ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ

                    ಮುಮ್ಮಡಿ ತಮ್ಮ
                                                   481

ರಾಜನ ಮಗ ತಮ್ಮಪ್ಪರಾಜ; ಅವನ ಮಗ "ನಿಡುಜಡೆಯೊಳೊಗೆದು ಪೆನುಗೊಂಡೆ ಗೈತಂದ ವಿಗಡತುರುಕರನಿಯಿ'ದು ಕರ್ಣಾಟಕಾಧಿಪನ ಮೆಚ್ಚಿಸಿ ಅವನಿಂ ಗಂಡಸೆಂಡೆಯವ ಚಿಕರಾಯ ಪದ್ದು ಮೊದಲಾದ ವಿಖ್ಯಾತಬಿರುದುಗಳಾಂತು ಶಿವಕರುಣದಿಂದಲಂಧಕಗೆ ಕಣ್ಣಿತ್ತ” ಚಿಕ್ಕ ತಮ್ಮೇಂದ್ರ ; ಇವನ ಹೆಂಡತಿ ವೀರಮಾಂಬಿಕೆ ; ಮಗ ಇಮ್ಮಡಿ ತಮ್ಮಭೂಪಾಲ ; ಈತನು ಶತ್ರುರಾಜರನ್ನು ಓಡಿಸಿ ಕಪ್ಪವಾಂತನು, ಕರ್ಣಾಟಕಾಧಿಪತಿಯ ದ್ರೋಹಿಗಳ ಹರಿಸಿ ಪರಮಾಪ್ತನಾದನು, ಕನಕವೃಷವೀರಭದ್ರಧ್ವಜಗಳಂ ಪಡೆದನು; ಇವನ ಹೆಂಡತಿ ವೆಂಕಟಾಂಬೆ; ಮಗ ಕವಿ ಮುಮ್ಮಡಿತಮ್ಮ. ತನ್ನ ತಂದೆತಾಯಿಗಳು ಸುಜ್ಞಾನಮೂರ್ತೀಶಕರಜಾತರೆಂದೂ ತಾನು ತ್ರಿವಿಧ ಕವೀಶ್ವರನೆಂದೂ ಹೇಳಿಕೊಂಡಿದ್ದಾನೆ. ತನ್ನನ್ನು ನೋಡಿ ಮಾಹೇಶ್ವರರೂ ಬುಧರೂ ಶೈವವರಕವಿಗಳೂ " ಎಲೆರಾಜನೇ! ನಿನ್ನೊಳು ತ್ರಿವಿಧಲಿಂಗಾಂಗಸಮರಸತೆ, ಗುರು ಲಿಂಗಜಂಗಮಭಜನೆ, ಶಬ್ಬ ತರ್ಕ ವೇದಾಂತಪಾಂಡಿತ್ಯ, ಕರ್ಣಾಟಕಾಂಧ್ರಸಂಸ್ಕೃತಕ ವಿತೆ ನೆಲೆಗೊಂಡಿವೆ. ನೀನು ತೆಲುಗಿನಲ್ಲಿ 'ಶೈಶವಕ್ರೀಡೆಯೊಳ್' ರಾಜೇಂದ್ರಚೋಳಚರಿತೆಯನ್ನೂ, ' ಮೊಳೆವಿಾಸೆಯೊಗೆವಂದು' ಕುಮಾರಾರ್ಚುನೀಯವನ್ನೂ, 'ತುಂ ಬುಜವ್ವನದೆ' ಸೌಂದರೇಶಚರಿತೆಯನ್ನೂ ರಚಿಸಿದೆ. ಬಳಿಕ 'ಆಶುವಾಗಿ' ಕನ್ನಡದಲ್ಲಿ ಯಕ್ಷಗಾನರೂಪದಿಂದ ನಂ. .... ನ್ನೂI 'ವಯೋವಿಶೇಷದೆ' ಸಂಸ್ಕೃತದಲ್ಲಿ ಕೌಮುದೀವ್ಯಾಖ್ಯಾನ, ರಸಿಕಮನೋರಂಜನ ಇವುಗಳನ್ನೂ ಬರೆದೆ. ಶಿವದರ್ಪಣ ಎಂಬ ಮಹಾಗ್ರಂಥವನ್ನು ಬ್ರಾಹ್ಮಣರಿಂದ ಬರಸಿದೆ. ಶಂಕರಸಂಹಿತೆಯನ್ನು ಕರ್ಣಾಟಕಭಾಷೆಯಲ್ಲಿ ರಚಿಸಿ ನಮ್ಮನ್ನು ಆನಂದಪಡಿಸು. ಕಾಳಿದಾಸನ ವಿಭಕ್ತಿ, ವಾಲ್ಮೀಕಿಯ ವಿವರ, ಪಾಲ್ಕುರಿಕೆ ಸೋಮನ .....I ವ್ಯಾಸನ ವಿಸ್ತಾರ, ಹೊನ್ನನ ಸುವರ್ಣರೇಖೆ, ಮಾಯಿದೇವನ ವಿಚಿತ್ರ, ಮಾಘನ ಧ್ವನಿ, ಮಳೆಯರಾಜನ ಧಾರಾ ಶುದ್ದಿ, ಮನಸಿಜನ ಅಲಂಕಾರ, ಇಷ್ಟೂ ಈಶನ ಕೃಪೆಯಿಂದ ನಿನ್ನಲ್ಲಿವೆ” ಎಂದು ಹೇಳಲು ಈ ಗ್ರಂಥವನ್ನು ಬರೆದಂತೆ ಹೇಳುತ್ತಾನೆ.

     ಕವಿಯ ತಾತನಾದ ಚಿಕ್ಕರಾಯ ಎಂಬ ಬಿರುದನ್ನು ಪಡೆದ ಚಿಕ್ಕ ತಮ್ಮೇಂದ್ರನು 1632ರ ವರೆಗೆ ಆಳಿದಂತೆ ತಿಳಿವುದರಿಂದ ಕವಿಯ ಕಾಲವು ಸುಮಾರು 1665 ಆಗಬಹುದು.

1. ಈ ಸ್ಥಳಗಳಲ್ಲಿ ಗ್ರಂಥವು ತ್ರುಟಿತವಾಗಿದೆ. 2 Mysore II, 75