ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ

ಶತಮಾನ]

                     ಚಿಕ್ಕು ಪಾಧ್ಯಾಯ
ಚಿಕ್ಕದೇವರಾಜ, ಕಂಠೀರವರಾಜ. ದೇವರಾಜನು.  ಆಳಿದಬಳಿಕ ದೊಡ್ಡದೇವರಾಜನ ಮಗ ಚಿಕ್ಕದೇವರಾಜನು ಪಟ್ಟಕ್ಕೆ ಬಂದನು.

ಈ ಚಿಕ್ಕದೇವರಾಜನು ಪೂರ್ವದಿಕ್ಕಿನಲ್ಲಿ ಚೊಕ್ಕಲಿಂಗನನ್ನು ಸೋಲಿಸಿ ಅವನ ಆನೆಕುದುರೆಗಳನ್ನು ಹಿಡಿದುಕೊಂಡು ಪರಮತ್ತಿ, ಮಳಲಿ, ಮಟ್ಟಾಂಜಟ್ಟಿ, ಶಾದ ಮಂಗಲ, ಅರಿಯಲೂರು, ತೊರೆಯೂರು, ಅನಂತಗಿರಿ ಕುಂತೂರು ಅಂದೂರು, ಅಕ್ಕಾರಡ್ಡಿಯವಿರೋದಕೋಟೆ ಇವುಗಳನ್ನೂ, ಪಶ್ಚಿಮದಲ್ಲಿ ಇಕ್ಕೇರಿದೊರೆಯನ್ನು ಸೋಲಿಸಿ ಅರಕಲಗೂಡು, ಅಂಗಡಿ, ನುಗಿಹಳ್ಳಿ, ಸಕಲೇಶಪುರ, ಬೇಲೂರು ಇವುಗಳನ್ನೂ , ಉತ್ತರದಲ್ಲಿ ಹೊನ್ನವಳ್ಳಿ, ಕಂಡಿಕೆರೆ, ಭೂತಿಪುರ, ಹಂದನಕೆರೆ, ಜಡಕನಗಿರಿ, ತುಮ ಕೂರು, ಮದ್ದಗಿರಿದುರ್ಗ, ಚೆನ್ನ ರಾಯದುರ್ಗ, ಮಿಡಿಗೇಸಿ, ಹೊಳವನಹಳ್ಳಿ ಇವು ಗಳನ್ನೂ, ದಕ್ಷಿಣದಲ್ಲಿ ತೊದೆನಾಡನ್ನೂ ಸ್ವಾಧೀನಪಡಿಸಿಕೊಂಡನು. ಕೌಂಡಿನೀತೀರದಲ್ಲಿ ತಂದೆಯ ಬೃಂದಾವನದಬಳಿ ಪರವಾಸುದೇವದೇವಸ್ಥಾನವನ್ನು ಕಟ್ಟಿಸಿದನು. ಈ ಕವಿ ಪದ್ಯರೂಪವಾಗಿಯೂ ಗದ್ಯರೂಪವಾಗಿಯೂ ಅನೇಕಗ್ರಂಥಗಳನ್ನು ಬರೆದಿದ್ದಾನೆ. ಕನ್ನಡದಲ್ಲಿ ಈತನಷ್ಟು ಗ್ರಂಥಗಳನ್ನು ಮತ್ತಾವ ಕವಿಯೂ ಬರೆದಿಲ್ಲವೆಂದು ತೋರುತ್ತದೆ. ಇವುಗಳಲ್ಲಿ ಹಲವನ್ನು ಚಿಕ್ಕ ದೇವರಾಜನ ಆಜ್ಞಾನುಸಾರವಾಗಿ ಬರೆದಂತೆ ಹೇಳುತ್ತಾನೆ. ಇವನ ಗ್ರಂಥಗಳಲ್ಲಿ

          1 ಕಮಲಾಚಲಮಹಾತ್ಯ್ಮ 

ಇದು ಚಂಪೂರೂಪವಾಗಿದೆ; ಆಶ್ವಾಸ 16; ಕಂದ 2591,ವೃತ್ತ 1161, ವಚನ 279, ಒಟ್ಟು 4031.ಇದರಲ್ಲಿ ಭವಿಷ್ಯೋತ್ತರಪುರಾಣದ ತೀರ್ಧಕಾಂಡದಲ್ಲಿ ಹೇಳಿರುವ ಕಮಲಾಚಲದ ಅಥವಾ ಹಿಮವದ್ಗೋಪಾಲ ಸ್ವಾಮಿಬೆಟ್ಟದ ಮಹಾತ್ಯ್ಮವು ವರ್ಣಿತವಾಗಿದೆ. ಈ ಕಾವ್ಯದ ಉತ್ಕೃಷ್ಟ ತೆಯನ್ನು ಕವಿ ಈ ಪದ್ಯಗಳಲ್ಲಿ ಹೇಳಿದ್ದಾನೆ.... ಇನಿವಾಲಂ ಕೆನೆಗಟ್ಟಿ ಕಾಸಿ ಸವಿದಂತಿಂಪಾಗಿ ಕೂರ್ತಿರ್ಪ ಜ | ವ್ಪನೆಯಂ ಸೋಂಕಿದಮಾಳ್ಕೆ ರನ್ನದೊಡವಂ ತೊಟ್ಟಂತೆ ಸೈತಾಗಿ ಚಂ || ದನದಣ್ಪಂ ಪಡೆದಂತೆ ಚೂತಲತೆಯಂ ಕಂಡಂತೆ ಬೆಳ್ದಿಂಗಳೊಳ್ | ವಿನಯಂಬೆತ್ತೆಸೆವಂತೆ ಕನ್ನಡಿಸುವೆಂ ಕಂಜಾದ್ರಿಮಾಹಾತ್ಯ್ಮಮಂ || ರಸಭಾವಂ ಪಿರಿದಾಗೆ ಬಂಧದೆಸಕಂ ಸೈತಾಗೆ ಶಬ್ದಾರ್ಧದೊ |

ಳ್ಪಸಕೃದ್ವೈಭವಮಾಗೆ ನುಣ್ಣುಡಿಗಳೊಪ್ಪಂಬೆತ್ತು ಚೆಲ್ವಾಗೆ ಸಂ ||