ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

408 ಕರ್ಣಾಟಕ ಕವಿಚರಿತೆ [17 ನೆಯ ಈತನ ಗ್ರಂಥ - ಪ್ರಹ್ಲಾದಚರಿತ್ರೆ ಇದು ಭಾಮಿನೀಷಟ್ಪದಿಯಲ್ಲಿ ಬರೆದಿದೆ,ಸಂಧಿ 17, ಪದ್ಯ 1111,ಇದ ರಲ್ಲಿ ಶುಕನು ಪರೀಕ್ಷಿತನಿಗೆ ಹೇಳಿದ ಭಾಗವತದೊಳಗಣ ಪ್ರಹ್ಲಾದಚರಿತ ವು ವರ್ಣಿತವಾಗಿದೆ. ಗ್ರಂಥದ ಉತ್ಕೃಷ್ಟತೆಯನ್ನು ಕವಿ ಈರೀತಿಯಾ ಗಿ ಹೇಳಿದ್ದಾನೆ- ಹೊಸಕುಸುಮಪರಿಮಳವನಳೆ ಭುಂ | ಜಿಸುವವೊಲು ಜೀಮೂತನಾದಗ | ಳೆಸೆಯೆ ಶಿಖಿ ಕುಣಿವವೊಲು ನೈದಿಲ ಮುಗುಳು ಚಂದ್ರಮನ || ಮುಸುಡನೀಕ್ಷಿಸುವಂತೆ ಬೆಲ್ಲದ | ರಸವ ಡಗೆಹತ್ತಿ ದವ ಸವಿವವೊ | ಲೆಸೆವುದೀಹರಿಭಕ್ತಿಸಾರದ ಸುಖವು ಕೇಳ್ದೆರಿಗೆ || ಗ್ರಂಥಾವತಾರದಲ್ಲಿ ನರಸಿಂಹಸ್ತುತಿ ಇದೆ. ಬಳಿಕ ಕವಿ ಗಣಪತಿ, ಸರಸ್ವತಿ, ಲಕ್ಷ್ಮೀನಾರಾಯಣ, ನಂಜುಂಡ ಇವರುಗಳನ್ನು ಸ್ತುತಿಸಿ ದ್ದಾನೆ. ಗ್ರಂಥಾಂತ್ಯದಲ್ಲಿ ಕೆಲವು ಪ್ರತಿಗಳಲ್ಲಿ ಈ ಗದ್ಯವಿದೆ - ಇದುವಿನಮದರವಿಂದಭವಪುರಂದರಾದಿಬೃಂದಾರಕಬೃಂದಬಂಧುರಮೌಳಿಘಟಿತ ಮಣಿಪ್ರಭಾನೀರಾಜಿತಶ್ರೀಮುಕುಂದಚರಣಾರವಿಂದಸೇವಾಪ್ರಭಾವಸಮಾಸಾದಿತಕವಿ ತಾವೈಭವ ಶ್ರೀನರಹರಿಕವಿವಿರಚಿತಕರ್ಣಾಟಕಪ್ರಹ್ಲಾದಚರಿತ್ರೆಯೊಳ್. ಈಗ್ರಂಧದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ- ಹಿರಣ್ಯಕಶಿಪುಪ್ರಹ್ಲಾದರ ಸಂವಾದ ಆದೊಡೆಲೆಪ್ರಹ್ಲಾದ ಕೇಳೈ | ಬೂದಿ ಮುಚ್ಚಿದ ಕೇಡವಾಮಧು | ಸೂದನನ ನಂಒದಿರು ತಿಮಿರದ ರವಿಯ ಸಖತನದ || ಗಾದೆಯಹುದಂತ್ಯದಲಿ ನಮ್ಮೊಳು | ವಾದಿಸದೆ ಬಿಡ ಬೇಗದಲಿ ಲ | ಕ್ಷ್ಮೀಧವನನೆಂದಸುರ ಬೋಧಿಸಿದನು ಕುಮಾರಂಗೆ || ಅರಸುತಿಹ ಲತೆ ಕಾಲ ತೊಡಕಲು | ಹರಿದು ಬಿಸುಡುವರುಂಟೆ ಸಿರಿ ಒರ | ಲರ'ದರ'ದು ಪದದೊದೆದು ನೂಕುವರುಂಟೆ ಹಸಿದಿರಲು || ಕರೆದು ಕ್ಷೀರಾನ್ನವನು ಬಡಿಸಲು ಹೊರಗೆ ಸೂಸುವರುಂಟೆ ಸಿರಿಧರ | ಸ್ಮರಣೆ ಬಾಯಿಗೆ ಬರಲು ನಾನದನೆಂತು ಬಿಡಲೆಂದ || 1 ಒಂದು ಓಲೆಯ ಪ್ರತಿಯಲ್ಲಿ ಸಂಧಿ 16, ಪದ್ಯ 1114 ಎಂದಿದೆ.