438
ಕರ್ನಾಟಕ ಕವಿಚರಿತೆ [17ನೆಯ ಪೂರ್ವಕವಿಗಳಲ್ಲಿ ಸೋಮ, ಭೀಮು, ಶಿವಭದ್ರ, ರುದ್ರ, ಮಲ್ಲಣ, ಬಿಲ್ಲಣ, ಮಯೂರ, ಚೋರ, ಮಳಯರಾಜ, ಭೋಜ, ವಲ್ಮೀಕಭೂತಿ (ವಾಲ್ಮೀಕಿ), ಭವಭೂತಿ ಇವರುಗಳನ್ನು ಸ್ಮರಿಸಿದ್ದಾನೆ. ಇನ್ನು ಕೆಲವರ ಹೆಸರುಗಳು ಹಿಂದೆಯೇ ಸೂಚಿಸಿವೆ.
ಇವನ ಗ್ರಂಥಗಳಲ್ಲಿ-
ಶಂಕರಸಂಹಿತೆ
ಇದು ವಾರ್ಧಕಪಟ್ಪದಿಯಲ್ಲಿ ಬರೆದಿದೆ. ನಮಗೆ ದೊರೆತ ಅಸಮಗ್ರಪ್ರತಿಯಲ್ಲಿ ಕಾಂಡ 7, ಸಂಧಿ 80, ಪದ್ಯ 4100 ಇವೆ. “ಆದಿಮಧ್ಯಾಂತವೆಲ್ಲಂ ನೋಡೆ ಕಂಕರನನಲ್ಲದನ್ಯವನೆಣಿಸದೀನಿಷ್ಕಳಂಕಶಂಕರಸಂಹಿತೆ” ಎಂದೂ “ಇದರೊಳ್ ವರ್ಣನೀಯನಾಗೌರೀಶಸುತನಹ ಸ್ಕಂದಂ” ಎಂದೂ ಕವಿ ಹೇಳುತ್ತಾನೆ. ಇದರಲ್ಲಿ ಕುಮಾರೋತ್ಪತ್ತಿ, ತಾರಕಾದಿವಧ, ದಕ್ಷಾಧ್ವರಧ್ವಂಸ, ಭಿಕ್ಷಾಟನ, ವಿಭೂತಿರುದ್ರಾಕ್ಷಪಂಚಾಕ್ಷರೀಮಹಿಮೆ ಸೋಮವಾರವ್ರತವೇ ಮುಂತಾದ ವ್ರತಗಳ ಮಹಿಮೆ ಇವುಗಳೆಲ್ಲಾ ಪ್ರತಿಪಾದಿತವಾಗಿವೆ, ಕವಿವರರಿಂದ ಕವಿತ್ವವನ್ನು ಗೋಪ್ಯವಾಗಿ ಹೇಳಿಸಿ ನಾನು ಹೇಳಿದೆನು ಎಂಬವರಂತೆ ಅಲ್ಲ; ನಾನೇ ಸ್ವಂತವಾಗಿ ಈ ಗ್ರಂಥವನ್ನು ರಚಿಸಿದೆನು- ಎಂದು ಕವಿ ಹೇಳುತ್ತಾನೆ. ಗ್ರಂಥಾವತಾರದಲ್ಲಿ ಶಿವಸ್ತುತಿ ಇದೆ. ಬಳಿಕ ಕವಿ ಪಾರ್ವತಿ, ಗಣೇಶ, ಸುಬ್ರಹ್ಮಣ್ಯ, ವೀರಭದ್ರ, ಸರಸ್ವತಿ ಇವರುಗಳನ್ನು ಹೊಗಳಿದ್ದಾನೆ. ಕಾಂಡಗಳ ಅಂತ್ಯದಲ್ಲಿ ಸುಜ್ಞಾನಮೂರ್ತೀಶಕರಜಾತರಾದ ಸುಗಟೂರ ಚಿಕ್ಕತಮ್ಮೆಂದ್ರಪುತ್ರವಿರ್ಮುಡಿತಮ್ಮಗಂ ವೆಂಕಟಾಂಬೆಗೊಗೆದ ಸರಸಂ ತ್ರಿವಿಧಕವೀಶ್ವರನು ಮುಮ್ಮಡಿತಮ್ಮ ನುರುಭಕ್ತ ಮಾಹೇಶ್ವರರ ಕೃಪೆಯೊಳೊರೆದ ಶಂಕರಸಂಹಿತೆ ಎಂದಿದೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ
ಸ್ಕಂದನವಿವಾಹ
ಪಿಡಿಯಿಂದ ಲಾಜೆಗಳ್ ಬಿಡದೆ ಚೆಲ್ಲುತ್ತಿರ | ಲ್ಕೊ ಡನೊಡನೆ ಮೌನಿಗಳ್ ಜಡೆ ಜಡಿದು ಸಡಿಲುತ್ತ | ಲಡಿಗಳೊಳ್ ತೊಡರುತಿರೆ ಪಿಡಿದು ದಂಡಗಳೆತ್ತಿ ನಡುದೋತ್ರಮುಡಿ ಜಾರಲು ||
ಎಡದ ಕೈಯಿಂದದಂ ಸಡಗರದೊಳಮರಿಸುತೆ ||