ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ) ರಂಗರಾಜ

ಯೆನೆ ಸೋರ್ವಾರಸಧಾರೆಯಂ ಸವಿದು ಚೀತ್ಕಾರಸ್ಸನಂ ಪೊಣ್ಮೆ ತ | ನ್ನಿನಿಯಳಂ ಕರೆದಿತ್ತದಂ ತಣಿಪುಗುಂ ಕೀರಾ೪ ಮಾಕಂದದೊಳ್ ||

                                                       ಕೊಳ
ಸ್ಫುರಿತಶಿಳೀಮುಖಮುತ್ಪುಳ | ಸರಕ್ತಕಂಜಾತಯುತಮುಪಾತ್ತ ಕಬಂಧಂ |
ಶರಭಂಗಾನ್ವಿತಮಿರದನು | ಕರಿಸಿದುದಾಬನದ ತಿಳಿಗೊಳಂ ಕೊಳುಗುಳಮಂ ||
                                                      ಜಿಂಕೆ

ನಡುಗುವ ಕಾಲ್ಗಳುಬ್ಬರಿಪ ಕಿಬ್ಬರಿಗಳ್ ಪೊಡೆವಳ್ಳೆ ಬಾಯ್ಗಳಿ೦ | ಕಡೆಗುಗುತಿರ್ಪ ದೂರ್ವೆ ಬೆದರ್ದೀಕ್ಷಿಪ ನೀಳ್ದಲರ್ಗಣ್ ಪೊದಳ್ದ ಸುಯ್ ||

ಬಿಡದಿರೆ ನೀಳ್ದ ಕೊಡಲುಗೆ ಬತ್ತಿದ ಬಾಯ್ವೆರಸಲ್ಲಿ ಭೀತಿ ಕೆ | 

ಯ್ಗುಡೆ ಕಡುವೇಗದಿಂದೆ ಕೊಣಕಿಟ್ಟುದು ವನ್ಯ ಮೃಗೀಕದಂಬಕಂ ||

                                                    ಹಂದಿ
ಕುಸಿದ ಸಿರಂ ಕೆಲಕ್ಕೊಲೆದ ಬಲ್ಮುಸುಡುಬಿ౯ದ ಮೆಯ್ಯ ರೋಮಮಾ | 

ಪೆ౯ಸೆವ ಮನಂ ಮರಲ್ದ ಕಿವಿ ಮಿಳ್ಳಿರಿದಾಡುವ ಬಾಲಮುವಿ౯ ಪೊ ||

ಯ್ವುಸಿರೊಡನೆಳ್ದಿ ರ್ಬೆ ಬಲಿದ ಗೋಣ್ ಕಿಡಿಪಾಳುವ ದಾಡೆ ತಳ್ತಗು | 

ನಿ౯ಸಿ ಮಲೆದುರ್ಕಿ ಗರ್ಜಿಸಿ ಕರಂ ಪರಿತಂದುದು ಪ೦ದಿ ಕಾಯ್ಪಿನಿಂ |

                                  - ಶಿವಾರ್ಜುನರ ಯುದ್ಧ

ಪಿಡಿಯ ಕರಾಗ್ರಮಂ ಬಿಡಿಸುತೌಂಕೆ ಬಿದಿರ್ಚುತೆ ತಳ್ಕೆಗೆಯ್ಯೆ ಮೆ | ಯ್ಗೊಡಪಿ ತೆರಳ್ಚುತವ್ವಳಿಸೆ ಸಿಲ್ಕದೆ ಲ೦ಘಿಪ ಸಂಚಿನಿಂದೆ ಪೊ ||

ಯ್ದೊಡೆ ಪೊಳೆವಾರ್ಪಿನಿಂದೆಳಗೆ ಚಿಮ್ಮುವ ಬಾಹುಗಳಿಂದೆ ಕಂಠಮಂ | 

ತೊಡರೆ ಕುನುಂಗಿ ಪೈಸರಿಪ ಬಿನ್ನಣಮೊಪ್ಪೆ ಕಡಂಗಿ ಕಾದಿದರ್ ||

                                               ನೀಚ
ಪಿರಿದಾಯಾಸದೆ ಗುಣಮಂ | ದೊರೆಕೊಳಿಸಿದೊಡಂ ಖಲಂಗೆ ಗುಣಮಂ ಪಶ್ಚಾ |
ತ್ಕರಿಸಿ ಗುಣಿಯಂ ವಿಭೇದಿಪ | ಪರಿತೀಕ್ಷ್ಣ೦ಗೆ ಸೂಚಿಯಂತಿರೆ ಸಹಜಂ ||
                                         ರಂಗರಾಜ ಸು, 1660, 
   ಈತನು ಸಾತ್ವಿಕಬ್ರಹ್ಮವಿದ್ಯಾವಿಲಾಸವನ್ನು ಬರೆದಿದ್ದಾನೆ. ಇವನು ಶ್ರೀವೈಷ್ಣವಕವಿ ; ಮೈಸೂರು ದೊರೆಯಾದ ಚಿಕ್ಕದೇವರಾಜನಲ್ಲಿ (1672-57)