ | ಸದಮದದ ಬಲೆಯೊಳಗೆ ಬಿದ್ದತಿಕೆಮ್ಮಿ ಕೆಕ್ಕರಿಸಿ || ಎದೆಯೊಡೆದು ಕಂಗೆಟ್ಟು ಗೋಳಿ | ಟ್ಟೊದರುತೀಪರಿ ನರನು ವೃದ್ದಾ | ಪ್ಯದೊಳು ಬಿದ್ದಿ ಹನಕಟ ಸುಡುಸುಡು ಬದುಕು ಬೇಡೆಂದ || ಅವಸಾನಕಾಲ ಇತ್ತ ರೋಗದವಸ್ಥೆ ಒಳಿಕಿ | ನೃತ್ಯ ಸಾಲಿಗರುರುಬೆ ಸತಿಸುತ | ಮಿತ್ರರುಗಳೇನುಂಟು ಧನ ಹೇಳೇಬ ನಿಷ್ಟುರತೆ || ಎತ್ತಿ ನಾರ್ವೆರುಗಳ ಕುಡಿಸುವ | ರುತ್ತರದ ಬೊಬ್ಯಾಟ ಯಮನವ | ರೊತ್ತರದ ಬಲುಭೀತಿ ಮರಣಕೆ ಸಮತೆಗೊಡದೆಂದ || ಬಿದ್ದು ನಾಲಗೆ ಬಾಯ ಬಸಳೆಗ | ಳೆದ್ದು ನಡೆನುಡಿಯಡಗಿ ಮರನೆಯು | ಹೊದ್ದಿ ನೆರೆ ಮುಕ್ಕುರಿಕಿ ಕರಚರಣಗಳ ನರ ಸೇದಿ ||
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೮೮
ಗೋಚರ