ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೪೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


459 ಶತಮಾನ] ಚಿಕ್ಕದೇವರಾಜ. ಪುರೀಪ್ರಸಭಾಕ್ರಮಣಶ್ರವಣನಿರ್ಜನೀಕೃತ ಕೆಂಗೇರಿವಾಮಲೂರುಬೇವುಹಳ್ಳಿಬೈರನೆತ್ತ ಕುನ್ನ ತ್ತೂರ್‌ಮುಖ್ಯ ದುರ್ಗ ವರ್ಗ ನಿರಾಯಾಸಾಕ್ರಮಣನಿರ್ವೃತನಿಜಸೈನಿಕಸಮ ಹಂ; ದಕ್ಷಿಣದಿಗ್ವಿಜಯಯಾತ್ರಾವಿತ್ರಾಸಿತಪಲಾಯಿತಪಾಂಡ್ಯ ಬಲಾನುಧಾವನಶ್ರಾ೦ ತನಿಜಬಲವಿಶ್ರಾಂತಿಸ್ತಾನೀ ಕೃತಜಲಧಿವೇಲಾತಮಾಲಾರಣ್ಯ೦; ಪಶ್ಚಿಮದಿಗ್ವಿಜಯ ಪ್ರಸ್ತಾನಭೇರೀರವಾ ಕರ್ಣನಸಂಭ್ರಾ೦ತದುರ್ದಾಂತಹುಶಾನಖಾನಸನಾಥಕೆಳದಿನೃಪ ಸಮರ್ಪಿತಸರ್ವಸ್ವನಿರ್ವಾಪಿತಕೋಪ೦; ಉತ್ತರದಿಗ್ವಿ ಜಯಸಮಯಾಭಿಯಾತಕುತು ಪಶಾಹವಾಹಿನೀವಿಮರ್ದನಕ್ಷಣಾ ಕ್ರಾಂತಕಂದಿಕೆರೆಚಿಕ್ಕನಾಯಕನಹಳ್ಳಿ ಹೊನ್ನವಳ್ಳಿ ಸಾರತವಳ್ಳಿ ತುರುಗೆರೆ ಪ್ರಮುಖದುಗ್ರ೯ಹಪ್ರಾಕಾರವಾರಂ, ಜಡಕನದುರ್ಗ ಹರಾದ್ಗ್ರ ಹಣವೇಳಾನಿಖಾತಸುರಂಗಮುಖಾನಲೋತ್‌ ಕ್ಷಿಪ್ರ ಗಂಡೋಪಲವಾತನಿರ್ದೂತಬಿಜ್ಜೆನರ ಮದ್ದಗಿರಿಚೆನ್ನ ರಾಯದುರ್ಗ ವೀರಣದುರ್ಗಾದ್ಯಸಂಖ್ಯ ದುರ್ಗವರ್ಗಾಕ್ರಮಣವಸರಾ ವನತಸಾಮಂತನೃ ಸಾಲಳಿಮೋಣಿಘೃಣಿನೀರಾಜಿತಪದರಾಜೀವಂ; ಸಾಹಜಿಮುಖಮ ರಾಟನೃಪರಾಜಧಾನೀಕೃತಾಭಂಗುರಬೆಂಗಳೂರ್‌ಹರಣನಿಪ್ಪ್ರಾಣಿತ ಶಂಭುಜಿಸಾಹಜಿ ಸಂತಜಿಹರಜೆಪ್ರಮುಖಮಹಾರಾಷ್ಟ್ರ ನೃಪಾಲಚಾಲಂ, ಶ್ರೀಮದಪ್ರತಿಮವೀರನರಪತಿ ಶ್ರೀಚಿಕದೇವಮಹಾರಾಜಂ. ರಸಿಕಜನಕರ್ಣರಸಾಯನೀಕೃತಸಂಗೀತವಿಸ್ತರಂ, ಸಾಹಿತ್ಯ ವಿದ್ಯಾ ನಿಕಶಸ್ತರಂ ಎಂಬುದರಿಂದ ಈತನಿಗೆ ಸಂಗೀತ, ಸಾಹಿತ್ಯ ಎರಡರ ಲ್ಲಿಯೂ ಪಾಂಡಿತ್ಯವುಂಟೆಂಬುದು ತಿಳಿಯುತ್ತದೆ. ಇವನು ಮೇಲುಗೋಟೆ ಯ ನಾರಾಯಣಸ್ವಾಮಿಯ ಭಕ್ತನು, ಇವನ ವಿಷಯವಾಗಿ ಚಿಕದೇವ ರಾಜವಿಜಯ, ಚಿಕದೇವರಾಜವಂಶಾವಳಿ, ಚಿಕದೇವರಾಜಯಶೋಭೂಷಣ, ಚಿಕದೇವರಾಜವಂಶಪ್ರಭಾವ ಮುಂತಾದ ಗ್ರಂಥಗಳು ಹುಟ್ಟಿವೆ. ಇವನ ಗ್ರಂಥಗಳಲ್ಲಿ _1 ಚಿಕದೇವರಾಜಬಿನ್ನಪ. ಇದು ಗದ್ಯಗ್ರಂಥ; ಮೇಲುಗೋಟೆಯ ನಾರಾಯಣಸ್ವಾಮಿಯಲ್ಲಿ ಕವಿ ಅರಿಕೆಮಾಡಿದ 30 ಬಿನ್ನಪಗಳನ್ನು ಒಳಗೊಂಡಿದೆ. ಇದರಲ್ಲಿ ವಿಶಿ ಶ್ಟಾದ್ವೈತಮತದ ಸಾರವು ನಿರೂಪಿಸಲ್ಪಟ್ಟಿದೆ. ಈ ಗ್ರಂಥದವಿಷಯವಾಗಿ ಕವಿ ಹೀಗೆ ಹೇಳುತ್ತಾನೆ:- ಪ್ರಜೆಗಳ್ಗೆ ಪರಗತಿಯಂ ಸಂಪಾದಿಸವೇರ್ಪುದೆಂದಾರಯ್ದು 58