ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

456 ಕರ್ಣಾಟಕ ಕವಿಚರಿತೆ [17 ನೆಯ ಅಮೃತಾಂಬೆ. ಇವನು ಬಹಳ ಪರಾಕ್ರಮಶಾಲಿಯಾಗಿಯೂ ವಿದ್ವತ್ಪ್ರ ಭುವಾಗಿಯೂ ಇದ್ದನು. ಸ್ವತಃ ಹಲವು ಸಂಸ್ಕೃತ ಕರ್ಣಾಟಕ ಗ್ರಂಥ ಗಳನ್ನು ಬರೆದಿರುವುದಲ್ಲದೆ ಅನೇಕ ವಿದ್ವಾಂಸರಿಗೆ ಪ್ರೋತ್ಸಾಹಕನಾಗಿಯೂ ಇದ್ದನು, ಇವನ ಪ್ರೋತ್ಸಾಹದಿಂದಲೇ ತಿರುಮಲಾರ್ಯ, ಸಿ೦ಗರಾರ್ಯ, ಚಿಕ್ಕುಪಾಧ್ಯಾಯ, ಶೃಂಗಾರಮ್ಮ, ಹೊನ್ನಮ್ಮ, ವೇಣುಗೋಪಾಲವರಪ್ರ ಸಾದ, ತಿಮ್ಮಕವಿ, ಮಲ್ಲಿಕಾರ್ಜುನ, ಚಿದಾನಂದಕವಿ, ಮಲ್ಲರಸ ಮುಂ ತಾದ ಕವಿಗಳು ಕನ್ನಡದಲ್ಲಿ ಉಧಂಥಗಳನ್ನು ಬರೆದು ಆ ಭಾಷೆಗೆ ಉನ್ನತಿಯನ್ನುಂಟುಮಾಡಿದರು, ಈತನ ಪರಾಕ್ರಮಸೂತಕವಾದ ಈ ಯಂಶಗಳು ಚಿಕದೇವರಾಜಬಿನ್ನಪದಲ್ಲಿ ಹೇಳಿವೆ- ಉತ್ತರದೇಶದೊಳುದ್ವೃತ್ತ ಚರಿತ್ರನೆನಿಸಿ ಡಿಳ್ಳಿಯನಾಡನನಿತುಮಂ ಜಳ್ಳುಗೆಯ್ದು ವಿಜಯಾಪುರದರಸಂ ಜಯಿಸಿ ಅವರ ನಾಡುಬೀಡುಗಳಂ ಕೊಂಡು ಗೋಲಕೊಂಡೆಯ ವನಂ ಬಂಡುಗೆಯ್ದು ಕನ್ನಡನಾಡಂ ಪೊಕ್ಕ ಶಿವಾಜಿಯಂ ಆಜಿರಂಗದೊಳೋಜೆಗೆಡಿಸಿ, ಅವನ ಸೇನಾನಿಗಳೊಳ್ ಜೈತಜಿಕಾಟಕರನಂ ಘೋಟಕಖುರಪುಟಂಗಳಿ೦ ತೊತ್ತಳದುಳೆಸಿ, ಮತ್ತಮಾದಾದಜಿಕಾಕಡೆಯೆನಿಪನ ಅಣಲಂ ಕೊಯ್ದು ಆನಂದಲೆಯಂ ಮಂದಿ ಯೊಳ್ ಮೆರೆಯಿಸಿ, ಆರಭಸದಿಂ ಶಂಭೋಜಿಯಂ ಭಯಾಣ೯ವದೊಳ್ ಮುಳು೦ ಗಿಸಿ, ಅವರಿಗೆ ನೆರವಾಗಿ ಬಂದ ಎಕ್ಕೋಜಿಯ ಒನ್ಮವಂ ಸಾಕುಮಾಡಿ, ಅವನ ಮಹಾ ಪ್ರಧಾನನೆನಿಸುವ ಎಸವಂತರಾವುವ ನಾಸಾಚ್ಛೇ ದನ೦ಗೆಯ್ದು, ಮತ್ತಮಾಶಂಭೋಜಿಗೆ ಕಪ್ಪವಿತ್ತು ಪೆ೦ಪುಗೆಯ್ದ ಗೋಲಕೊಂಡವಿಜಯಾಪುರದವರಂ ಕೇಣಂಗೊಂಡು, ಅವರನಂಡಲೆವುದರ್ಕೆ ಡಿಳ್ಳಿಯಾಳ್ವ ಮಹಾಪಾದುಶಾಹನೆನಿಸುವ ಅವರಂಗಶಾಹನಂ ಬರಿಸಿ ಅವನಿಂದವರಿರ್ವರ ದೇಶಕೋಶಂಗಳಂ ಕವದ್ರು ಕೈಸೆಳೆಗೊಂಡು, ಮತ್ತಮಾ ಮರಾಟರಾಟೋಪಮಂ ನಂಬಿ ಮುಂಬರಿದು ಪೊಣರ್ದ ಮೋರಸ ತಿಗುಳ ಕೊಡಗ ಮಲೆಯಾಳನಾಡ ಮನ್ನೆಯರ೦ ಬನ್ನಂಬಡಿಸಿ, ಈತೆರದೊಳೆಣ್ಣೆಸೆಯಂ ಗೆಲ್ಲು ಸುಖಸಂ ಕಧಾವಿನೋದದಿಂದಿರ್ದಂ, ಪೂರ್ವ ದಿಗ್ವಿಜಯಯಾತ್ರಾ ವಿತ್ರಾಸಿತ ಚೇದಮಂಗಲೋಪಾ೦ತಕಾಂತಾರೋಪ ಗೂಢವ್ಯೂಢಸೇನಾಭಿಗುಪ್ತ ಪಾಂಡ್ಯ ಸೇನಾಧಿಪ ಸಂಗರಕಿರೀಟವೆಂಕಟಕೃಷ್ಣಶಿಬಿರ ಸರ್ವಸ್ವಹರಣಸಮಸಮಯಸಮೂಕ್ರಾಂತ ಮಳಲಿಪರಮತ್ತಿ ಶಾಲೆಯಚೇದಿವಂಗಲ ಕೊಂಗುಧಾರಾಪುರಾದಿಪಾ೦ಡ್ಯನೃಪದುರ್ಗಮದುರ್ಗಸ್ತೋಮ೦ ; ಗಂಭೀರೋದ್ದತ ಪರಿಘಾವರಣಭೀಷಣಶತಘ್ನೀ ಶತಸಂಕುಲಮತ್ತ ಮಾವಳಿಸೇನಾವಳೀ ವರ್ಮಿತಧರ್ಮ