ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

466

                       ಕರ್ಣಾಟಕ ಕವಿಚರಿತೆ                [17 ನೆಯ
1704) ಮಂತ್ರಿಯಾಗಿದ್ದ ಚಿಕ್ಕುಪಾಧ್ಯಾಯನ (1672) ತಂದೆ. ಚಿಕ್ಕುಪಾಧ್ಯಾಯನು ತನ್ನ ಶ್ರೀರಂಗಮಾಹಾತ್ಮ್ಯದ ಆದಿಭಾಗದಲ್ಲಿ ಈತನನ್ನು ಕವಿಕ್ಷ್ಮಾಪಾಲಕ ಎಂದು ಹೊಗಳಿದ್ದಾನೆ.

ಇವನ ಗ್ರಂಥ ಸಾತ್ವಿಕಬ್ರಹ್ಮವಿದ್ಯಾವಿಲಾಸ ಇದು ಗದ್ಯರೂಪವಾಗಿದೆ; ವಿಶಿಷ್ಟಾದ್ವೈತಸಿದ್ದಾಂತವನ್ನು ಬೋಧಿಸುತ್ತದೆ. ಇದನ್ನೇ ಚಿಕ್ಕುಪಾಧ್ಯಾಯನು ಚಂಪೂಗ್ರಂಥವಾಗಿ ಬರೆದಿದ್ದಾನೆ. ಆರಂಭದಲ್ಲಿ ಈ ಶ್ಲೋಕವಿದೆ ವ್ಯತನೋದ್ರಂಗರಾಜಾರ್ಯಃ ಕುದೃಷ್ಟೀಭಪರಾಂಕುಶಂ| ಸಾತ್ವಿಕಬ್ರಹ್ಮವಿದ್ಯಾದಿವಿಲಾಸಂ ನಾಮ ವಿಶ್ರುತಂ || “ಗುರುತತಿಗೆರಗಿ ಒರೆವೆನು ಕನ್ನಡದಿಂದಂ”ಎಂದು ಹೇಳಿ ಗ್ರಂಥ ವನ್ನು ಆರಂಭಿಸಿದ್ದಾನೆ.

ರಾಯಸದ ಲಕ್ಷ್ಮೀಪತಿ, 1662 ರನ್ನನ (993) ಅಜಿತನಾಥಪುರಾಣದ ಒಂದುಪ್ರತಿಯ ಕೊನೆಯಲ್ಲಿ ಆ ಪ್ರತಿಯನ್ನು ಮೈಸೂರು ಚಿಕ್ಕದೇವರಾಜನಿಗಾಗಿ ಈತನು ಶಕ 1585 ಶೋಭಕೃದ್ವರ್ಷದಲ್ಲಿ, ಎಂದರೆ 1662 ರಲ್ಲಿ, ಬರೆದಂತೆ ಹೇಳುತ್ತಾನೆ. ಅಲ್ಲದೆ ಮೂರು ನಾಲ್ಕು ಕಂದಪದ್ಯಗಳನ್ನು ಬರೆದಿದ್ದಾನೆ. ಇವುಗಳನ್ನು ನೋಡಿದರೆ ಈತನು ಕವಿಯಾಗಿದ್ದಂತೆ ತೋರುತ್ತದೆ. ಈ ಪದ್ಯಗಳಲ್ಲಿ ಒಂದನ್ನು ಕೆಳಗೆ ಬರೆಯುತ್ತೇವೆ- ಕರವೇಗದೊಳತಿಚಿಂತಾ|ಭರದಿಂದಾಲಸ್ಯದಿಂದಹಂಕಾರದೊಳಂ | ಬರೆದ ಲಿಪಿಯಲ್ಲಿ ತಪ್ಪಿರ|ಲರೆದರ್ ತಿರ್ದ್ದುವುದು ಕ್ಷಮಿಪುದೆನ್ನವಗುಣಮಂ || ಮುಮ್ಮಡಿ ತಮ್ಮಸು 1665 ಇವನು ಶಂಕರಸಂಹಿತೆಯನ್ನೂ ಒಂದು ಯಕ್ಷಗಾನವನ್ನೂ ಬರೆದಿದ್ದಾನೆ. ಸಂಸ್ಕೃತದಲ್ಲಿಯೂ ತೆಲುಗಿನಲ್ಲಿಯೂ ಕೆಲವು ಗ್ರಂಥಗಳನ್ನು ಬರೆದಿರುವಂತೆ ತಿಳಿಯುತ್ತದೆ. ಈತನು ವೀರಶೈವಕವಿ; ರಾಜವಂಶಕ್ಕೆ ಸೇರಿದವನು. ತನ್ನ ಪರಂಪರೆಯನ್ನು ಹೀಗೆ ಹೇಳಿಕೊಂಡಿದ್ದಾನೆ- ಸುಜ್ಞಾನಮೂರ್ತಿದೇಶಿಕನ ಕರುಣೆಯಿಂದೆಸೆವ ಸುಗಟೂರವಂಶದ ದೇವಯ